Assembly Elections Result 2022: ECI ವೆಬ್‌ಸೈಟ್ ಮತ್ತು ಮತದಾರರ ಸಹಾಯವಾಣಿಯಲ್ಲಿ ಈ ರೀತಿ ಎಲೆಕ್ಷನ್ ರಿಸಲ್ಟ್ ಪರಿಶೀಲಿಸಿ

Assembly Elections Result 2022 : ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮಾರ್ಚ್ 10 ರಂದು ಹೊರಬೀಳಲಿದೆ ಮತ್ತು ಈ ಫಲಿತಾಂಶಗಳಿಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ರಾಜ್ಯಗಳಲ್ಲಿ ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಸೇರಿವೆ. ನೀವು ಚುನಾವಣಾ ಆಯೋಗದ ವೆಬ್‌ಸೈಟ್ ಮತ್ತು ಆ್ಯಪ್ ಮೂಲಕ ಫಲಿತಾಂಶಕ್ಕೆ ಸಂಬಂಧಿಸಿದ ಪ್ರತಿ ಅಪ್‌ಡೇಟ್ ಅನ್ನು ಸಹ ಪರಿಶೀಲಿಸಬಹುದು.

Written by - Yashaswini V | Last Updated : Mar 10, 2022, 07:02 AM IST
  • ಮಾರ್ಚ್ 10 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.
  • ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಪ್ರತಿಯೊಂದು ನವೀಕರಣವನ್ನು ಪಡೆಯಲು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್ ಅನ್ನು ಬಳಸಬಹುದು.
  • ಚುನಾವಣಾ ಆಯೋಗದ ವೆಬ್‌ಸೈಟ್ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಲು ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ
Assembly Elections Result 2022:   ECI ವೆಬ್‌ಸೈಟ್ ಮತ್ತು ಮತದಾರರ ಸಹಾಯವಾಣಿಯಲ್ಲಿ ಈ ರೀತಿ ಎಲೆಕ್ಷನ್ ರಿಸಲ್ಟ್ ಪರಿಶೀಲಿಸಿ  title=
How to check election results

Assembly Elections Result 2022 : ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಚುನಾವಣಾ ಅಲೆ ಜೋರಾಗಿ ನಡೆಯುತ್ತಿದ್ದು, ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇಂದು ಅಂದರೆ ಮಾರ್ಚ್ 10 ರಂದು ಐದು ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದ್ದು ಯಾವ ಪಕ್ಷವು ಯಾವ ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂಬುದು ನಿರ್ಧಾರವಾಗಲಿದೆ. ಮಾರ್ಚ್ 10 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಪ್ರತಿಯೊಂದು ನವೀಕರಣವನ್ನು ನೀವು ಪಡೆಯಲು ಬಯಸಿದರೆ, ಅದಕ್ಕಾಗಿ ನೀವು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್ ಅನ್ನು ಬಳಸಬಹುದು.

ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಮತ್ತು ಚುನಾವಣಾ ಆಯೋಗದ (Election Commissions) ವೆಬ್‌ಸೈಟ್‌ನಲ್ಲಿ, ಮತಗಳ ಎಣಿಕೆಗೆ ಸಂಬಂಧಿಸಿದ ಪ್ರತಿ ಕ್ಷಣದ ನವೀಕರಣಗಳನ್ನು ನೀವು ಪಡೆಯುತ್ತೀರಿ. ಇದಕ್ಕಾಗಿ ನೀವು ಇಡೀ ದಿನ ಟಿವಿ ಮುಂದೆ ಕುಳಿತುಕೊಳ್ಳುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಮೊಬೈಲ್ ಫೋನ್ ಮೂಲಕ ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಿಮ್ಮ ಆದ್ಯತೆಯ ಪ್ರದೇಶದ ನವೀಕರಣವನ್ನು ನೀವು ಪರಿಶೀಲಿಸಬಹುದು. ವೋಟರ್ ಹೆಲ್ಪ್‌ಲೈನ್ ಅಪ್ಲಿಕೇಶನ್ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್ ಮೂಲಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು ಎಂಬುದನ್ನು ನಾವು ಇಲ್ಲಿ ತಿಳಿಸಲಿದ್ದೇವೆ.

ಇದನ್ನೂ ಓದಿ- Aadhaar Card: ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಡೌನ್‌ಲೋಡ್ ಮಾಡಿ, ಸುಲಭ ಮಾರ್ಗ ತಿಳಿಯಿರಿ

ECI ವೆಬ್‌ಸೈಟ್ ಮೂಲಕ ಫಲಿತಾಂಶ ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ:
ಹಂತ 1-
ಇದಕ್ಕಾಗಿ ನೀವು ಮೊದಲು ಚುನಾವಣಾ ಆಯೋಗದ ವೆಬ್‌ಸೈಟ್ https://results.eci.gov.in ಗೆ ಭೇಟಿ ನೀಡಬೇಕು. 

ಹಂತ 2- ಇಲ್ಲಿ ನೀವು ವಿಧಾನಸಭಾ ಕ್ಷೇತ್ರ ಮಾರ್ಚ್-2022 ಗೆ ಸಾರ್ವತ್ರಿಕ ಚುನಾವಣೆಯ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

ಹಂತ 3- ಇದರ ನಂತರ, ನೀವು ಚುನಾವಣಾ ಫಲಿತಾಂಶ (Election Results) ಪರಿಶೀಲಿಸಲು ಇಚ್ಚಿಸುವ ರಾಜ್ಯ ಮತ್ತು ಕ್ಷೇತ್ರವನ್ನು ಆಯ್ಕೆ ಮಾಡುವ  ಮೂಲಕ ಇತ್ತೀಚಿನ ಫಲಿತಾಂಶಗಳನ್ನು ನೀವು ಪರಿಶೀಲಿಸಬಹುದಾದ ಹೊಸ ವಿಂಡೋ ತೆರೆಯುತ್ತದೆ.

ಹಂತ 4- ಈ ವಿಂಡೋ ಮಾರ್ಚ್ 10 ರಂದು ಬೆಳಿಗ್ಗೆ 8 ಗಂಟೆ ನಂತರವೇ  ಸಕ್ರಿಯವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ- ಪರೀಕ್ಷೆ ವೇಳೆ ಇಂಟರ್ನೆಟ್ ಮೇಲೆ ನಿರ್ಬಂಧ, ಸರ್ಕಾರಕ್ಕೆ ವರದಿ ಕೇಳಿದ ಕಲ್ಕತ್ತಾ ಹೈಕೋರ್ಟ್

ECI ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ?
ಹಂತ 1-
ಇದಕ್ಕಾಗಿ, ನೀವು ಮೊದಲು Google Play Store ಅಥವಾ App Store ಗೆ ಭೇಟಿ ನೀಡುವ ಮೂಲಕ ECI ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸಬೇಕು.

ಹಂತ 2- ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಅದನ್ನು ತೆರೆಯಿರಿ ಮತ್ತು ಅಲ್ಲಿ ನೋಂದಾಯಿಸಿ.

ಹಂತ 3- ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಅಸೆಂಬ್ಲಿ ಚುನಾವಣೆ 2022 ರ ಫಲಿತಾಂಶದ ಆಯ್ಕೆಯು ಮುಖಪುಟದಲ್ಲಿ ಲಭ್ಯವಿರುತ್ತದೆ.

ಹಂತ 4- ಇದರ ನಂತರ ನೀವು ನಿಮ್ಮ ಪ್ರದೇಶದ ಇತ್ತೀಚಿನ ಫಲಿತಾಂಶಗಳನ್ನು ಪರಿಶೀಲಿಸಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News