ಲಾಲೂ ಯಾದವ್ ಭೇಟಿಗಾಗಿ ರಾಂಚಿ ತಲುಪಿದ ಶತ್ರುಘ್ನ ಸಿನ್ಹಾ

ಬಿಜೆಪಿಯ ತಪ್ಪುಗಳ ಪರಿಣಾಮವಾಗಿ ಮೂರು ರಾಜ್ಯಗಳಲ್ಲಿ ಸೋಲು ಅನುಭವಿಸಿದೆ- ಶತ್ರುಘ್ನ ಸಿನ್ಹಾ  

Last Updated : Dec 22, 2018, 10:27 AM IST
ಲಾಲೂ ಯಾದವ್ ಭೇಟಿಗಾಗಿ ರಾಂಚಿ ತಲುಪಿದ ಶತ್ರುಘ್ನ ಸಿನ್ಹಾ title=
File Image

ರಾಂಚಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನಿಂದ ಬಂಡಾಯ ಚಳವಳಿಯನ್ನು ಆರಂಭಿಸಿದ್ದ ಪಾಟ್ನಾ ಸಾಹಿಬ್ನ ಶತ್ರುಘ್ನ ಸಿನ್ಹಾ (ಬಿಹಾರಿ ಬಾಬು) ಶುಕ್ರವಾರ ರಾಂಚಿಯನ್ನು ತಲುಪಿದರು. 

ಮೇವು ಹಗರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರನ್ನು ಶತ್ರುಘ್ನ ಸಿನ್ಹಾ ಭೇಟಿಯಾಗಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ  ಮಾತನಾಡಿದ ಅವರು, ಬಿಜೆಪಿಯ ತಪ್ಪುಗಳ ಪರಿಣಾಮವಾಗಿ ಮೂರು ರಾಜ್ಯಗಳಲ್ಲಿ ಸೋಲು ಅನುಭವಿಸಿದೆ. ಪಕ್ಷವು ತನ್ನ ತಪ್ಪನ್ನು ಸುಧಾರಿಸಬೇಕೆಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಸ್ಥಿತಿ ಏನಾದರೂ ಇರಲಿ, ಸ್ಥಳ ಒಂದೇ ಆಗಿರುತ್ತದೆ ಎಂದರು.

ತಮ್ಮ ರಾಂಚಿ ಪ್ರವಾಸವನ್ನು ಖಾಸಗಿ ಪ್ರವಾಸವೆಂದು ಹೇಳಿದ ಶತ್ರುಘ್ನ ಸಿನ್ಹಾ, ಲಾಲು ಯಾದವ್ ಅವರೊಂದಿಗೆ ಭೇಟಿ ಬಗ್ಗೆ ಪ್ರತಿಕ್ರಿಯಿಸುತ್ತಾ ಲಾಲೂ ಯಾದವ್ ಅವರು ನಮ್ಮ ಕುಟುಂಬದ ಸ್ನೇಹಿತ. ಸದಾ ಸುಖ-ದುಃಖದಲ್ಲಿ ನಾವು ಭಾಗಿಯಾಗುತ್ತೇವೆ ಎಂದರು. 
 

Trending News