ಯಾವುದೇ ಹೊಸ ಕೆಲಸ ಮಾಡುವಾಗ ಕೈಯ್ಯಲ್ಲಿ ಇದೊಂದು ವಸ್ತುಇಟ್ಟುಕೊಳ್ಳಿ !ಸಾಕ್ಷಾತ್ ಭಗವಾನ್ ವಿಷ್ಣು ಜೊತೆ ನಿಂತು ನಡೆಸಿಕೊಡುತ್ತಾನೆಯಂತೆ ಕಾರ್ಯ

ತುಳಸಿ ಮಾಲೆಯನ್ನು ಧರಿಸುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿ ಬರುತ್ತದೆ. ಮನಸ್ಸು ಶಾಂತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಜಪಮಾಲೆಯನ್ನು ಧರಿಸುವುದರಿಂದ ಭಗವಾನ್ ವಿಷ್ಣು ಮತ್ತು ಕೃಷ್ಣನ ಕಡೆಗೆ ಭಕ್ತಿ ಮತ್ತು ಸಮರ್ಪಣೆಯ ಭಾವನೆಯನ್ನು ನೀಡುತ್ತದೆ.   

Written by - Ranjitha R K | Last Updated : Dec 24, 2024, 05:32 PM IST
  • ತುಳಸಿ ಗಿಡವನ್ನು ಪ್ರತಿ ಹಿಂದೂಗಳ ಮನೆಯಲ್ಲಿ ನೆಡಲಾಗುತ್ತದೆ
  • ನಿತ್ಯ ಬೆಳಿಗ್ಗೆ ಮತ್ತು ಸಂಜೆ ತುಳಸಿಯನ್ನು ಪೂಜಿಸಲಾಗುತ್ತದೆ
  • ಜಪಮಾಲೆಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಆಯುರ್ವೇದದಲ್ಲಿ ಬಹಳ ಪ್ರಾಮುಖ್ಯತೆ ಇದೆ.
ಯಾವುದೇ ಹೊಸ ಕೆಲಸ ಮಾಡುವಾಗ ಕೈಯ್ಯಲ್ಲಿ ಇದೊಂದು ವಸ್ತುಇಟ್ಟುಕೊಳ್ಳಿ !ಸಾಕ್ಷಾತ್ ಭಗವಾನ್ ವಿಷ್ಣು ಜೊತೆ ನಿಂತು ನಡೆಸಿಕೊಡುತ್ತಾನೆಯಂತೆ ಕಾರ್ಯ   title=

ಬೆಂಗಳೂರು : ಸನಾತನ ಧರ್ಮದ ನಂಬಿಕೆಗಳ ಪ್ರಕಾರ ತುಳಸಿಯಲ್ಲಿ ಮಹಾಲಕ್ಷ್ಮೀ ನೆಲೆಸಿದ್ದಾಳೆ ಎನ್ನುವುದು ನಂಬಿಕೆ. ಈ ಕಾರಣದಿಂದಲೇ ತುಳಸಿ ಗಿಡವನ್ನು ಪ್ರತಿ ಹಿಂದೂಗಳ ಮನೆಯಲ್ಲಿ ನೆಡಲಾಗುತ್ತದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ತುಳಸಿಯನ್ನು ಪೂಜಿಸಲಾಗುತ್ತದೆ. ತುಳಸಿ ಬೀಜಗಳಿಂದ ಮಾಡಿದ ಜಪಮಾಲೆಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಆಯುರ್ವೇದದಲ್ಲಿ ಬಹಳ ಪ್ರಾಮುಖ್ಯತೆ ಇದೆ.  ಈ ಜಪಮಾಲೆಯನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಇದನ್ನು ಭಗವಾನ್ ವಿಷ್ಣು ಮತ್ತು ಅವನ ಅವತಾರಗಳಾದ ಶ್ರೀ ಕೃಷ್ಣ ಮತ್ತು ಶ್ರೀ ರಾಮನ ಆರಾಧನೆಯಲ್ಲಿ ಬಳಸಲಾಗುತ್ತದೆ. 

ತುಳಸಿ ಮಾಲೆ ಧರಿಸುವುದರಿಂದ ಆಗುವ ಲಾಭಗಳು :
ಧನಾತ್ಮಕ ಶಕ್ತಿಯ ಪ್ರಸರಣ : 

ತುಳಸಿ ಮಾಲೆಯನ್ನು ಧರಿಸುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿ ಬರುತ್ತದೆ. ಮನಸ್ಸು ಶಾಂತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಜಪಮಾಲೆಯನ್ನು ಧರಿಸುವುದರಿಂದ ಭಗವಾನ್ ವಿಷ್ಣು ಮತ್ತು ಕೃಷ್ಣನ ಕಡೆಗೆ ಭಕ್ತಿ ಮತ್ತು ಸಮರ್ಪಣೆಯ ಭಾವನೆಯನ್ನು ನೀಡುತ್ತದೆ. 

