ಕ್ರೀಡಾ ತಜ್ಞರ ಪ್ರಕಾರ, 7 ಪಂದ್ಯಗಳ ನಂತರ ತಂಡದ ನಿಜವಾದ ಪರೀಕ್ಷೆ ಆರಂಭವಾಗಲಿದೆ. ಉಳಿದ ಪಂದ್ಯಗಳಲ್ಲಿ ನಿರಂತರ ಜಯ ಸಾಧಿಸಿದರೆ RCB ಸುಲಭವಾಗಿ ಪ್ಲೇಆಫ್ ಹಂತ ತಲುಪಬಹುದು. ಆದರೆ ಸೋಲುಗಳ ಸರಣಿ ಮುಂದುವರಿದರೆ ಒತ್ತಡ ಹೆಚ್ಚಾಗಲಿದೆ.
ಆರ್ಸಿಬಿ ಹುಡುಗರು ಫುಲ್ ಫಾರ್ಮ್ನಲ್ಲಿದ್ದು ಕ್ರೀಸ್ಗೆ ಬಂದ ಬ್ಯಾಟ್ಸ್ಮನ್ಗಳು ಅಬ್ಬರಿಸುತ್ತಿದ್ದಾರೆ. ಕನಿಷ್ಠ ಎಂದರೆ 200 ರನ್ಗಳನ್ನು ಗಳಿಸುತ್ತಿದ್ದಾರೆ.
Tim david irritated umpire: ಐಪಿಎಲ್ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು,18ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯದ ಎಸೆತವನ್ನು ಟಿಮ್ ಡೇವಿಡ್ ಭರ್ಜರಿ ಸಿಕ್ಸರ್ಗೆ ಭಾರಿಸಿದ ವೇಳೆ ಅಂಪೈರ್ ದಿಢೀರ್ ಚೆಂಡನ್ನು ಬದಲಿಸಿದ್ದರು.
ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 32 ಎಸೆತಗಳಲ್ಲಿ 77 ರನ್ ಗಳಿಸಿ ಅಜೇಯರಾಗಿ ಉಳಿದರು, ಇದು ಮುಂಬೈ ಬೌಲರ್ಗಳನ್ನು ಬೆರಗುಗೊಳಿಸಿತು. ಮುಂಬೈ ಎದುರಿಸಬೇಕಾದ ಪ್ರತಿ ಬಾರಿಯೂ ಜೈಸ್ವಾಲ್ ವಿಶೇಷ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಕೇವಲ 11 ಓವರ್ಗಳಲ್ಲಿ ಹತ್ತು ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ ತಂಡವು 150 ರನ್ ಗಳಿಸಲು ಸಹಾಯ ಮಾಡಿದರು. ಮುಂಬೈ ವಿರುದ್ಧದ ಕೊನೆಯ ಐದು ಇನ್ನಿಂಗ್ಸ್ಗಳಲ್ಲಿ ಅವರು ಎರಡು ಶತಕ ಮತ್ತು ಅರ್ಧಶತಕ ಗಳಿಸಿದ್ದಾರೆ.
RCB Tim David : ಚಿನ್ನಸ್ವಾಮಿಯಲ್ಲಿ ಟಿಮ್ ಡೇವಿಡ್ ಸುನಾಮಿ ಎಬ್ಬಿಸಿದರೂ.. ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ನಿಂದ, ಕೇವಲ 25 ಎಸೆತಗಳಲ್ಲಿ ಅಜೇಯ 70 ರನ್ ಚಚ್ಚುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.. ಆದರೆ.. ಒಂದೇ ಒಂದು ರನ್ ಅಂತರದಲ್ಲಿ ವಿಶ್ವ ದಾಖಲೆ ಸೃಷ್ಟಿಸುವಲ್ಲಿ ಹಿಂದೆ ಉಳಿದರು..
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಆರ್ಸಿಬಿ ತನ್ನ ಎರಡನೇ ಗೆಲುವು ಸಾಧಿಸಿತು. ಅತ್ತ ಚೆನ್ನೈ ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿತು.
ಆರ್ಸಿಬಿ ಬ್ಯಾಟ್ಸ್ಮನ್ಗಳು ಕೊಡುವ ಒಂದೊಂದು ಏಟಿಗೂ ಚೆನ್ನೈ ಆಟಗಾರರು ಪಂದ್ಯ ಯಾವಾಗ ಮುಗಿಯುತ್ತದೆ ಎನ್ನುವ ಪರಿಸ್ಥಿತಿಯಲ್ಲಿ ಇದ್ದರು.
IPL 2026 RCB vs SRH LIVE Updates: ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ vs ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ಈ ಉದ್ಘಾಟನಾ ಪಂದ್ಯದ ಮೂಲಕ 19ನೇ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ಚಾಲನೆ ದೊರಕಿದೆ. ಎಲ್ಲರ ಕಣ್ಣು ಇದೀಗ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಮೇಲಿದೆ. ಈ ಬಾರಿಯೂ ಕಿಂಗ್ ಕೊಹ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಭಿಮಾನಿಗಳನ್ನ ಮನರಂಜಿಸಲು ಸಜ್ಜಾಗಿದ್ದಾರೆ.
ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಷರಶಃ ಅಬ್ಬರಿಸಿದರು. ಆರಂಭಿಕರಾಗಿ ಕಣ್ಣಕ್ಕಿಳಿದ ವಿರಾಟ್ ಕೊಹ್ಲಿ ಕೇವಲ 38 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿ ಇದ್ದ ಅಜೇಯ 69 ರನ್ ಸಿಡಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಬೃಹತ್ ಮೊತ್ತದ ಗುರಿ ಬೆನ್ನತ್ತಿರುವ ಆರ್ಸಿಬಿಗೆ ಜಯದೇವ್ ಉನದ್ಕತ್ ಆರಂಭಿಕ ಆಘಾತ ನೀಡಿದ್ದಾರೆ. ಆರ್ಸಿಬಿ ಆಟಗಾರ ಫಿಲ್ ಸಾಲ್ಟ್ (8) ಉನದ್ಕತ್ ಬೌಲಿಂಗ್ನಲ್ಲಿ ಹೆನ್ರಿಕ್ ಕ್ಲಾಸೆನ್ಗೆ ಕ್ಯಾಚಿತ್ತು ಬಹುಬೇಗನೆ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಜೊತೆಗೆ ಸೇರಿಕೊಂಡಿರುವ ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಆಡುತ್ತಿದ್ದಾರೆ.
ಅಂಕಿ-ಅಂಶಗಳ ಪ್ರಕಾರ, ಸನ್ರೈಸರ್ಸ್ ಹೈದರಾಬಾದ್ ತಂಡವು ಸ್ಟ್ರಾಂಗ್ ಆಗಿದೆ. ಉಭಯ ತಂಡಗಳ ನಡುವೆ ಇಲ್ಲಿಯವರೆಗೆ ನಡೆದ 25-26 ಪಂದ್ಯಗಳಲ್ಲಿ ಹೈದರಾಬಾದ್ 14 ಬಾರಿ ಗೆದ್ದರೆ, ಆರ್ಸಿಬಿ 11 ಬಾರಿ ಮಾತ್ರ ಗೆದ್ದಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಉತ್ತಮ ದಾಖಲೆ ಹೊಂದಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಮೂಲಕ ಇಂದಿನಿಂದ ಐಪಿಎಲ್ ಹಬ್ಬ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿವೆ. ಈ ಆರಂಭಿಕ ಪಂದ್ಯದಲ್ಲಿ ಯಾರಿಗೆ ಗೆಲುವು ಸಿಗುತ್ತದೆ ಅಂತಾ ಫ್ಯಾನ್ಸ್ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.
ಐಪಿಎಲ್ 2026ಕ್ಕೂ ಮುನ್ನ ಆರ್ಸಿಬಿ ಕೆಲವು ಪ್ರಮುಖ ಹೆಜ್ಜೆಗಳನ್ನ ಇಟ್ಟಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನ ಖಾಲಿ ಇಡಲು ಫ್ರಾಂಚೈಸಿ ನಿರ್ಧರಿಸಿದೆ. ಇದಕ್ಕೆ ಕಾರಣವೇನು ಗೊತ್ತಾ?
ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಟೀಮ್ ಡೇವಿಡ್ ಸದ್ಯ ಬಿಬಿಎಲ್ನಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ.
India vs Australia 3rd T20I: ಭರವಸೆಯ ಬ್ಯಾಟರ್ ವಾಷಿಂಗ್ಟನ್ ಸುಂದರ್ ಅವರ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಭಾರತ 5 ವಿಕೆಟ್ಗಳಿಂದ ಹೋಬಾರ್ಟ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
RCB: 2025ರಲ್ಲಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಋತುವಿಗೆ ಸಿದ್ಧತೆಗಳನ್ನ ಪ್ರಾರಂಭಿಸಿದೆ. ಮಿನಿ ಹರಾಜಿಗೂ ಮುನ್ನ ಹಲವಾರು ಆಟಗಾರರನ್ನ ಬಿಡುಗಡೆ ಮಾಡುವ ಅವಕಾಶವಿದೆ ಎಂದು ತೋರುತ್ತದೆ.
ಆರ್ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲೆಂದು ಅಭಿಮಾನಿಯೊಬ್ಬ ಮೈದಾನದಲ್ಲಿ ಪ್ಲೆಕಾರ್ಡ್ ಪ್ರದರ್ಶಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
IPL 2025, RCB vs SRH: 15 ಓವರ್ವರೆಗೂ ಆರ್ಸಿಬಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಹೈದರಾಬಾದ್ ಬೌಲರ್ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಆರ್ಸಿಬಿಯ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಿದರು. ಆರ್ಸಿಬಿ ಬೌಲರ್ಗಳು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಮತ್ತು ಟಿಮ್ ಡೇವಿಡ್ ಗಾಯಗೊಂಡಿದ್ದು ಸಹ ತಂಡದ ಸೋಲಿಗೆ ಕಾರಣವಾಯಿತು.
IPL 2025, RCB vs SRH:ಆರ್ಸಿಬಿ ತಂಡವು ಈಗಾಗಲೇ ಪ್ಲೇಆಫ್ಸ್ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಇದೀಗ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಎರಡು ಸ್ಥಾನ ಅಲಂಕರಿಸಲು ಪ್ರಯತ್ನ ನಡೆಸುತ್ತಿದೆ.ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರುತ್ತಾ ಕಾದು ನೋಡಬೇಕಿದೆ.
DC vs RCB: ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರು ನೆಲದಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿದೆ.