ಸ್ಯಾಂಡಲ್ವುಡ್ ನಟ ಗಣೇಶ್, ಶಿಲ್ಪಾರಿಂದ ಮತದಾನ
ಮತದಾನ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ
RR ನಗರದ ಮೌಂಟ್ ಕಾರ್ಮಲ್ ಮತಗಟ್ಟೆಗೆ ಆಗಮನ
ಸ್ಯಾಂಡಲ್ವುಡ್ ನಟ ಗಣೇಶ್, ಶಿಲ್ಪಾರಿಂದ ಮತದಾನ
ಅಲ್ಲಿ ಸಾಲು ಸಾಲು ಸಮಸ್ಯೆಗಳನ್ನ ಹೊತ್ತುಬಂದವರು ಒಂದೆಡೆ ಕಾದು ಕುಳಿತಿದ್ರೆ, ಅತ್ತ ಉಭಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಎಲ್ಲರ ಗಮನಸೆಳೆದ್ರು. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಡಿಕೆಶಿಯನ್ನ ಹಾಡಿ ಹೊಗಳಿದ್ರೆ, ಆರ್.ಆರ್.ನಗರ ಶಾಸಕ ಮುನಿರತ್ನ ನಗು ನಗುತ್ತಲೇ ಮುನಿಸು ಹೊರಹಾಕಿದ್ರು. ಜ್ಞಾನ ಭಾರತಿ ಆವರಣದಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಹೇಗಿತ್ತು ಅನ್ನೋದರ ಝಲಕ್ ಇಲ್ಲಿದೆ ನೋಡಿ
Kusuma Hanumantharayappa : ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಎಲ್ಲಡೆ ಹೆಚ್ಚಾಗುತ್ತಿದೆ. ಕದನ ಕಲಿಗಳು ಕರುನಾಡ ಕುರುಕ್ಷೇತ್ರಕ್ಕೆ ಭರ್ಜರಿ ತಯಾರಿಯಲ್ಲಿದ್ದಾರೆ. ಸದ್ಯಕ್ಕೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದ್ದು, ಈ ಮಧ್ಯೆ ಆರ್ ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
Kusuma Hanumantharayappa : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಬಿಡುಗಡೆಯಾಗಿದೆ. ಇದರ ಜೊತೆ ಜೊತೆಗೆ ಐಪಿಎಲ್ 2023 ಆವೃತ್ತಿ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿವೆ. ಸದ್ಯ ರಾಜಕೀಯ ಹಾಗೂ ಕ್ರಿಕೆಟ್ ಪ್ರೇಮಿಗಳು ಸಖತ್ ಬ್ಯೂಸಿಯಾಗಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, 13 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
Congress complaint: ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಬುಧವಾರ ಭೇಟಿ ನೀಡಿ ಚುನಾವಣಾ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರಿಗೆ ಈ ದೂರು ನೀಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮ ಹೆಚ್, ಹನುಮಂತರಾಯಪ್ಪ, ಲಗ್ಗೆರೆ ಬ್ಲಾಕ್ ಅಧ್ಯಕ್ಷ ಅಮರನಾಥ್, ರಾಜರಾಜೇಶ್ವರಿ ನಗರ ಬ್ಲಾಕ್ ಅಧ್ಯಕ್ಷ ರಾಂಪುರ ನಾಗೇಶ್, ಯಶವಂತಪುರ ಬ್ಲಾಕ್ ಅಧ್ಯಕ್ಷ ಗೋಪಾಲ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರಿನ ಆರ್ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಡೆತನದ ನ್ಯಾಶನಲ್ ಎಲ್ ಯೂ ಪಬ್ಲಿಕ್ ಸ್ಕೂಲ್ಗೆ ಬಾಂಬ್ ಬೆದರಿಕೆ ಬಂದಿದೆ.. ನಿನ್ನೆ ರಾತ್ರಿ ಬಾಂಬ್ ಇಡೋದಾಗಿ ದುಷ್ಕರ್ಮಿಗಳು 3 ಇ-ಮೇಲ್ ಹಾಕಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ಶಿವಕುಮಾರ್ ಶಾಲೆ ಬಳಿ ಬಂದು ಮಾಹಿತಿ ಪಡೆದಿದ್ದಾರೆ. ಪ್ರಕರಣ ಸಂಬಂಧ ಆರ್.ಆರ್.ನಗರ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.
ಮುನಿರತ್ನ ಅವರ ನಿಜ ಸ್ವರೂಪ ಈಗ ಗೊತ್ತಾಗಿದೆ. ತಡವಾಗಿ ಅರಿವಾಗಿದೆ. ಅವರ ಸಿನಿಮಾ ಡೈಲಾಗ್ ಗಳು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿವಲ್ಲ, ನಿಜ ಜೀವನದಲ್ಲೂ ಬಳಕೆ ಆಗುತ್ತವೆ ಅಂತಾ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.