ಇದನ್ನೂ ಓದಿ : ಈ ರಾಶಿಯ ಹುಡುಗಿಯರನ್ನ ಮದುವೆಯಾದರೆ ಭಿಕ್ಷುಕನೂ ಕೋಟ್ಯಾಧಿಪತಿಯಾಗುತ್ತಾನೆ! ಬದುಕು ಬಂಗಾರವಾಗುತ್ತೆ..

ಮಂತ್ರಗಳನ್ನು ಪಠಿಸಲು ಪ್ರಯೋಜನಕಾರಿ :
ಧಾರ್ಮಿಕ ವಿದ್ವಾಂಸರ ಪ್ರಕಾರ, ತುಳಸಿ ಮಾಲೆಯನ್ನು ಧರಿಸಿದ ವ್ಯಕ್ತಿಯು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾನೆ. ಸಂತೋಷ ಮತ್ತು ಸಮೃದ್ಧಿಯ ಜೀವನ ನಡೆಸುತ್ತಾನೆ. ಈ ಮಾಲೆಯನ್ನು ಮಂತ್ರಗಳನ್ನು ಪಠಿಸಲು ಬಳಸಲಾಗುತ್ತದೆ.  

ಯಾವುದೇ ಹೊಸ ಕೆಲಸ ಮಾಡುವಾಗ ಕೈಯ್ಯಲ್ಲಿ ಈ ಮಾಲೆಯನ್ನು ಇಟ್ಟುಕೊಂಡರೆ ಸಾಕ್ಷಾತ್ ಭಗವಾನ್ ವಿಷ್ಣು ಜೊತೆ ನಿಂತು ಆ ಕಾರ್ಯವನ್ನು ನಡೆಸಿಕೊಡುತ್ತಾನೆ ಎನ್ನುವುದು ನಂಬಿಕೆ.

ತುಳಸಿ ಮಾಲೆಯ ಆಯುರ್ವೇದ ಪ್ರಯೋಜನಗಳು : 
ತುಳಸಿ ಜಪಮಾಲೆಯನ್ನು ಕುತ್ತಿಗೆ ಅಥವಾ ಕೈಯಲ್ಲಿ ಧರಿಸುವುದರಿಂದ ಹಲವಾರು ಔಷಧೀಯ ಪ್ರಯೋಜನಗಳಿವೆ. ವಾಸ್ತವವಾಗಿ ತುಳಸಿ ಕೂಡಾ ಒಂದು ಔಷಧೀಯ ಸಸ್ಯವಾಗಿದೆ. ಅದರ ಸಂಪರ್ಕದಿಂದ ದೇಹವು ಶಕ್ತಿಯನ್ನು ಪಡೆಯುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಈ ಜಪಮಾಲೆಯನ್ನು ಧರಿಸುವುದರಿಂದ ಖಿನ್ನತೆ ಮತ್ತು ಮಾನಸಿಕ ಒತ್ತಡದಿಂದ ಪರಿಹಾರ ದೊರೆಯುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ತುಳಸಿ ಮಾಲೆಯಲ್ಲಿ ಎಷ್ಟು ವಿಧಗಳಿವೆ? :
ತುಳಸಿ ಮಾಲೆಗಳು ಸಾಮಾನ್ಯವಾಗಿ ಎರಡು ವಿಧ. ಸಣ್ಣ ಮಣಿಗಳನ್ನು ಹೊಂದಿರುವ ಮಾಲೆಗಳನ್ನು ಕುತ್ತಿಗೆಗೆ ಧರಿಸಲು ಬಳಸಲಾಗುತ್ತದೆ. 108 ಮಣಿಗಳನ್ನು ಹೊಂದಿರುವ ಜಪಮಾಲೆಯನ್ನು ಪಠಣಕ್ಕಾಗಿ ಬಳಸಲಾಗುತ್ತದೆ. 

ತುಳಸಿ ಜಪಮಾಲೆ ಧರಿಸುವ ನಿಯಮಗಳು  :
ನೀವೂ ಕೂಡ ತುಳಸಿ ಮಾಲೆಯನ್ನು ಧರಿಸಬೇಕೆಂದಿದ್ದರೆ ಅದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಮೊದಲನೆಯದಾಗಿ, ತುಳಸಿ ಜಪಮಾಲೆಯನ್ನು ಯಾವಾಗಲೂ ಶುದ್ಧ ಮತ್ತು ಪವಿತ್ರ ಸ್ಥಳದಲ್ಲಿ ಇಡಬೇಕು.  ಈ ಜಪಮಾಲೆಯನ್ನು ಧರಿಸಿದ ವ್ಯಕ್ತಿಯು ಸದ್ಗುಣವನ್ನು ಅನುಸರಿಸಬೇಕು. ಮಾಂಸಾಹಾರ ಮತ್ತು ತಾಮಸಿಕ ಆಹಾರವನ್ನು ತ್ಯಜಿಸಬೇಕು. ಈ ಜಪಮಾಲೆಯನ್ನು ಧರಿಸಿದ ವ್ಯಕ್ತಿಯು ವಿಷ್ಣು ಅಥವಾ ಕೃಷ್ಣನನ್ನು ನಿಯಮಿತವಾಗಿ ಪೂಜಿಸಬೇಕು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News