ರೇಣುಕಾ ಚೌಧರಿ ಬೆಂಬಲಕ್ಕೆ ನಿಂತ ಶತ್ರುಘ್ನ ಸಿನ್ಹಾ

    

Last Updated : Feb 14, 2018, 04:24 PM IST
ರೇಣುಕಾ ಚೌಧರಿ ಬೆಂಬಲಕ್ಕೆ ನಿಂತ ಶತ್ರುಘ್ನ ಸಿನ್ಹಾ title=

ನವದೆಹಲಿ: ಇತ್ತೀಚಿಗೆ ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ಮಾತನಾಡುತ್ತಾ  ಆಧಾರ ಯೋಜನೆಯು ವಾಜಪೇಯಿ ಸರ್ಕಾರದಲ್ಲಿದ್ದಾಗ ಮೊದಲ ಬಾರಿಗೆ ಅದರ ಕುರಿತಾಗಿ ಚರ್ಚೆಗೆ ಬಂದಿತ್ತು ಎಂದು ಪ್ರಸ್ತಾಪಿಸಿದ್ದರು.

ಆ ಸಂದರ್ಭದಲ್ಲಿ ಭಾಷಣದ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಇದಕ್ಕೆ ವ್ಯಂಗ್ಯ ನಗೆ ಬೀರಿದ್ದರು. ಆದರೆ ಇದಕ್ಕೆ ಬಿಜೆಪಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ  ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮಾತ್ರ  ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು 'ನಗು ರೇಣುಕಾ ನಗು, ನಿಮ್ಮನ್ನು ಪ್ರೀತಿಸುತ್ತೇವೆ, ನಿಮ್ಮನ್ನು ಇಷ್ಟಪಟ್ಟಿದ್ದೇವೆ , ನೀವು ಚೆನ್ನಾಗಿರಲು ಬಯಸುತ್ತೇವೆ "ಚಿಂತೆಯಿಂದಿರಿ, ಸಂತೋಷವಾಗಿರಿ "ಎಂದು ಅವರು ಟ್ವೀಟ್ ಮಾಡಿದ್ದಾರೆ.

Trending News