ಸ್ಯಾಂಟ್ರೋ ರವಿ ಪತ್ನಿ ವಿರುದ್ಧದ ಬೋಗಸ್ ಕೇಸ್ಗೆ ಸಂಬಂಧಿಸಿದಂತೆ ನಾಳೆ CCB ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಿದೆ. ನಾಳೆ 31ನೇ ACMM ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಿದೆ..
ಸ್ಯಾಂಟ್ರೋ ರವಿ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್
ಖಾಕಿ ಮುಂದೆ ಸತ್ಯ ಒಪ್ಪಿಕೊಂಡನಾ ಸ್ಯಾಂಟ್ರೋ ..?
ಸ್ಯಾಂಟ್ರೋ ರವಿ ಸತ್ಯ ಒಪ್ಪಿಕೊಂಡಿದ್ದರ ಮರ್ಮ ಏನು..?
ಇನ್ಸ್ಪೆಕ್ಟರ್ ಪ್ರವೀಣ್ ಬಚಾವ್ ಮಾಡಲು ತಂತ್ರನಾ..?
ಪ್ರಮುಖವಾಗಿ ಸ್ಯಾಂಟ್ರೋ ರವಿ ಪತ್ನಿಯ ಮೇಲಿನ ಕಾಟನ್ ಪೇಟೆ ಕೇಸ್ ವಿಚಾರವಾಗಿ ಸಿಸಿಬಿ ವಿಚಾರಣೆ ನಡೆಸುತ್ತಿದೆ. ಸಿಸಿಬಿ ಅಧಿಕಾರಿಗಳು ರವಿ ಪತ್ನಿ ಹೇಳಿಕೆಯನ್ನ ದಾಖಲಿಸಿದ್ದು ರವಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಜೊತೆ ಮಂಚ ಏರಲು ಪೀಡಿಸುತ್ತಿದ್ದ. ಈ ಅಧಿಕಾರಿ ನಂತರ ಇನ್ನೊಂದಷ್ಟು ಅಧಿಕಾರಿಗಳನ್ನ ಖುಷಿಪಡಿಸಲು ಬಲವಂತ ಮಾಡುತ್ತಿದ್ದ ಎಂದಿದ್ದಾರೆ.
ಸಿಐಡಿಯಿಂದ ತೀವ್ರಗೊಂಡ ಸ್ಯಾಂಟ್ರೋ ರವಿ ಪ್ರಕರಣದ ತನಿಖೆ. ಸ್ಯಾಂಟ್ರೋ ರವಿಯ ವ್ಯವಹಾರ ಅಕ್ರಮಗಳ ಇಂಚಿಂಚೂ ತನಿಖೆ. ಸ್ಯಾಂಟ್ರೋ ರವಿ ಕೇಸ್ ತನಿಖೆಗಿಳಿದ ಮೂರು ಸ್ಪೆಷಲ್ ಟೀಮ್. ಸಿಐಡಿಯ 3 ತಂಡಗಳಿಂದ ಪ್ರತ್ಯೇಕ ಆಯಾಮಗಳಲ್ಲಿ ತನಿಖೆ.
ಬಿಜೆಪಿ ಸ್ಯಾಂಟ್ರೋ ರವಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸ್ತಿದೆ. ಸ್ಯಾಂಟ್ರೋ ರವಿ ನಟೋರಿಯಸ್ ಕ್ರಿಮಿನಲ್. ಹಲವಾರು ಪ್ರಕರಣಗಳು ಆತನ ಮೇಲಿವೆ. ಸ್ಯಾಂಟ್ರೋ ರವಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
ಸಿಡಿ ಬಿಡುಗಡೆಯಾಗುವ ಭಯದಲ್ಲಿ ರಾಜಕಾರಣಿಗಳಿದ್ದರೆ, ಲಕ್ಷ ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಪಡೆದಿರುವ ಅಧಿಕಾರಿಗಳ ಸ್ಥಿತಿ ಬೇರೆಯದೆ ಆಗಿದೆ. ಸ್ಯಾಂಟ್ರೋ ರವಿ ಪೋಸ್ಟಿಂಗ್ ಡೀಲ್ ಆದ ಬಳಿಕ ಪೊಲೀಸ್ ಅಧಿಕಾರಿಗಳ ಮಿನಿಟ್ ಕಾಪಿ, ಟ್ರಾನ್ಸ್ಫರ್ ಲಿಸ್ಟ್ ನ ಸ್ಟೇಟಸ್ ನಲ್ಲಿ ಹಾಕಿಕೊಳ್ಳುತ್ತಿದ್ದ.
Santro Ravi Case: ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯಕ್ಕೆ ತೆಲೆನೋವಾಗಿದ್ದ ವಂಚಕ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.
ವೇಶ್ಯಾವಾಟಿಕೆಯ ಮಧ್ಯವರ್ತಿ ಸ್ಯಾಂಟ್ರೋ ರವಿ ಹಾಗೂ ಆತನೊಂದಿಗೆ ಸಂಬಂಧ ಹೊಂದಿದ್ದ ಜನಪ್ರತಿನಿಧಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕವು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬುಧವಾರದಂದು ಪ್ರತಿಭಟನೆ ನಡೆಸಿತು.
ಸದ್ಯ ರಾಜ್ಯದಲ್ಲಿ ಸುದ್ದಿಯಲ್ಲಿರುವ ಹೆಸರು ಸ್ಯಾಂಟ್ರೋ ರವಿ. ಕುಮಾರಸ್ವಾಮಿ ಸ್ಯಾಂಟ್ರೋ ರವಿಯ ಬಾಂಬ್ ಸಿಡಿಸಿದ್ದೇ ತಡ ಎಲ್ಲರ ಬಾಯಲ್ಲೂ ಅದೇ ಮಾತು. ಸ್ಯಾಂಟ್ರೋ ರವಿಯ ವಿರುದ್ಧ ಆತನ ಪತ್ನಿ ಮಾಡಿರುವ ಆರೋಪ ಈಗ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ಗೆ ಉರುಳಾಗುವ ಸಾಧ್ಯತೆ ಇದೆ. ಸ್ಯಾಂಟ್ರೋ ರವಿಯ ಷಡ್ಯಂತ್ರದಿಂದ ಕಾಟನ್ ಪೇಟೆ ಠಾಣೆಯಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಮೈಸೂರಿನ ವಿಜಯ ನಗರ ಠಾಣೆಯಲ್ಲಿ ಆತನ ಪತ್ನಿ ರಶ್ಮಿ ದೂರು ನೀಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.