ರಾಯಚೂರು: ಸ್ಯಾಂಟ್ರೋ ರವಿ ಜೊತೆಗಿನ ವಿಡಿಯೋ ವೈರಲ್ ಆಗಿರುವ ವಿಚಾರವಾಗಿ ಮಾತನಾಡಿರುವ ಸಂಸದ ರಾಜಾ ಅಮರೇಶ್ವರ ನಾಯ್ಕ್ ಆತ ಯಾರು ಎಂಬುದೇ ನನಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.
ರಾಯಚೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ರಾಜಾ ಅಮರೇಶ್ವರ ನಾಯ್ಕ್, ವಿಡಿಯೋ ವೈರಲ್ ಆಗಿದೆ ಎಂದು ಪತ್ರಕರ್ತರು ಹೇಳಿದ ತಕ್ಷಣವೇ ಗರಂ ಆಗಿದ್ದಾರೆ. ‘ನನಗೆ ಸ್ಪಷ್ಟವಾಗಿ ಹೇಳಿ ಎಷ್ಟು ನಿಮಿಷದ ವಿಡಿಯೋ ಇದೆ ಅಂತಾ. ನನ್ನ ಹತ್ತಿರ ದಿನಕ್ಕೆ ಸಾವಿರಾರು ಜನರು ಬರುತ್ತಾರೆ, ಹೋಗುತ್ತಾರೆ. ಯಾವನೋ ಬಂದು ಪೋಟೋ ತೆಗೆದುಕೊಂಡ ಹೋದ. ಅದನ್ನೇ ನೀವು ವಿಡಿಯೋ ಅಂತಾ ಹೇಳಬೇಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ : ಯುವಜನೋತ್ಸವದಲ್ಲಿ ಭಾಗಿ
‘ಆ ಸ್ಯಾಂಟ್ರೋ ರವಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ಸ್ಯಾಂಟ್ರೋ ರವಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಸ್ಯಾಂಟ್ರೋ ರವಿಯನ್ನು ನಾನು ಎಲ್ಲೂ ನೋಡಿಲ್ಲ. ಆತನ ಹೆಸರು ಕೇಳಿದ್ದೇ ಮಾಧ್ಯಮಗಳಲ್ಲಿ. ನಾನು ಯಾವುದೇ ವರ್ಗಾವಣೆ ಲೇಟರ್ ಕೊಡುವುದಿಲ್ಲ. ಸುಮಾರು ವರ್ಷಗಳಿಂದ ನಾನು ರಾಜಕೀಯದಲ್ಲಿ ಇದ್ದೇನೆ. ನನಗೆ ಇದುವರೆಗೂ ಯಾವುದೇ ಕಪ್ಪುಚುಕ್ಕೆ ಸಹ ಇಲ್ಲ’ ಅಂತಾ ಹೇಳಿದ್ದಾರೆ.
ಸ್ಯಾಂಟ್ರೋ ರವಿ ಅನೇಕ ಕ್ರಿಮಿನಲ್‍ಗಳಲ್ಲಿ ಇವನು ಒಬ್ಬ. ಆದರೆ ರವಿ ಕ್ರಿಮಿನಲ್ ಅನ್ನೋದು ಇವಾಗ ಬಯಲಿಗೆ ಬಂದಿದೆ. ಕಾನೂನಿನ ದೃಷ್ಟಿಯಲ್ಲಿ ಸ್ಯಾಂಟ್ರೋ ರವಿಗೆ ಶಿಕ್ಷೆ ಆಗುತ್ತದೆ. ಅಲ್ಲಿವರೆಗೂ ವಿಡಿಯೋ ವೈರಲ್ ಆಗಿದೆ, ಅದು ಆಗಿದೆ, ಇದು ಆಗಿದೆ ಅಂತಾ ಸುಖಾಸುಮ್ಮನೇ ಮಾತನಾಡಿ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Santro Ravi case : ಸ್ಯಾಂಟ್ರೋ ರವಿ ಷಡ್ಯಂತ್ರಕ್ಕೆ ಸಾಥ್ ನೀಡಿದ್ದ ಇನ್ಸ್‌ಪೆಕ್ಟರ್ ಮೇಲೆ ತೂಗುಗತ್ತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.