ಪ್ರೀತಿ ಅಂದ್ರೆನೆ ಹಾಗೆ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡುವೆಯೂ ಬೇಡ, ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಫರ್ಶದ ಸಿಂಚನ ಸಾಕು ಎನಿಸುತ್ತದೆ. ಬಿಟ್ಟಿರಲಾದ ತವಕ, ಏನು ಬೇಡವೆನ್ನುವ ಭಾವ, ಹಸಿವಿಲ್ಲದ ಅದೆಷ್ಟೋ ಘಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತದೆ.
Valentine's Day: ಪ್ರತಿ ವರ್ಷ ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳ ದಿನದ್ದೇ ಸಂಭ್ರಮ ಸಡಗರ. ವ್ಯಾಲೆಂಟೈನ್ಸ್ ವೀಕ್ ನಲ್ಲಿ ಪ್ರತಿ ದಿನಕ್ಕೂ ಒಂದೊಂದು ಮಹತ್ವವಿದೆ. ಅವುಗಳಲ್ಲಿ ರೋಸ್ ಡೇ ಕೂಡ ಒಂದು.
ಫೆಬ್ರುವರಿ ತಿಂಗಳು ಬಂದಾಗಿದೆ ಹಾಗೂ ಫೆಬ್ರುವರಿ 7ನೇ ತಾರೀಖಿನಿಂದ ಪ್ರೀತಿಯ ಹಬ್ಬ 'ವ್ಯಾಲೆಂಟೈನ್ ಡೇ' ಆಚರಣೆ ಕೂಡ ಆರಂಭವಾಗಿದೆ. ಹಲವಾರು ಅಂಗಡಿ ಮುಂಗಟ್ಟುಗಳಲ್ಲಿ, ಮಾರುಕಟ್ಟೆ ಹಾಗೂ ಇ-ಕಾಮರ್ಸ್ ತಾಣಗಳಲ್ಲಿ ಈ ಹಬ್ಬದ ಕುರಿತ ಚಟುವಟಿಕೆಗಳನ್ನು ನೀವು ನೋಡಬಹುದಾಗಿದೆ. ಆದರೆ, ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಆಚರಿಸಿಕೊಳ್ಳುವ ಈ ಹಬ್ಬ ಏತಕ್ಕಾಗಿ ಆಚರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಇಲ್ಲ ಎಂದಾದಲ್ಲಿ ಇಲ್ಲಿದೆ ಈ ಹಬ್ಬ ಆಚರಣೆಯ ಹಿಂದಿನ ರೋಚಕ ಕಥೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.