Russia-Ukrain War ನಿಂದ ನಿಮ್ಮ ಜೇಬಿನ ಮೇಲೆ ಏನು ಪ್ರಭಾವ?

Russia-Ukrain War - ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಗೋಧಿಯ ಜಾಗತಿಕ ಪೂರೈಕೆ ಅಪಾಯಕ್ಕೆ ಸಿಲುಕಿದೆ. ಏಕೆಂದರೆ ಚೀನಾ, ಭಾರತ ಮತ್ತು ರಷ್ಯಾ ವಿಶ್ವದ ಅತಿ ಹೆಚ್ಚು ಗೋಧಿಯನ್ನು ಉತ್ಪಾದಿಸುವ ರಾಷ್ಟ್ರಗಳಾಗಿವೆ. ಇದರೊಂದಿಗೆ, ಗೋಧಿ ರಫ್ತು ಮಾಡುವ ದೇಶಗಳಲ್ಲಿ ಉಕ್ರೇನ್ ಐದನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಗೋಧಿ ಬೆಲೆ ಹೆಚ್ಚಾಗತೊಡಗಿದೆ.

Written by - Nitin Tabib | Last Updated : Mar 5, 2022, 12:23 PM IST
  • ಭಾರತ ಸೇರಿದಂತೆ ವಿಶ್ವಾದ್ಯಂತ ಗೋಧಿ ಬೆಲೆಯಲ್ಲಿ ಏರಿಕೆ
  • ಚೀನಾ ಹಾಗೂ ಭಾರತದ ಬಳಿಕ ರಷ್ಯಾ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಷ್ಟ್ರವಾಗಿದೆ.
  • ಯುದ್ಧದ ಕಾರಣ ಗೋಧಿಯ ಜಾಗತಿಕ ಪೂರೈಕೆ ಅಪಾಯಕ್ಕೆ ಸಿಲುಕಿದೆ.
Russia-Ukrain War ನಿಂದ ನಿಮ್ಮ ಜೇಬಿನ ಮೇಲೆ ಏನು ಪ್ರಭಾವ? title=
Ukraine Russia War Latest Update (File Photo)

ನವದೆಹಲಿ: Russia Ukraine Crisis - ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವು ಇದೀಗ ಕೇವಲ ಎರಡೂ ದೇಶಗಳ ಗಡಿಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ, ಆದರೆ ಇಡೀ ಜಗತ್ತು ಈಗ ಈ ಯುದ್ಧದ ಆರ್ಥಿಕ ಪರಿಣಾಮಗಳನ್ನು ಎದುರಿಸುತ್ತಿದೆ. ರಷ್ಯಾ ಅನೇಕ ಆಹಾರ ಧಾನ್ಯಗಳು, ಕಚ್ಚಾ ತೈಲ, ಕೈಗಾರಿಕಾ ಲೋಹಗಳ ಪ್ರಮುಖ ರಫ್ತುದಾರ ರಾಷ್ಟ್ರವಾಗಿದೆ. ಈ ಯುದ್ಧದಿಂದಾಗಿ, ಅವುಗಳ ಪೂರೈಕೆ ಇದೀಗ ಅಪಾಯದಲ್ಲಿ ಸಿಲುಕಿದೆ. ಇದರಿಂದಾಗಿ ಅವುಗಳ ಬೆಲೆಗಳು ಜಾಗತಿಕವಾಗಿ ಗಗನಮುಖಿಯಾಗುತ್ತಿವೆ.

ಚೀನಾ ಮತ್ತು ಭಾರತದ ನಂತರ ರಷ್ಯಾ ಅತಿ ಹೆಚ್ಚು ಗೋಧಿ ಉತ್ಪಾದಕ ರಾಷ್ಟ್ರವಾಗಿದೆ
ರಷ್ಯಾ ಮತ್ತು ಉಕ್ರೇನ್‌ ದಿಂದ (Russia-Ukraine War) ಆಗುತ್ತಿದ್ದ ಗೋಧಿ ರಫ್ತು (Wheat Export) ಕೂಡ ಪ್ರಭಾವಕ್ಕೆ ಒಳಗಾಗಿದ್ದು,ಮುಂಬರುವ ದಿನಗಳಲ್ಲಿ  ಇದು ಗೋಧಿ ಪೂರೈಕೆಯ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಚೀನಾ ಮತ್ತು ಭಾರತದ ನಂತರ ಗೋಧಿಯ ಅತಿದೊಡ್ಡ ಉತ್ಪಾದಕ ರಾಷ್ಟ್ರ ಎಂದರೆ ಅದು ರಷ್ಯಾ, ಆಗಿದ್ದು, ಗೋಧಿ (Wheat Price) ರಫ್ತಿನ ವಿಷಯದಲ್ಲಿಯೂ ಕೂಡ ಅದು ಅಗ್ರ ಸ್ಥಾನದಲ್ಲಿದೆ. ಗೋಧಿ ರಫ್ತು ಮಾಡುವ ದೇಶಗಳಲ್ಲಿ ಉಕ್ರೇನ್ ಐದನೇ ಸ್ಥಾನದಲ್ಲಿದೆ.

