Who is Neetu Ganghas: ನೀತು ಘಂಘಾಸ್ ಹುಟ್ಟಿದ್ದು ಜನನ 19 ಅಕ್ಟೋಬರ್ 2000. ಈಕೆ ಭಾರತದ ಖ್ಯಾತ ಬಾಕ್ಸರ್ ಆಗಿದ್ದು, ಕನಿಷ್ಠ ತೂಕ ವಿಭಾಗದಲ್ಲಿ 2023ರ ವಿಶ್ವ ಚಾಂಪಿಯನ್ ಮತ್ತು ಲೈಟ್ ಫ್ಲೈವೇಟ್‌ನಲ್ಲಿ ಎರಡು ಬಾರಿ ವಿಶ್ವ ಯುವ ಚಾಂಪಿಯನ್ ಆಗಿದ್ದಾರೆ. 2023ರ IBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕನಿಷ್ಠ ತೂಕದ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
Women’s World Championship 2023: ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನ 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಬಾಕ್ಸರ್ ನೀತು ಘಂಘಾಸ್ ಮಂಗೋಲಿಯಾದ ಬಾಕ್ಸರ್ ಅನ್ನು ಸೋಲಿಸುವ ಮೂಲಕ 5-0 ಮುನ್ನಡೆ ಸಾಧಿಸಿದ್ದರು. ಈ ಮೂಲಕ ಚಿನ್ನದ ಪದಕ ಗೆದ್ದ ನೀತು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.