ವೋಟ್ ಕೌಂಟಿಂಗ್ ಡೇಗೆ ವಿಜಯನಗರ ಸಜ್ಜು. ಇದಿನಿಂದಲೇ ಕೌಂಟಿಂಗ್ ಸ್ಥಳದಲ್ಲಿ 144 ಸೆಕ್ಷನ್ ಜಾರಿ. ಪ್ರೌಢದೇವರಾಯ ಕಾಲೇಜಿನ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ. ಅಹಿತಕರ ಘಟನೆ ನಡೆಯದಂತೆ ಖಾಕಿ ಮುನ್ನೆಚ್ಚರಿಕಾ ಕ್ರಮ.
ಚುನಾವಣೆಯ ವೇಳೆ ರಾಜೀನಾಮೆ ಪರ್ವ ಮುಂದುವರೆದಿದ್ದು,ಈಗ ಇದಕ್ಕೆ ಪೂರಕ ಎನ್ನುವಂತೆ ಕೂಡ್ಲಿಗಿಯ ಕೋಡಿಹಳ್ಳಿ ಭೀಮಣ್ಣ,ಹಗರಿಬೊಮ್ಮನ ಹಳ್ಳಿಯ ನೇಮಿರಾಜ್ ನಾಯ್ಕ್ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 480 ಗ್ರಾಂ ಚಿನ್ನಾಭರಣ ಮತ್ತು 6 ಲಕ್ಷ ನಗದನ್ನು ಪೊಲೀಸರು ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಕ್ರಾಸ್ ಬಳಿ ನಡೆದಿದೆ. MH 13- AZ 4201 ನಂಬರಿನ ಕಾರಿನಲ್ಲಿ ವಸ್ತುಗಳನ್ನು ಜಪ್ತಿಗೈದಿದ್ದಾರೆ.
ವಿಜಯನಗರದ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟ. ಏಕಾಏಕಿ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು. ಹೂವಿನಹಡಗಲಿಯಲ್ಲಿ ಮೂವರು ಮುಖಂಡರು ರಾಜೀನಾಮೆ. ಡಿ.ಕೆ.ಶಿವಕುಮಾರ್ಗೆ ರಾಜೀನಾಮೆ ಸಲ್ಲಿಸಿದ ಮುಖಂಡರು.
ಈ ಉತ್ಸವಗಳು ನಿನ್ನೆ, ಮೊನ್ನೆಯಿಂದ ಪ್ರಾರಂಭವಾಗಿರೋದಲ್ಲ ಎಂದು ಹಂಪಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಆನಂದ್ ಸಿಂಗ್ ಹೇಳಿದ್ದಾರೆ.. ವಿಜಯನಗರ ಅನ್ನೋದೇ ಒಂದು ಶಕ್ತಿ, ಬಹಳ ದೊಡ್ಡ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ವಿಜಯನಗರ ಸಾಮ್ರಾಜ್ಯ ಇಡೀ ಪ್ರಪಂಚಕ್ಕೆ ಫೇಮಸ್ ಎಂದಿದ್ದಾರೆ.
ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ. ವಿಜಯನಗರ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಗಲಾಟೆ. ಒಬ್ಬರು ಹಾಕಿಸಿರೋ ಬ್ಯಾನರ್ ಮತ್ತೊಬ್ರು ಕಿತ್ತು ಹಾಕಿ ಆಕ್ರೋಶ.
ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾಯಿತ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ಭರ್ಜರಿ ಉಡುಗೊರೆ ನೀಡಿದ್ದಾರೆ. 10 ಗ್ರಾಪಂಗಳ ಚುನಾಯಿತ ಸದಸ್ಯರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ. ಲಕ್ಷಕ್ಕೂ ಹೆಚ್ಚು ಹಣ, ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ.
ವಿಜಯನಗರದಲ್ಲಿ PFI ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ್ದು, PFI ಜೊತೆ ಗುರುತಿಸಿಕೊಂಡವರಿಗೆ ಪೊಲೀಸರು ವಾರ್ನ್ ಮಾಡಿದ್ದಾರೆ.
ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅಕ್ರಮ ನಡೆದಿರೋ ಆರೋಪ ಕೇಳಿಬಂದಿದೆ. ಪಾರ್ಕ್ನ ರಸ್ತೆ ಮೇಲೂ ಭೂಗಳ್ಳರು ಕಣ್ಣು ಹಾಕಿದ್ದು, ಲೇಔಟ್ನ ರಸ್ತೆಯಲ್ಲೇ ಮನೆ ನಿರ್ಮಾಣ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.