ಭಾರತ ಸೇರಿದಂತೆ ವಿಶ್ವದಾದ್ಯಂತ ಗೋಧಿ ಬೆಲೆ ಏರಿಕೆಯಾಗಿದೆ (Wheat MSP)
ಭಾರತದಲ್ಲಿ 21-22 ರ ಅವಧಿಯಲ್ಲಿ, ಗೋಧಿಯ ದಾಖಲೆಯ ಉತ್ಪಾದನೆಯ ಅಂದಾಜನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಜಾಗತಿಕ ಮಟ್ಟದಲ್ಲಿ ಇದರ ಬೆಲೆ ಏರುತ್ತಿರುವುದನ್ನು ಕಂಡು ಗೋಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಇದರಿಂದ ದೇಶಿಯ ಮಾರುಕಟ್ಟೆಯಲ್ಲೂ ಇದರ ಬೆಲೆ ಹೆಚ್ಚಾಗಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ಕ್ವಿಂಟಲ್‌ ಗೋಧಿ  2,400 ರೂ.ಗೆ ಮಾರಾಟವಾಗುತ್ತಿದೆ. ಆದರೆ ಶುಕ್ರವಾರ ಇದರ ಬೆಲೆ ದಿಢೀರ್ ಏರಿಕೆ ಕಂಡು ಕ್ವಿಂಟಲ್ ಗೆ 2,400-2,500 ರೂ.ಗೆ ತಲುಪಿದೆ ಇತ್ತೀಚಿನವರೆಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ 2 ಸಾವಿರ ರೂ.ನಂತೆ ಗೋಧಿ ಮಾರಾಟವಾಗುತ್ತಿತ್ತು.

ಇದನ್ನೂ ಓದಿ-ಉಕ್ರೇನ್ ಮೇಲೆ ‘ಪರಮಾಣು ಬಾಂಬ್’ ಹಾಕುತ್ತಾ ರಷ್ಯಾ! 500 ವರ್ಷಗಳ ಹಿಂದೆ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವೇನು?

ಗೋಧಿಯನ್ನುMSPಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ (Ukraine Russia War Latest Update)
22-23ನೇ ಸಾಲಿಗೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 2,015 ರೂ.ಗೆ ನಿಗದಿಪಡಿಸಲಾಗಿದೆ ಮತ್ತು ರೈತರು ಸಾಮಾನ್ಯವಾಗಿ ಈ ದರದಲ್ಲಿ ಗೋಧಿಯನ್ನು ಮಾರಾಟ ಮಾಡಲು ಬಯಸುತ್ತಾರೆ .ಆದರೆ ಇದೀಗ ಮಾರುಕಟ್ಟೆಯಲ್ಲಿ ಎಂಎಸ್‌ಪಿಗಿಂತ ಹೆಚ್ಚಿನ ಬೆಲೆ ಸಿಗುತ್ತಿದೆ. MSPಗಿಂತ ಹೆಚ್ಚಿನ ಗೋಧಿ ಬೆಲೆಯು ಈ ಬಾರಿ ಸರ್ಕಾರಕ್ಕೆ  ರೈತರಿಂದ ಕಡಿಮೆ ಪ್ರಮಾಣದ ಗೋಧಿ ಸಿಗಲಿದೆ ಎಂಬುದನ್ನು  ಸೂಚಿಸುತ್ತದೆ ಎಂದು ವ್ಯಾಪಾರಿಗಳು IANS ತಿಳಿಸಿದ್ದಾರೆ. ಗೋಧಿ ಬೆಲೆ ಏರಿಕೆಯಾಗಿರುವ ರೀತಿಯಲ್ಲಿ ಖರೀದಿದಾರರು ನೇರವಾಗಿ ರೈತರಿಂದಲೇ ಗೋಧಿಯನ್ನು ಖರೀದಿಸುವುದರಿಂದ ಮಾರುಕಟ್ಟೆಗೆ ಗೋಧಿಯ ಆಗಮನವೂ ಕಡಿಮೆಯಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ-ಯುದ್ದ ನಿಲ್ಲಿಸಲು ಯುಕ್ರೇನ್ ಮುಂದೆ ಮೂರು ಶರತ್ತುಗಳನ್ನಿಟ್ಟ ರಷ್ಯಾ

ರಷ್ಯಾ-ಉಕ್ರೇನ್ (Russia Ukraine Crisis Update) ಯುದ್ಧದ ನಡುವೆ ಅಪಾಯಕ್ಕೆ ಸಿಲುಕಿದ ಗೋಧಿ ಪೂರೈಕೆ
APEDA ಪ್ರಕಾರ, ಭಾರತವು ಮುಖ್ಯವಾಗಿ ನೇಪಾಳ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಶ್ರೀಲಂಕಾ ಮತ್ತು ಯಮೆನ್ ದೇಶಗಳಿಗೆ ಗೋಧಿಯನ್ನು ರಫ್ತು ಮಾಡುತ್ತದೆ. ವರದಿಯ ಪ್ರಕಾರ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಜಾಗತಿಕ ಗೋಧಿ ಪೂರೈಕೆಯು ಅಪಾಯದಲ್ಲಿದೆ ಮತ್ತು ಈ ಕಾರಣದಿಂದಾಗಿ, APEDA ಈಗ ಇತರ ದೇಶಗಳಿಗೆ ಗೋಧಿಯನ್ನು ರಫ್ತು ಮಾಡಲು ಸಂಬಂಧಿಸಿದ ದೇಶಗಳು ಮತ್ತು ರಫ್ತುದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಜಾಗತಿಕವಾಗಿ, ಗೋಧಿ ಬೆಲೆ ಹತ್ತು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.

ಇದನ್ನೂ ಓದಿ-Russia-Ukraine War: ದೇಶದಿಂದ ಪಲಾಯನ ಮಾಡಿದ್ದಾರೆಯೇ ಉಕ್ರೇನ್ ಅಧ್ಯಕ್ಷರು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News