Rohit Sharma Abuse Washington Sundar: ಭಾನುವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಆಟಗಾರನನ್ನು ನಿಂದಿಸಿದ್ದರು. ಕೊನೆಯ ಕೆಲವು ಓವರ್‌ಗಳಲ್ಲಿ ಪಂದ್ಯ ಕೈ ತಪ್ಪುತ್ತಿರುವುದನ್ನು ಕಂಡು ನಾಯಕ ರೋಹಿತ್ ಶರ್ಮಾ ಸಿಟ್ಟುಗೊಂಡಿದ್ದು, ಪರಿಣಾಮ ಮೈದಾನದಲ್ಲಿಯೇ ಆಟಗಾರನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.