ಕೇವಲ 2.48 ಲಕ್ಷ ರೂ.ಗೆ ಬಜಾಜ್ ಹೊರ ತಂದಿದೆ ಕಾರು! ಮೈಲೇಜ್ ಕೂಡಾ ಸೂಪರ್

Bajaj qute car:ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಬಜಾಜ್ ತನ್ನ ಬಜಾಜ್ ಕ್ಯೂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 2.48 ಲಕ್ಷ ರೂ. 

Written by - Ranjitha R K | Last Updated : Jan 24, 2023, 02:48 PM IST
  • ನಮ್ಮ ದೇಶದಲ್ಲಿ ಅಗ್ಗದ ಕಾರುಗಳಿಗೆ ಬೇಡಿಕೆ ಜಾಸ್ತಿ.
  • ನ್ಯಾನೋ, ಆಲ್ಟೊ ಸಾಲಿನಲ್ಲಿ ಬಜಾಜ್ ಕ್ಯೂಟ್
  • ಬಜಾಜ್‌ನ ಕ್ಯೂಟ್ ಕ್ವಾಡ್ರೈಸಿಕಲ್ ವಿಭಾಗದಲ್ಲಿ ಬರುತ್ತದೆ.
ಕೇವಲ 2.48 ಲಕ್ಷ ರೂ.ಗೆ ಬಜಾಜ್ ಹೊರ ತಂದಿದೆ ಕಾರು! ಮೈಲೇಜ್ ಕೂಡಾ ಸೂಪರ್ title=

Bajaj qute car : ನಮ್ಮ ದೇಶದಲ್ಲಿ ಅಗ್ಗದ ಕಾರುಗಳಿಗೆ ಬೇಡಿಕೆ ಜಾಸ್ತಿ. ಒಂದು ಕಾಲದಲ್ಲಿ ಟಾಟಾ ತನ್ನ ಟಾಟಾ ನ್ಯಾನೋವನ್ನು ಸಾಮಾನ್ಯ ಜನರಿಗಾಗಿ ಬಿಡುಗಡೆ ಮಾಡಿತ್ತು. ಮಾರುತಿಯ ಆಲ್ಟೊ ಕೂಡಾ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಈಗ ಈ ಸಾಲಿಗೆ ಮತ್ತೊಂದು ಕಾರು ಸೇರ್ಪಡೆಯಾಗಿದೆ.  ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಬಜಾಜ್ ತನ್ನ ಬಜಾಜ್ ಕ್ಯೂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ ಇದು ವಾಣಿಜ್ಯ ಬಳಕೆಗೆ ಮಾತ್ರ ಮೀಸಲಿತ್ತು. ಆದರೆ ಶೀಘ್ರದಲ್ಲೇ ಖಾಸಗಿ ಖರೀದಿದಾರರು ಕೂಡಾ ಇದನ್ನು ಖರೀದಿಸಲು ಸಾಧ್ಯವಾಗುತ್ತದೆ. ಅಂದರೆ ಯಾವುದೇ ಇತರ ಬೈಕ್ ಅಥವಾ ಕಾರಿನ ಬದಲಿಗೆ ಬಜಾಜ್ ಕ್ಯೂಟ್ ಅನ್ನು ಖರೀದಿಸಬಹುದಾಗಿದೆ. 

ಬಜಾಜ್‌ನ ಕ್ಯೂಟ್ ಕ್ವಾಡ್ರೈಸಿಕಲ್ ವಿಭಾಗದಲ್ಲಿ ಬರುತ್ತದೆ. ಈ ವಿಭಾಗವನ್ನು ಮೂರು ಚಕ್ರ ಮತ್ತು ನಾಲ್ಕು ಚಕ್ರಗಳ ನಡುವೆ ಇರಿಸಲಾಗಿದೆ. ಈ ನಿರ್ದಿಷ್ಟ ವಿಭಾಗದ ಕಾರಣದಿಂದಾಗಿ, ಕಂಪನಿಯು ಇದನ್ನು ಹೊರತರಲು ಬಹಳ ಸಮಯ ತೆಗೆದುಕೊಂಡಿತ್ತು. ಕಂಪನಿಯು ಆಟೋ ರಿಕ್ಷಾಕ್ಕೆ ಪರ್ಯಾಯವಾಗಿ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 2.48 ಲಕ್ಷ ರೂ. ಆಟೋ ರಿಕ್ಷಾದಂತೆಯೇ ಈ ಕಾರಿನಲ್ಲಿ ಚಾಲಕ ಸೇರಿದಂತೆ ನಾಲ್ವರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇರುತ್ತದೆ.  

ಇದನ್ನೂ ಓದಿ :  ಯೂಟ್ಯೂಬ್‌ನಲ್ಲಿ ವೀಡಿಯೊ ಲೈಕ್ ಮಾಡಿದರೂ ಹಣ ಸಿಗುತ್ತಾ?

ಬೈಕ್ ಬದಲಿಗೆ ಕಾರು ಖರೀದಿ ಸಾಧ್ಯ : 
ಪ್ರಸ್ತುತ ಬಜಾಜ್ ಕ್ಯೂಟ್ ವಾಣಿಜ್ಯ ಬಳಕೆಗೆ ಮಾತ್ರ ಲಭ್ಯವಿದೆ. ಆದಾಗ್ಯೂ, ಶೀಘ್ರದಲ್ಲೇ ಇದನ್ನು ಈ ದೇಶದಲ್ಲಿ ಖಾಸಗಿ ಬಳಕೆಗಾಗಿ ಖರೀದಿಸುವುದು ಸಾಧ್ಯವಾಗಲಿದೆ. ಬಜಾಜ್ ಅಂತಿಮವಾಗಿ ಖಾಸಗಿ/ಸಾರಿಗೆಯೇತರ ವಿಭಾಗದಲ್ಲಿ ಕ್ಯೂಟ್‌ ಬಿಡುಗಡೆಗೆ ಅನುಮೋದನೆ ಪಡೆದುಕೊಂಡಿದೆ. ಈ ಕಾರಿನ ಗರಿಷ್ಠ ವೇಗವು 70 ಕಿಮೀ/ಗಂಟೆಗೆ ಸೀಮಿತವಾಗಿರುತ್ತದೆ ಎನ್ನಲಾಗಿದೆ. 

ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗುವುದರಿಂದ ಅದರ ತೂಕವು 17 ಕೆಜಿಯಷ್ಟು ಹೆಚ್ಚಾಗಿದೆ. ಪೆಟ್ರೋಲ್ ಮತ್ತು CNG ಆಯ್ಕೆಗಳಲ್ಲಿ ಈ ಕಾರು ಬರುತ್ತದೆ. ಲಭ್ಯವಿರಲಿದೆ. 

ಇದನ್ನೂ ಓದಿ :  Zomatoದಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಎಚ್ಚರ! ಎಚ್ಚರ! ಈ ಹಗರಣದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ

ಬಜಾಜ್ ಕ್ಯೂಟ್ 4W 216 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 10.8  ಹಾರ್ಸ್ ಪವರ್ ಮತ್ತು 16.1 ಎನ್ಎಂ ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News