Shubman Gill Nickname: ಈ ಸಾಧನೆ ಮಾಡಿದ ಬೆನ್ನಲ್ಲೇ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಶುಭ್ಮನ್ ಗಿಲ್ ಗೆ ಹೊಸ ಹೆಸರಿಟ್ಟಿದ್ದಾರೆ. ಇನ್ನು ಆಗಾಗ್ಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ಕಾಮೆಂಟರಿ ಸಮಯದಲ್ಲಿ ಹೊಗಳುವುದನ್ನು ನೀವು ಕೇಳಿರಬಹುದು
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕ್ರಿಕೆಟಿಗ ಶುಭ್ಮನ್ ಗಿಲ್ ಅದ್ಭುತ ಓಪನಿಂಗ್ ಮಾಡಿದ್ದು ಎಲ್ಲರೂ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗಿಲ್ 149 ಎಸೆತಗಳಲ್ಲಿ ದ್ವಿಶತಕ ಗಳಿಸಿ 208 ರನ್ ಗಳಿಸಿ ಔಟಾದರು. ಆದರೆ ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಬೀಸುತ್ತಿದ್ದ ಈ ಖ್ಯಾತ ಕ್ರಿಕೆಟಿಗನಿಗೆ ಇಬ್ಬರು ಸುಂದರಿಯರ ಮನಸೋತಿದ್ದಾರೆ.
Shubman Gill Double Century: ಇದರ ಜೊತೆಗೆ ಗಿಲ್ ODI ಪಂದ್ಯಗಳಲ್ಲಿ ಅತ್ಯಂತ ವೇಗವಾಗಿ 1000 ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಭಾರತದ ಪರ ಏಕದಿನದಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ್ದರು. ಇಬ್ಬರೂ 24 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್ ಅವರಿಗಿಂತ 5 ಇನ್ನಿಂಗ್ಸ್ ಕಡಿಮೆ ಇರುವಾಗಲೇ ಈ ದಾಖಲೆ ಮಾಡಿದ್ದಾರೆ. ಗಿಲ್ ಅವರು ತಮ್ಮ 19ನೇ ಇನ್ನಿಂಗ್ಸ್ನಲ್ಲಿ 106 ರನ್ಗಳನ್ನು ತಲುಪಿದಾಗ ಈ ಗಡಿಯನ್ನು ದಾಟಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ಮೊದಲ ದ್ವಿಶತಕ ಬಾರಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಶುಭಮನ್ ಗಿಲ್ ಭಾರತದ ಐದನೇ ಬ್ಯಾಟ್ಸ್ಮನ್ ಮತ್ತು ಏಕದಿನದಲ್ಲಿ ದ್ವಿಶತಕ ಗಳಿಸಿದ ವಿಶ್ವದ ಎಂಟನೇ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.