Shubman Gill : ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಶುಭಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಬಾರಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಶುಭಮನ್ ಗಿಲ್ ಭಾರತದ ಐದನೇ ಬ್ಯಾಟ್ಸ್‌ಮನ್ ಮತ್ತು ಏಕದಿನದಲ್ಲಿ ದ್ವಿಶತಕ ಗಳಿಸಿದ ವಿಶ್ವದ ಎಂಟನೇ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ : Rohit Sharma: ಮೊದಲ ಏಕದಿನ ಪಂದ್ಯದಲ್ಲಿ ಈ ಆಟಗಾರನಿಗೆ ಸ್ಥಾನ ನೀಡಿ ತಪ್ಪು ಮಾಡಿದ ರೋಹಿತ್!
ಭರ್ಜರಿ ಪ್ರದರ್ಶನ ನೀಡಿದ ಶುಭಮಾನ್ ಗಿಲ್
ಹೈದರಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಕಿವೀಸ್ ಬೌಲರ್‌ಗಳನ್ನು ಸಿಡಿಸಿದ ಶುಭ್‌ಮನ್ ಗಿಲ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.. ಶುಭಮನ್ ಗಿಲ್ 149 ಎಸೆತಗಳಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್ ಒಳಗೊಂಡ 208 ರನ್ ಗಳಿಸಿದರು. ಈ ಸಮಯದಲ್ಲಿ, ಶುಭಮನ್ ಗಿಲ್ ಅವರ ಸ್ಟ್ರೈಕ್ ರೇಟ್ 139.60 ಆಗಿದೆ. ಶುಭ್‌ಮನ್ ಗಿಲ್‌ಗಿಂತ ಮೊದಲು, ಇಶಾನ್ ಕಿಶನ್, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ್ದಾರೆ.
A SIX to bring up his Double Hundred 🫡🫡
Watch that moment here, ICYMI 👇👇#INDvNZ #TeamIndia @ShubmanGill pic.twitter.com/8qCReIQ3lc
— BCCI (@BCCI) January 18, 2023
ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ ಬ್ಯಾಟ್ಸ್‌ಮನ್‌ಗಳ ಪಟ್ಟಿ
ರೋಹಿತ್ ಶರ್ಮಾ - 264
ಮಾರ್ಟಿನ್ ಗಪ್ಟಿಲ್ - 237*
ವೀರೇಂದ್ರ ಸೆಹ್ವಾಗ್ - 219
ಕ್ರಿಸ್ ಗೇಲ್ - 215
ಫಖರ್ ಜಮಾನ್ - 210*
ಇಶಾನ್ ಕಿಶನ್ - 210
ಶುಭಮನ್ ಗಿಲ್ - 208
ರೋಹಿತ್ ಶರ್ಮಾ - 209
ರೋಹಿತ್ ಶರ್ಮಾ - 208*
ಸಚಿನ್ ತೆಂಡೂಲ್ಕರ್ - 200*
ಇದನ್ನೂ ಓದಿ : IND vs NZ : ಭಾರತದ Playing 11 ನಲ್ಲಿ ಈ ಆಟಗಾರನಿಗೆ ಸ್ಥಾನ ನೀಡಲು ನಿರಾಕರಿಸಿದ ಕೋಚ್-ಕ್ಯಾಪ್ಟನ್ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.