BSNL ಗ್ರಾಹಕರಿಗೆ ದೀಪಾವಳಿ ಗಿಫ್ಟ್ , ಸಿಗಲಿದೆ ಸಣ್ಣ ರಿಚಾರ್ಜ್ ನ 30 ದಿನಗಳ ಪ್ಲಾನ್

ಹಬ್ಬದ ಕೊಡುಗೆಯ ಸಮಯದಲ್ಲಿ,  247 ರೂ , 398 ರೂ ಮತ್ತು 499 ರೂ ಗಳ BSNL ವಿಶೇಷ ಟಾರಿಫ್ ವೋಚರ್‌ಗಳಲ್ಲಿ  5 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸಿಗಲಿದೆ.

Written by - Ranjitha R K | Last Updated : Oct 12, 2021, 05:55 PM IST
  • BSNL ಈ ಹಬ್ಬದ ಸೀಸನ್ ಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ.
  • BSNL ಪ್ರಿಪೇಯ್ಡ್ ಪ್ಲಾನ್ ನೊಂದಿಗೆ ಹೆಚ್ಚುವರಿ ವ್ಯಾಲಿಡಿಟಿಯನ್ನು ನೀಡುತ್ತಿದೆ.
  • ಈ ಪ್ರಯೋಜನಗಳೊಂದಿಗೆ ಅಗ್ಗದ ಯೋಜನೆಯು 247ರೂ ಗೆ ಲಭ್ಯ
BSNL ಗ್ರಾಹಕರಿಗೆ ದೀಪಾವಳಿ ಗಿಫ್ಟ್ , ಸಿಗಲಿದೆ ಸಣ್ಣ ರಿಚಾರ್ಜ್ ನ 30 ದಿನಗಳ ಪ್ಲಾನ್ title=
BSNL ಈ ಹಬ್ಬದ ಸೀಸನ್ ಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. (file photo)

ನವದೆಹಲಿ : ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈ ಹಬ್ಬದ ಸೀಸನ್ ಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ಹಬ್ಬದ ಕೊಡುಗೆ 2021ರ ಅಕ್ಟೋಬರ್ 7 ರಿಂದ ನವೆಂಬರ್ 8 ರವರೆಗೆ ಇರಲಿದೆ. ಬಿಎಸ್ಎನ್ಎಲ್ ಫೆಸ್ಟಿವಲ್ ಆಫರ್ ಗಳಲ್ಲಿ (BSNL Festival offer) ಆಯ್ದ ಪ್ರಿಪೇಯ್ಡ್ ಪ್ಲಾನ್ ಗಳೊಂದಿಗೆ ಹೆಚ್ಚುವರಿ ಸಿಂಧುತ್ವ ಮತ್ತು ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಈ ಸವಲತ್ತುಗಳನ್ನು ಹೊಂದಿರುವ ಅಗ್ಗದ ಪ್ಲಾನ್ 247 ರೂ. 

BSNL ನ ಈ ಯೋಜನೆಗಳ ಮೇಲೆ ಕೊಡುಗೆಗಳು :
ಹಬ್ಬದ ಕೊಡುಗೆಯ ಸಮಯದಲ್ಲಿ,  247 ರೂ , 398 ರೂ ಮತ್ತು 499 ರೂ ಗಳ BSNL ವಿಶೇಷ ಟಾರಿಫ್ ವೋಚರ್‌ಗಳಲ್ಲಿ  5 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸಿಗಲಿದೆ. 485 ರೂ .ಮತ್ತು 499 ರೂ  recharge paln ನಲ್ಲಿ ಹೆಚ್ಚುವರಿ 0.5GB ಮತ್ತು 1GB ಡೇಟಾ ಪ್ರತಿ ದಿನ ಪಡೆಯಬಹುದು. ಇನ್ನು  1999 ರೂ.  ಪ್ಲಾನ್‌ನೊಂದಿಗೆ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಕೂಡಾ ಪಡೆಯಬಹುದು.

ಇದನ್ನೂ ಓದಿ : Whatsapp New Feature: ಬದಲಾದ Voice Message ಪದ್ಧತಿ, ಭಾರಿ ಉತ್ಸಾಹದಲ್ಲಿ ಬಳಕೆದಾರರು

BSNL  247 ರೂ. ಪ್ರಿಪೇಯ್ಡ್ ಪ್ಲಾನ್ :
 247 ರೂ. ಪ್ರಿಪೇಯ್ಡ್ ಪ್ಲಾನ್ 50 ಜಿಬಿ ಹೈ ಸ್ಪೀಡ್ ಡೇಟಾದೊಂದಿಗೆ (Speed data) ಬರುತ್ತದೆ. ಡೇಟಾ ಮುಗಿದ ನಂತರ, ಡೇಟಾ ವೇಗ 80 ಕೆಬಿಪಿಎಸ್ ಗೆ ಇಳಿಯುತ್ತದೆ. ಇದು ಬಿಎಸ್‌ಎನ್‌ಎಲ್ (BSNL) ಟ್ಯೂನ್ಸ್ ಮತ್ತು ಇರೋಸ್ ನೌ ಸ್ಟ್ರೀಮಿಂಗ್ ಪ್ರಯೋಜನಗಳೊಂದಿಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಸಹ ನೀಡುತ್ತದೆ. ಈ ಯೋಜನೆಯ ಮಾನ್ಯತೆ 35 ದಿನಗಳಾಗಿರುತ್ತದೆ.

