2019 ಲೋಕಸಭೆ ಚುನಾವಣೆಯಲ್ಲಿ "ಬಿಹಾರಿ ಬಾಬು"ಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಹಾರಿ ಬಾಬು ಶತ್ರುಘ್ನ ಸಿನ್ಹಾ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
ಬಿಜೆಪಿ ಸಂಸದನಾಗಿದ್ದುಕೊಂಡೇ ಪ್ರಧಾನಿ ಮೋದಿ ವಿರುದ್ಧ ಸಮರ ಸಾರಿದ್ದ ಹಿರಿಯ ನಾಯಕ ಶತ್ರುಘ್ನ ಸಿನ್ಹಾಗೆ ಈ ಬಾರಿ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುತ್ತಿಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.
ನಟ ಹಾಗೂ ರಾಜಕಾರಣಿ ಅದೃಷ್ಟವಶಾತ್ ತಮ್ಮ ಹೆಸರು ಮೀಟೂ ಚಳುವಳಿಯಲ್ಲಿ ಬರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ ಸ್ಪಷ್ಟಪಡಿಸಿದ ಅವರು ಮೀಟೂ ಚಳುವಳಿಯನ್ನು ವ್ಯಂಗ್ಯ ಮಾಡುತ್ತಿಲ್ಲ ಆದ್ದರಿಂದ ತಮ್ಮ ಹೇಳಿಕೆಯನ್ನು ಸರಿಯಾದ ವಿಡಂಬನೆಯಲ್ಲಿ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಬಿಜೆಪಿ ಎಚ್ಚರಿಕೆಯ ನಡುವೆಯೂ ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜೀ ಆಯೋಜಿಸಿದ್ದ ಸಂಯುಕ್ತ ಭಾರತಕ್ಕಾಗಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಶತ್ರುಘ್ನ ಸಿನ್ಹಾ ಈಗ ಮತ್ತೆ ತಮ್ಮ ಪಕ್ಷದ ವಿರುದ್ದವೇ ಕಿಡಿ ಕಾರಿದ್ದಾರೆ.
ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪಂಚ ರಾಜ್ಯಗಳ ಚುನಾವಣೆಯಲ್ಲಿನ ಫಲಿತಾಂಶಕ್ಕೆ ಪ್ರತಿಕ್ರಿಯಿಸಿಸುತ್ತಾ ಕೊನೆಗೂ ಸತ್ಯವೇ ಗೆದ್ದಿದೆ ಸೋತವರಿಗೆ ಭಾವಪೂರ್ಣ ಸಂತಾಪಗಳು ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ದಾಮೋದರ ದಾಸ್ ಮೋದಿಯೆಂಬ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಈಗ ಪ್ರತಿಪಕ್ಷಗಳು ಒಂದು ದೊಡ್ಡ ಧಾಳವನ್ನು ಉರುಳಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಆ ಧಾಳ ಹೇಗಿದೆ ಎಂದರೆ ಬಿಜೆಪಿಯಲ್ಲಿ ಇದ್ದು ಮೋದಿ ಸರ್ಕಾರಕ್ಕೆ ಸವಾಲಿನ ಮೇಲೆ ಸವಾಲು ಹಾಕುತ್ತಿದ್ದ ಶತ್ರುಘ್ನ ಸಿನ್ಹಾ ಈಗ ಪ್ರತಿಪಕ್ಷಗಳ ನೆಚ್ಚಿನ ಬಿಜೆಪಿ ವ್ಯಕ್ತಿ!
ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳಿಂದ ಮೋದಿ ಸರ್ಕಾರ ಟೀಕೆಗೆ ಒಳಗಾಗಿದೆ.ಈಗ ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ಈಗ ಸ್ವಪಕ್ಷದವರಿಂದಲೇ ಈ ಕುರಿತಾಗಿ ಸ್ಪಷ್ಟನೆ ನೀಡುವಂತೆ ಒತ್ತಡ ಹೆಚ್ಚಾಗಿದೆ.
ಬಂಡಾಯ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೇಲೆ ಟೀಕಾ ಪ್ರಹಾರ ನಡೆಸುತ್ತಾ ಇದು ಒನ್ ಮ್ಯಾನ್ ಶೋ, ಟು ಮೆನ್ ಆರ್ಮಿ ಎಂದು ವ್ಯಂಗವಾಡಿದ್ದಾರೆ. ಅಲ್ಲದೆ ಮುಂದಿನ 50 ವರ್ಷಗಳ ಕಾಲ ಸರ್ಕಾರ ನಡೆಸುತ್ತೇವೆ ಎಂದು ಹೇಳಲಿಕ್ಕೆ ಇವಿಎಂ ಕಾರಣವೇ ಎಂದು ಅವರು ಪ್ರಶ್ನಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.