ಎರಡು ವಾರಗಳ ಕಾಲ ಅಧಿವೇಶನವನ್ನು ಕರೆದಿದ್ದರು, ಪ್ರವಾಹ ಮತ್ತು ಅತಿವೃಷ್ಟಿ ಕುರಿತು ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದ್ದೆ, ನಂತರ ನಿಯಮ 69 ರಡಿ ಸುದೀರ್ಘ ಚರ್ಚೆ ನಡೆಯಿತು, ಸರ್ಕಾರ ಈ ಬಗ್ಗೆ ಸಮಂಜಸವಾದ ಉತ್ತರ ನೀಡಿಲ್ಲ, ಹಾಗಾಗಿ ನಾವು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದೆವು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಹುಲ್, ಸೋನಿಯಾ ವಿಚಾರಣೆ ನಡೆಸ್ತಿರೋದು ಸೇಡಿನ ರಾಜಕೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಸಮನ್ಸ್, ವಾರೆಂಟ್ ನೀಡಬೇಕಾದ್ರೆ ಎಫ್ಐಆರ್ ಇರಬೇಕು. ಎಫ್ಐಆರ್ ಎಲ್ಲಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣ ಮಾಡಬಾರದು ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ ಮಾತನಾಡಿದ ಸಿದ್ದಾರಮಯ್ಯ, ನೀವು ಒಗ್ಗಟ್ಟು ಮಾಡಿದ್ರೆ ನೂರಕ್ಕೆ ನೂರು ಗೆಲ್ತೇನೆ. ನನ್ನನ್ನು ಸೋಲಿಸಿದಂತೆ ಇವ್ರನ್ನು ಸೋಲಿಸಬೇಡಿ. ನಾನು ಏನು ಅನ್ಯಾಯ ಮಾಡಿದ್ದೇನೆ. ಗೆದ್ದವರು ಏನು ನ್ಯಾಯ ಮಾಡಿದ್ದಾರೆ ಎಂದು ಹೇಳಿ ನೋಡೋಣ ಎಂದು ಕಾರ್ಯಕರ್ತನ್ನು ಪ್ರಶ್ನಿಸಿದ್ದಾರೆ.
ಇಂದು ಧರ್ಮ ಧರ್ಮಗಳ ನಡುವೆ ಕಿತ್ತಾಟ ನಡೆಯುತಿದ್ದು ಶಾಂತಿ ಭಂಗವಾಗುತ್ತಿದೆ. ಆದರೆ ನಮಗೆ ಇವತ್ತು ಉಗ್ರ ಬಿನ್ ಲಾಡೆನ್ ಅನುಸರಿಸಿದ ಇಸ್ಲಾಂ ಧರ್ಮ ಬೇಡ. ಮಹಮ್ಮದ್ ಪೈಗಂಬರ್ ಹೇಳಿದ ಇಸ್ಲಾಂ ಧರ್ಮ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
Siddaramaiah Statement: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು ಖಂಡನೀಯ. ಎಂಇಎಸ್ ನವರು ಪುಂಡರು. ಅವರಿಗೆ ಕಾನೂನು ಇಲ್ಲ, ಏನೂ ಇಲ್ಲ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಅನ್ನೋದು ಸತ್ತು ಹೋಗಿದೆ. ಆಡಳಿತದ ಮೇಲೆ ಈ ಸರ್ಕಾರಕ್ಕೆ ಹಿಡಿತ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.