ನವದೆಹಲಿ: ಸೇಕ್ರೆಡ್ ಗೇಮ್ಸ್, ಮಿರ್ಜಾಪುರ್ ಮತ್ತು ಗಂಧಿ ಬಾತ್ ನಿಂದ ಹಿಡಿದು ರಾಣಾ ನಾಯ್ಡು ಮುಂತಾದ ವೆಬ್ ಸರಣಿಗಳನ್ನು ವೀಕ್ಷಿಸಿದ ಬಳಿಕ ಪ್ರೇಕ್ಷಕರು, ಪದೇ ಪದೇ OTT ಪ್ಲಾಟ್‌ಫಾರ್ಮ್‌ಗಳು ಅಶ್ಲೀಲತೆಯ ಮಿತಿಯನ್ನು ದಾಟುತ್ತಿವೆಯೇ ಎಂದು ಪ್ರಶ್ನಿಸಲಾರಂಭಿಸಿದ್ದಾರೆ? ಅಂತಹ ಎಲ್ಲಾ ವೆಬ್ ಸರಣಿಗಳು ಹೊಸ ಸೀಸನ್‌ಗಳೊಂದಿಗೆ ವಿಭಿನ್ನ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿವೆ. ಇದರಿಂದ ಒಟಿಟಿ ಉದ್ಯಮಕ್ಕೆ ಹೊಸ ಅಪಾಯ ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆ ಅಪಾಯ ಇದೀಗ ಮುನ್ನೆಲೆಗೆ ಬಂದಂತಿದೆ. OTT ಪ್ಲಾಟ್‌ಫಾರ್ಮ್‌ಗಳ ಪ್ರತಿಕ್ರಿಯೆಯಿಂದ ಕೇಂದ್ರ ಸರ್ಕಾರವು ತೃಪ್ತರಾಗದಿದ್ದರೆ, ತಮ್ಮ ಯಾವುದೇ ವೆಬ್ ಸರಣಿ ಪ್ರದರ್ಶನವನ್ನು ಮಾಡುವ ಮೊದಲು ಆಯಾ ವೇದಿಕೆಗಳು ಸರ್ಕಾರದಿಂದ ಅನುಮತಿಯನ್ನು ಪಡೆಯಬೇಕಾದ ಬಲವಾದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-ಕಂಪ್ಯೂಟರ್ ಮೌಸ್ಗೆ ಸಂಬಂಧಿಸಿದ ಈ ಇಂಟರೆಸ್ಟಿಂಗ್ ಸಂಗತಿಗಳು ನಿಮಗೆ ತಿಳಿದಿವೆಯೇ?
ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿ
ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್‌ನಂತಹ OTT ಪ್ಲಾಟ್‌ಫಾರ್ಮ್‌ಗಳನ್ನು ಪರಿಗಣನೆಗೆ ತೆಗೆದುಕೊಂಡು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಸ್ತಾವನೆಯೊಂದನ್ನು ಕಳುಹಿಸಿದೆ. ಆ ಪ್ರಸ್ತಾವನೆಗೆ ಉತ್ತರಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅಂತಹ ಕಂಟೆಂಟ್ ನಿಯಂತ್ರಿಸಲು ಸಮಿತಿಯನ್ನು ಏಕೆ ರಚಿಸಬಾರದು ಎಂದು ಸಚಿವಾಲಯವು ತನ್ನ ಪ್ರಸ್ತಾವನೆಯಲ್ಲಿ ಪ್ರಶ್ನಿಸಿದೆ, ಈ OTT ಪ್ಲಾಟ್‌ಫಾರ್ಮ್‌ಗಳು ಯಾವುದೇ ಪ್ರದರ್ಶನವನ್ನು ಮಾಡುವ ಮೊದಲು ತಮ್ಮ ಸ್ಕ್ರಿಪ್ಟ್‌ಗಳನ್ನು ಪರಿಶೀಲನೆಗೆ ಕಳುಹಿಸಬಹುದೇ ಎಂದು ಪ್ರಶ್ನಿಸಿದೆ. ಈ ವೇದಿಕೆಗಳಲ್ಲಿನ ಎಲ್ಲಾ ವಿಷಯಗಳು ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿಲ್ಲ ಎಂದು ಸರ್ಕಾರವು ಕಳವಳ ವ್ಯಕ್ತಪಡಿಸಿರುವ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಅಶ್ಲೀಲತೆಯನ್ನು ತಪ್ಪಿಸಲು OTT ಪ್ಲಾಟ್‌ಫಾರ್ಮ್‌ಗಳಿಗೆ ಸೂಚಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-ತನಗಿಂತ ಕಿರಿಯ ವಯಸ್ಸಿನ ಯುವಕರತ್ತ ಮಹಿಳೆಯರೇಕೆ ಆಕರ್ಷಿತರಾಗುತ್ತಾರೆ? ಕಾರಣ ರೋಚಕವಾಗಿದೆ!
