ಕಹೋ ನಾ ಪ್ಯಾರ್ ಹೈ ಎನ್ನುತ್ತಲೇ ಬಾಲಿವುಡ್ ಗೆ ಪ್ರವೇಶ ಪಡೆದಿದ್ದ ಹೃತಿಕ್ ರೋಶನ್ ಅಭಿನಯದ ಈ ಚಿತ್ರಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ.ಈ ಚಿತ್ರದಲ್ಲಿ ನಾಯಕನಾಗಿ ಹೃತಿಕ್ ರೋಶನ್ ಪಾದಾರ್ಪಣೆ ಮಾಡಿದ್ದರೆ, ನಾಯಕಿಯಾಗಿ ಅಮಿಷಾ ಪಟೇಲ್ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದ್ದರು.
ಪ್ರೇಮದ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ಹೃತಿಕ್ ರೋಶನ್ ಅವರ ತಂದೆ ರಾಕೇಶ್ ರೋಶನ್ ನಿರ್ದೇಶಿಸಿ ನಿರ್ಮಿಸಿದ್ದರು.ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಹೃತಿಕ್ ರೋಶನ್ ಅವರ ನಟನೆ ಹಾಗೂ ಡ್ಯಾನ್ಸ್ ಎಲ್ಲರ ಗಮನ ಸೆಳೆದಿತ್ತು.2000 ರಲ್ಲಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 80 ಕೋಟಿ ರೂ ಗಳಿಸುವ ಮೂಲಕ ಆ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೆ ವಿವಿಧ ವಿಭಾಗದಲ್ಲಿ ಒಟ್ಟು 92 ಪ್ರಶಸ್ತಿಗಳನ್ನೂ ಗೆದ್ದಿತ್ತು.ಆ ಮೂಲಕ ಅತಿ ಹೆಚ್ಚು ಪ್ರಶಸ್ತಿಗಳನ್ನೂ ಗೆದ್ದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ ಲಿಮ್ಕಾ ಬುಕ್ ದಾಖಲೆಯಲ್ಲಿ ಸೇರ್ಪಡೆಯಾಗಿತ್ತು.
ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ರಾಕೇಶ್ ರೋಶನ್ ತಮ್ಮ ಮೊಟ್ಟಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸ್ವೀಕರಿಸಿದರೆ, ಇನ್ನೊಂದೆಡೆಗೆ ಪಾದಾರ್ಪಣೆ ಚಿತ್ರದಲ್ಲಿಯೇ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಏಕೈಕ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಎಕ್ ಪಲ್ ಕಾ ಜೀನಾ', ನಾ ತುಮ್ ಜಾನೊ ನ ಹಮ್', "ಚಾಂದ್ ಸಿತಾರೆ' ಟೈಟಲ್ ಸಾಂಗ್ 'ಕಹೋ ನಾ ಪ್ಯಾರ್ ಹೇ ನಂತಹ ಸೂಪರ್ ಹಿಟ್ ಹಾಡುಗಳಿಂದಾಗಿ ಆ ವರ್ಷ ಅತಿ ಹೆಚ್ಚು ಕ್ಯಾಸೆಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದವು.ಈ ಚಿತ್ರದಲ್ಲಿ ಹೃತಿಕ್ ರೋಶನ್,ಅಮಿಷಾ ಪಟೇಲ್, ಅನುಪಮ್ ಖೇರ್, ದಲೀಪ್ ತಾಹಿಲ್, ಮೊಹ್ನಿಶ್ ಬಹ್ಲ್, ಆಶಿಶ್ ವಿದ್ಯಾರ್ಥಿ, ಸತೀಶ್ ಶಾ, ಫರೀದಾ ಜಲಾಲ್ ರಂತಹ ತಾರಾಗಣ ಇದೆ.
ಕನ್ನಡದ ರಥಸಪ್ತಮಿ ಚಿತ್ರವೇ ಇದಕ್ಕೆ ಸ್ಫೂರ್ತಿ:
ಬಹುತೇಕರಿಗೆ ಈ ವಿಷಯ ತಿಳಿದಿರಲಿಕ್ಕಿಲ್ಲ, ಕಹೋ ನಾ ಪ್ಯಾರ್ ಹೇ ಚಿತ್ರವು 1986 ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ರಥಸಪ್ತಮಿ ಚಿತ್ರದಿಂದ ಸ್ಫೂರ್ತಿ ಪಡೆದಿದೆ.ಎಂ.ಎಸ್.ರಾಜಶೇಖರ್ ನಿರ್ದೇಶನದ ಪ್ರೇಮಕಥಾ ಹಂದರದ ಈ ಚಿತ್ರ ಕರ್ನಾಟಕ ರಾಜ್ಯಾದ್ಯಂತ ಯಶಸ್ವಿ 25 ವಾರಗಳ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತು.
ಈಗ ಜನವರಿ 10 ರಂದು ಹೃತಿಕ್ ರೋಷನ್ ತಮ್ಮ 51ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಐಕಾನಿಕ್ ಸಿನಿಮಾ ಕಹೋ ನಾ ಪ್ಯಾರ್ ಹೈ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ.ಈ ಹಿನ್ನೆಲೆಯಲ್ಲಿ ಸಿನಿಪ್ರಿಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.