ಈ ಉಚಿತ ಪಡಿತರ ಯೋಜನೆಯಲ್ಲಿ, ಅನೇಕ ಅನರ್ಹರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಮತ್ತು ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ದೊಡ್ಡ ಹೆಜ್ಜೆ ಇಟ್ಟಿದೆ. ಹಾಗಿದ್ರೆ, ಈ ಹೊಸ ನಿಯಮಗಳು ಏನು? ಇಲ್ಲಿದೆ ನೋಡಿ..
Ration Card: 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ಬಡವರಿಗೆ ಉಚಿತ ಪಡಿತರ ಯೋಜನೆಯನ್ನು ಪ್ರಾರಂಭಿಸಿತು. ಕೇಂದ್ರದ ಈ ಯೋಜನೆ ಸೆಪ್ಟೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ನೀವೂ ಪಡಿತರ ಚೀಟಿದಾರರಾಗಿದ್ದರೆ, ಪಡಿತರ ಚೀಟಿದಾರರಿಗೆ ಸಂಬಂಧಿಸಿದ ಈ ಸುದ್ದಿಯನ್ನು ನೀವು ಓದಲೇಬೇಕು.
Ration Card Rules : ಅನರ್ಹ ಪಡಿತರ ಚೀಟಿದಾರರಿಗೆ ಕಾರ್ಡ್ ಸರೆಂಡರ್ ಮಾಡಲು ಅಥವಾ ರದ್ದುಪಡಿಸಲು ಸರ್ಕಾರ ಮನವಿ ಮಾಡಿದೆ. ಕಾರ್ಡ್ ಸರೆಂಡರ್ ಮಾಡದಿರುವವರು ಸರ್ಕಾರದ ಪರಿಶೀಲನೆಯಲ್ಲಿ ಒಂದು ವೇಳೆ ಸಿಕ್ಕಿಬಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಾಗಿದೆ. ಇದರೊಂದಿಗೆ ಇದುವರೆಗೆ ಅವರು ತೆಗೆದುಕೊಂಡಿರುವ ಪಡಿತರವನ್ನೂ ಕೂಡ ಹಿಂಪಡೆಯಲಾಗುವುದು ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.