BSNL  398 .ರೂ ಪ್ರಿಪೇಯ್ಡ್ ಪ್ಲಾನ್ :
 398 ರೂ. ಪ್ರಿಪೇಯ್ಡ್ ಪ್ಲಾನ್ ಬಳಕೆದಾರರಿಗೆ ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯವನ್ನು ನೀಡುತ್ತದೆ.ಅಲ್ಲದೆ ದಿನಕ್ಕೆ 100 ಕೂಡಾ ಸಿಗಲಿದೆ. ಸೇಲ್ ನ ಸಮಯದಲ್ಲಿ ಯೋಜನೆಯ ಮಾನ್ಯತೆಯು 35 ದಿನಗಳಾಗಿರುತ್ತದೆ.

BSNL  485 ರೂ. ಪ್ರಿಪೇಯ್ಡ್ ಯೋಜನೆ :
 485 ರೂ.  ಪ್ಲಾನ್ ದಿನಕ್ಕೆ ಹೆಚ್ಚುವರಿ 0.5 ಜಿಬಿ ಡೇಟಾವನ್ನು ನೀಡುತ್ತದೆ. ಅಂದರೆ ಈ ಸೇಲ್ ಅವಧಿಯಲ್ಲಿ ಬಳಕೆದಾರರು ದಿನಕ್ಕೆ ಒಟ್ಟು 3 ಜಿಬಿ ಡಾಟಾವನ್ನು ಆನಂದಿಸಬಹುದು. 485 ರೂ . ಪ್ಲಾನ್ ಅನಿಯಮಿತ ಕರೆಗಳನ್ನು (unlimited calling) ನೀಡುತ್ತದೆ. ದಿನಕ್ಕೆ 100 SMS ಜೊತೆಗೆ ಅನಿಯಮಿತ ಡೇಟಾ ಮತ್ತು 1.5GB ಡೇಟಾ ಸಿಗುತ್ತದೆ. ಇದರ ನಂತರ ಡಾಟಾ ಸ್ಪೀಡ್ 40 Kbps ಗೆ ಇಳಿಸಲಾಗುತ್ತದೆ. 

ಇದನ್ನೂ ಓದಿ : Reliance Jio ಗ್ರಾಹಕರಿಗೆ ಸಂತಸದ ಸುದ್ದಿ, Quizನಲ್ಲಿ ಪಾಲ್ಗೊಂಡು Free Internet ಹಾಗೂ ಇತರ ಬಹುಮಾನಗಳನ್ನು ಗೆಲ್ಲಿ

BSNL  499 ರೂ. ಪ್ರಿಪೇಯ್ಡ್ ಪ್ಲಾನ್ :
BSNL  499 ರೂ ಪ್ಲಾನ್‌ನೊಂದಿಗೆ ದಿನಕ್ಕೆ 1GB ಡೇಟಾವನ್ನು ನೀಡುತ್ತಿದೆ. ಅಂದರೆ 499 ರೂ . ಪ್ರಿಪೇಯ್ಡ್ ಪ್ಲಾನ್ ಈಗ 1.5GB ದೈನಂದಿನ ಡೇಟಾವನ್ನು 90 ದಿನಗಳ ಮಾನ್ಯತೆ ಮತ್ತು ಇತರ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯು ಅನಿಯಮಿತ ಕರೆ ಮಾಡುವ ಸೌಲಭ್ಯವನ್ನೂ ಹೊಂದಿದೆ.

BSNL 1999 ರೂ  ಪ್ರಿಪೇಯ್ಡ್ ಯೋಜನೆ:
BSNL ನ  1999 ರೂ ಯೋಜನೆಯು ಆಫರ್ (BSNL offer) ಅವಧಿಯಲ್ಲಿ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಪಡೆಯುತ್ತಿದೆ. ಇದು ವಾರ್ಷಿಕ ಯೋಜನೆಯಾಗಿದ್ದು, ಹಬ್ಬದ ಕೊಡುಗೆಗಳೊಂದಿಗೆ ಇದರ ಮಾನ್ಯತೆಯನ್ನು 365 ದಿನಗಳಿಂದ 395 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಉಚಿತ PRBT ಜೊತೆಗೆ ಅನಿಯಮಿತ ಹಾಡು ಬದಲಾವಣೆ ಆಯ್ಕೆ ಮತ್ತು ಎರೋಸ್ ನೌ (eros now ) ಮನರಂಜನಾ ಸೇವೆಯನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು ಒಟ್ಟು 600GB ಡೇಟಾವನ್ನು ಹೆಚ್ಚಿನ ವೇಗದಲ್ಲಿ ಆನಂದಿಸುತ್ತಾರೆ ನಂತರ ವೇಗವು 80 Kbps ಗೆ ಇಳಿಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News