ಈ WhatsApp ಅಪ್ಲಿಕೇಶನ್‌ಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು, ಎಚ್ಚರ!

ಎಲ್ಲೆಲ್ಲೂ ನಕಲಿ ಅಪ್ಲಿಕೇಶನ್‌ಗಳ ಹಾವಳಿ ಹೆಚ್ಚಾಗಿದೆ. ವಾಟ್ಸಾಪ್ ಕೂಡ ಇದಕ್ಕೆ ಹೊರತಾಗಿಲ್ಲ. ನೀವು ನಿಮ್ಮ ಸ್ಮಾರ್ಟ್ಫೋನ್ ಗಳಲ್ಲಿ ವಾಟ್ಸಾಪ್ ಡೌನ್ಲೋಡ್ ಮಾಡುವ ಮೊದಲು ಈ ಸುದ್ದಿಯನ್ನು ತಪ್ಪದೇ ಓದಿ.

Written by - Yashaswini V | Last Updated : Jul 13, 2022, 11:36 AM IST
  • ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಮಾಹಿತಿ
  • ಈ ನಕಲಿ ಆಪ್ ಬಗ್ಗೆ ಇರಲಿ ಎಚ್ಚರ
  • ದಾಳಿಕೋರರ ತಾಣವಾಗಿ ಮಾರ್ಪಟ್ಟಿರುವ ವಾಟ್ಸಾಪ್ ಕ್ಷಣಮಾತ್ರದಲ್ಲಿ ನಿಮ್ಮನ್ನು ಬಡವರನ್ನಾಗಿ ಮಾಡಬಹುದು
ಈ WhatsApp ಅಪ್ಲಿಕೇಶನ್‌ಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು, ಎಚ್ಚರ! title=
Fake WhatsApp Version

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಹೊಂದಿರುವ ಬಹುತೇಕ ಜನರು ಜನಪ್ರಿಯ  ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ ವಾಟ್ಸಾಪ್ ಅನ್ನು ಬಳಸುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ದಾಳಿಕೋರರ ತಾಣವಾಗಿ ಮಾರ್ಪಟ್ಟಿರುವ ವಾಟ್ಸಾಪ್ ಕ್ಷಣಮಾತ್ರದಲ್ಲಿ ನಿಮ್ಮನ್ನು ಬಡವರನ್ನಾಗಿ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ವಾಟ್ಸಾಪ್‌ನ ಕೆಲವು ನಕಲಿ ಅಪ್ಲಿಕೇಶನ್‌ಗಳು ಜನರಿಗೆ ಟೆನ್ಶನ್ ನೀಡುತ್ತಿವೆ. ಈ ಕುರಿತಂತೆ ಸ್ವತಃ ಮಾಹಿತಿ ಹಂಚಿಕೊಂಡಿರುವ ವಾಟ್ಸಾಪ್‌ನ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್, ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಅನುಸರಿಸಬೇಕಾದ ಕೆಲವು ಸುಳಿವುಗಳ ಬಗ್ಗೆಯೂ ಸಲಹೆ ನೀಡಿದ್ದಾರೆ.

ವಾಟ್ಸಾಪ್‌ನ ಮುಖ್ಯಸ್ಥ  ವಿಲ್ ಕ್ಯಾತ್‌ಕಾರ್ಟ್ ಮಾರ್ಪಡಿಸಿದ/ನಕಲಿ ವಾಟ್ಸಾಪ್ ಆವೃತ್ತಿಗಳೊಂದಿಗೆ ಸಮಸ್ಯೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅದು ಅನುಮಾನಾಸ್ಪದವಾಗಿ ಧ್ವನಿಸುವುದಿಲ್ಲ ಆದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ ಪರಿಣಾಮ ಬೀರಬಹುದು ಎಂದವರು ಎಚ್ಚರಿಕೆಯ ಸಂದೇಶವನ್ನೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ- ಕೈಗೆಟಕುವ ದರದಲ್ಲಿ ಡ್ಯುಯಲ್ ಸ್ಕ್ರೀನ್ ಫೋನ್ ಪರಿಚಯಿಸಿದ ನೋಕಿಯಾ

