ಅರಬ್ಬರ ನಾಡಲ್ಲಿ ಮಹಿಳಾ ಟಿ20 ವಿಶ್ವಕಪ್ ಕಲರವ ಆರಂಭವಾಗಿದೆ.. ನಿನ್ನೆ ನಡೆದ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 16 ರನ್ಗಳ ಅಂತರದಲ್ಲಿ ಗೆದ್ದು ಬೀಗಿದೆ...
Women T20 World Cup 2023: ಪಾಕಿಸ್ತಾನ ಭಾರತದ ಮುಂದೆ 150 ರನ್ಗಳ ಗುರಿಯನ್ನು ನೀಡಿತ್ತು. ಜೆಮಿಮಾ ರೊಡ್ರಿಗಸ್ ಅವರ ಅಜೇಯ 53 ಮತ್ತು ರಿಚಾ ಘೋಷ್ ಅವರ ಅಜೇಯ 31 ರನ್ಗಳ ನೆರವಿನಿಂದ ಭಾರತ 19 ಓವರ್ಗಳಲ್ಲಿ 3 ವಿಕೆಟ್ಗೆ 151 ರನ್ ಗಳಿಸಿ ಗೆಲುವು ಸಾಧಿಸಿತು. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಮಿಮಾ ರೊಡ್ರಿಗಸ್ ಮತ್ತು ರಿಚಾ ಅವರನ್ನು ಹರ್ಮನ್ಪ್ರೀತ್ ಶ್ಲಾಘಿಸಿದರು. ಯಾವ ಆಟಗಾರ್ತಿಗೆ ಅವಕಾಶ ಸಿಗುತ್ತದೋ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹರ್ಮನ್ಪ್ರೀತ್ ಹೇಳಿದ್ದಾರೆ.
Women's T20 World Cup Group B Match: ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡದ ನಾಯಕು ಬಿಸ್ಮಾ ಮರೂಫ್ ಅವರ ಅದ್ಭುತ ಇನ್ನಿಂಗ್ಸ್ನಿಂದಾಗಿ ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಮರೂಫ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದು, 55 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯರಾಗಿ ಮರಳಿದರು. ಹರ್ಮನ್ಪ್ರೀತ್ ಕೌರ್ ಈ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ನಾಯಕಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.