TTD News : ಅಲಿಪಿರಿಯಿಂದ ಕಾಲ್ನಡಿಗೆಯ ಮೂಲಕ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಗಾಲಿ ಗೋಪುರದಲ್ಲಿ ದಿವ್ಯ ದರ್ಶನ ಟೋಕನ್ಗಳನ್ನು ನೀಡಲಾಗುತ್ತಿತ್ತು. ಇದೀಗ ಶುಕ್ರವಾರದಿಂದ ದಿವ್ಯ ದರ್ಶನ ಟೋಕನ್ಗಳ ವಿತರಣಾ ಕೇಂದ್ರವನ್ನು ಬದಲಾಯಿಸಲಾಗಿದೆ. ಸದ್ಯ ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್ನಲ್ಲಿಯೇ ದರ್ಶನದ ಟೋಕನ್ ವಿತರಿಸಲಾಗುತ್ತಿದೆ.
ತಿರುಪತಿ ದೇವಸ್ಥಾನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತಿರುಮಲಕ್ಕೆ ಬರುವ ಭಕ್ತರಿಗೆ ಮುಂಗಡವಾಗಿ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯವೂ ಇದೆ. ಅಲ್ಲದೆ, ಭಕ್ತರು ನೇರವಾಗಿ ಬಂದು ಉಚಿತವಾಗಿ ಗೋವಿಂದನ ದರ್ಶನ ಪಡೆಯಬಹುದು. ಆದರೆ ಇದು ಸ್ವಲ್ಪ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ. ತಿರುಪತಿ ದೇವಸ್ಥಾನದ ಅಧಿಕೃತ ವೆಬ್ಸೈಟ್ಗೆ ಹೋಗಿ ಯಾವುದೇ ಗುರುತಿನ ಚೀಟಿ ಸಲ್ಲಿಸಿ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವ ನಿಯಮ ಜಾರಿಯಲ್ಲಿತ್ತು.
ತಿರುಪತಿ ತಿರುಮಲಕ್ಕೆ ಪ್ರತಿ ದಿನ ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತಿರುಪತಿ ದೇವಸ್ಥಾನವು ಭಕ್ತರಿಗೆ ವಸತಿ ಸೌಕರ್ಯ ಕಲ್ಪಿಸಲು ಕಡಿಮೆ ದರದಲ್ಲಿ ವಸತಿ ನಿಲಯಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದುವರೆಗೆ ತೀರಾ ಕಡಿಮೆ ಇದ್ದ ತಿರುಪತಿ ತಿರುಮಲ ವಸತಿ ನಿಲಯದ ದರವನ್ನು ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಹೆಚ್ಚಿಸಿದೆ.
ಕೊರೊನಾ ಲಾಕ್ ಡೌನ್ ಕಾಲಾವಧಿಯ ಬಳಿಕ ದೇವಸ್ಥಾನ ತೆರೆದ ಬಳಿಕ ಇದುವರೆಗೆ 743 ದೇವಸ್ಥಾನದ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದು, ಇದುವರೆಗೆ ಮೂವರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.