ನಕಲಿ ವಾಟ್ಸಾಪ್‌ನ  ಹಾವಳಿ:
ಈ ಥ್ರೆಡ್‌ನಲ್ಲಿ, ವಾಟ್ಸಾಪ್‌ನ ಈ ಮಾರ್ಪಡಿಸಿದ ಆವೃತ್ತಿಗಳಲ್ಲಿ ಭದ್ರತಾ ತಂಡವು ಕಂಡುಹಿಡಿದ ಗುಪ್ತ ಮಾಲ್‌ವೇರ್ ಕುರಿತು ವಿಲ್ ಕ್ಯಾತ್‌ಕಾರ್ಟ್  ಮಾಹಿತಿ ನೀಡಿದ್ದು, ಈ ಅಪ್ಲಿಕೇಶನ್‌ಗಳು Play Store ನ ಹೊರಗೆ ಲಭ್ಯವಿದ್ದು, "HeyMods" ಎಂಬ ಡೆವಲಪರ್‌ಗೆ Hey Whatsapp ಮತ್ತು ಇತರ ಅಪ್ಲಿಕೇಶನ್‌ಗಳನ್ನು ಸಂಯೋಜಿಸಲು ಸುಲಭವಾಗಿಸುತ್ತದೆ ಎಂದಿದ್ದಾರೆ.

ಅಂತಹ ಅಪ್ಲಿಕೇಶನ್‌ಗಳು ಹೊಸ ವೈಶಿಷ್ಟ್ಯಗಳನ್ನು ಭರವಸೆ ನೀಡುತ್ತವೆ.  ಆದರೆ ನಿಮ್ಮ ಸಾಧನಗಳಿಂದ ವೈಯಕ್ತಿಕ ಮಾಹಿತಿಯನ್ನು ಕದಿಯುವುದು ಅವರ ಏಕೈಕ ಉದ್ದೇಶವಾಗಿದೆ. ಈ ಅಪ್ಲಿಕೇಶನ್‌ಗಳ ಕುರಿತು ವಿವರಗಳನ್ನು ಗೂಗಲ್ನೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಇಂತಹ ನಕಲಿ  ಆಪ್‌ಗಳನ್ನು ವಾಟ್ಸಾಪ್ ಪತ್ತೆ ಮಾಡುವ ಮತ್ತು ನಿರ್ಬಂಧಿಸುವ ಕಾರ್ಯವನ್ನು ವಾಟ್ಸಾಪ್  ಮುಂದುವರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Smartphone ಗೆ ಮಳೆ ನೀರು ಸೇರಿಕೊಂಡಿದೆಯಾ? ಕೆಲವೇ ನಿಮಿಷಗಳಲ್ಲಿ ಈ ರೀತಿ ನೀರನ್ನು ಹೊರತೆಗೆಯಿರಿ

ವಾಟ್ಸಾಪ್ ನಕಲಿ ಆಪ್‌ಗಳ ವಿರುದ್ಧ ಜಾರಿ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಮತ್ತು ಅಂತಹ ಡೆವಲಪರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲು ಕಾನೂನು ಆಯ್ಕೆಗಳನ್ನು ಅನುಸರಿಸುತ್ತದೆ ವಾಟ್ಸಾಪ್ ತಿಳಿಸಿದೆ. ಜೊತೆಗೆ ಇಂತಹ ನಕಲಿ ಆಪ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಬಳಕೆದಾರರಿಗೆ ಸಲಹೆ ನೀಡಿರುವ ವಾಟ್ಸಾಪ್, ವಾಟ್ಸಾಪ್ ಆಪ್ ಅನ್ನು ವಿಶ್ವಾಸಾರ್ಹ ಆಪ್ ಸ್ಟೋರ್‌ಗಳಿಂದ ಮಾತ್ರ  ಡೌನ್‌ಲೋಡ್ ಮಾಡಲು ಅಥವಾ ವಾಟ್ಸಾಪ್‌ನ ಅಧಿಕೃತ ವೆಬ್‌ಸೈಟ್‌ನಿಂದ ನೇರವಾಗಿ ಸ್ಥಾಪಿಸಲು ಬಳಕೆದಾರರಿಗೆ ಸಲಹೆ ನೀಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News