ಎಲ್ಲರೂ ವೀಕ್ಷಿಸುವಂತಿರಬೇಕು ಕಂಟೆಂಟ್
ದೇಶದ ಸಮಷ್ಟಿ ಪ್ರಜ್ಞೆಯನ್ನು ಬಿಂಬಿಸುವ ವಿಷಯ ಇರಬೇಕು ಎಂದು ಸಚಿವರು ಹೇಳಿದ್ದಾರೆ. ಈ ಪ್ಲಾಟ್‌ಫಾರ್ಮ್‌ಗಳು ಅಶ್ಲೀಲತೆಯನ್ನು ತಪ್ಪಿಸಬೇಕು ಮತ್ತು ಎಲ್ಲಾ ವಯೋಮಾನದ ಜನರು ಒಟ್ಟಿಗೆ ಕುಳಿತು ಕಂಟೆಂಟ್ ವೀಕ್ಷಿಸಲು ಇಂತಹ ವಿಷಯಗಳನ್ನು ಆಯ್ಕೆ ಮಾಡಬೇಕು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಶ್ಲೀಲತೆ, ಸಂಸ್ಕೃತಿಯ ಪಾಶ್ಚಿಮಾತ್ಯೀಕರಣ, ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುವುದು ಮತ್ತು ಭಾರತೀಯ ಸಂಸ್ಕೃತಿಯನ್ನು ಪುರಾತನವೆಂದು ತೋರಿಸುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ಈ ಸಂಗತಿಯ ಬಗ್ಗೆಯೂ ಕೂಡ ಸಚಿವಾಲಯವು OTT ಪ್ಲಾಟ್‌ಫಾರ್ಮ್‌ಗಳಿಂದ ಅಭಿಪ್ರಾಯಗಳನ್ನು ಕೋರಿದೆ. ಇದಕ್ಕಾಗಿ ಸಚಿವಾಲಯ ಎರಡು ವಾರಗಳ ಕಾಲಾವಕಾಶ ನೀಡಿದೆ. ಆದಾಗ್ಯೂ, ಅಂತಹ ನಿಷೇಧವು ಸೃಜನಶೀಲ ತೊಂದರೆಗಳಿಗೆ ಕಾರಣವಾಗಬಹುದು ಎಂದು OTT ಪ್ಲಾಟ್‌ಫಾರ್ಮ್‌ಗಳು ನಂಬುತ್ತವೆ. ಹಣದ ನಷ್ಟವೂ ಆಗಬಹುದು. ಹೆಚ್ಚಿನ ಪ್ರೇಕ್ಷಕರು ಯುವಕರು ಮತ್ತು ಅವರನ್ನು ಗಮನದಲ್ಲಿಟ್ಟುಕೊಂಡು ವಿಷಯವನ್ನು ರಚಿಸಬೇಕಾಗಿದೆ ಎಂಬುದು ವೇದಿಕೆಗಳ ಅಭಿಪ್ರಾಯವಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.