ಬಳಕೆದಾರರಿಗೆ ಮತ್ತೆ ಶಾಕ್ ! ದುಬಾರಿಯಾಯಿತು ಅಮೆಜಾನ್ ಪ್ರೈಮ್! ಇಲ್ಲಿದೆ ಕಂಪ್ಲೀಟ್ ಪ್ರೈಸ್ ಲಿಸ್ಟ್

Amazon Prime Price list : Amazon ತನ್ನ ಪ್ರೈಮ್ ಮೆಂಬರ್ ಶಿಪ್ ಬೆಲೆಯನ್ನು ಬದಲಾಯಿಸುತ್ತಲೇ ಇರುತ್ತದೆ. ಈಗ ಮತ್ತೆ ತನ್ನ ಯೋಜನೆಗಳನ್ನು ಬದಲಾಯಿಸಿದೆ. ಇದೀಗ ಹೊಸ ದರಗಳನ್ನು ಘೋಷಿಸಿದೆ. 

Written by - Ranjitha R K | Last Updated : Apr 27, 2023, 10:04 AM IST
  • ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಕ್ರೇಜ್ ಹೆಚ್ಚುತ್ತಿದೆ.
  • ಇ ಕಾಮರ್ಸ್ ಸೈಟ್ ಗಳು ಕೂಡಾ ರಿಯಾಯಿತಿ ದರಗಳನ್ನು ಘೋಷಿಸುತ್ತಲೇ ಇರುತ್ತವೆ.
  • ಹೊಸ ಹೊಸ ಪ್ಲಾನ್ ಗಳನ್ನೂ ಪರಿಚಯಿಸುತ್ತಿರುತ್ತದೆ.
ಬಳಕೆದಾರರಿಗೆ ಮತ್ತೆ ಶಾಕ್ ! ದುಬಾರಿಯಾಯಿತು ಅಮೆಜಾನ್ ಪ್ರೈಮ್! ಇಲ್ಲಿದೆ ಕಂಪ್ಲೀಟ್ ಪ್ರೈಸ್ ಲಿಸ್ಟ್ title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಕ್ರೇಜ್ ಹೆಚ್ಚುತ್ತಿದೆ. ಬೇಕಾದ ಎಲಾ ವಸ್ತುಗಳು ಬೆರಳ ತುದಿಯಲ್ಲಿಯೇ ಲಭ್ಯವಾಗಿರುವುದರಿಂದ ಎಲ್ಲರೂ ಆನ್ಲೈನ್ ಶಾಪಿಂಗ್ ನತ್ತ ಮಾರು ಹೋಗುತ್ತಿದ್ದಾರೆ.  ಇದಕ್ಕಾಗಿ ಇ  ಕಾಮರ್ಸ್ ಸೈಟ್ ಗಳು ಕೂಡಾ ರಿಯಾಯಿತಿ ದರಗಳನ್ನು ಘೋಷಿಸುತ್ತಲೇ ಇರುತ್ತವೆ. ಅಲ್ಲದೆ ಇದಕ್ಕಾಗಿ ಹೊಸ ಹೊಸ ಪ್ಲಾನ್ ಗಳನ್ನೂ ಪರಿಚಯಿಸುತ್ತಿರುತ್ತದೆ. ಅದರಂತೆ ಅಮೆಜಾನ್ ಕೂಡಾ ತನ್ನ ಬಳಕೆದಾರರಿಗೆ ಪ್ರೈಮ್ ಮೆಂಬರ್ ಶಿಪ್ ಅನ್ನು ನೀಡುತ್ತದೆ. ಇದಕ್ಕಾಗಿ ಬಳಕೆದಾರರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಇದನ್ನು ತಿಂಗಳು, ಮೂರು ತಿಂಗಳು ವಾರ್ಷಿಕ ಆಧಾರದ ಮೇಲೆ ಪಡೆಯಬಹುದಾಗಿದೆ. ಪ್ರೈಮ್ ಮೆಂಬರ್ ಶಿಪ್  ಇರುವ ಬಳಕೆದಾರರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ.  ಶಾಪಿಂಗ್ ಮಾತ್ರವಲ್ಲದೆ ಸಿನಿಮಾ, ವೆಬ್ ಸಿರೀಸ್, ಮ್ಯೂಸಿಕ್, ಹೀಗೆ ಮನರಂಜನಾ ಪ್ಲಾಟ್ಫಾರ್ಮ್ ಗಳಿಗೆ ಕೂಡಾ ಅಕ್ಸೆಸ್ ಪಡೆಯಬಹುದಾಗಿದೆ. 

ಪ್ರೈಮ್ ಮೆಂಬರ್ ಶಿಪ್ ಬೆಲೆಯಲ್ಲಿ ಬದಲಾವಣೆ : 
Amazon ತನ್ನ ಪ್ರೈಮ್ ಮೆಂಬರ್ ಶಿಪ್ ಬೆಲೆಯನ್ನು ಬದಲಾಯಿಸುತ್ತಲೇ ಇರುತ್ತದೆ. ಕೆಲವು ತಿಂಗಳ ಹಿಂದೆಯಷ್ಟೇ , ಹಚ್ಚಿನ ಬಳಕೆದಾರರನ್ನುಆಕರ್ಷಿಸುವ ಸಲುವಾಗಿ ಇ-ಕಾಮರ್ಸ್ ದೈತ್ಯ ತನ್ನ ಪ್ರೈಮ್ ಸದಸ್ಯತ್ವದ ಮೇಲೆ ರಿಯಾಯಿತಿ ದರಗಳನ್ನು ಘೋಷಿಸಿತ್ತು. ಆದರೆ ಈಗ ಮತ್ತೆ ತನ್ನ ಯೋಜನೆಗಳನ್ನು ಬದಲಾಯಿಸಿದೆ. ಇದೀಗ ಹೊಸ ದರಗಳನ್ನು ಘೋಷಿಸಿದೆ. ಹಳೆಯ ದರಗಳೊಂದಿಗೆ ಹೊಸ ರದವನ್ನು ಹೋಲಿಸಿ ನೋಡಿದರೆ ಹೊಸ ದರದಲ್ಲಿ ಭಾರೀ ಏರಿಕೆಯಾಗಿರುವುದನ್ನು ಗಮನಿಸಬಹುದು. ಈಗ ನೀವೇನಾದರೂ ಚಂದಾದಾರಿಕೆಯನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಹೆಚ್ಚು ದರವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ಮನೆಯ ಛಾವಣಿಯ ಮೇಲೆ ಈ ಡಿವೈಸ್ ಸ್ಥಾಪಿಸಿ, ಜೀವನಪರ್ಯಂತ ಪಡೆಯಿರಿ ಫ್ರೀ ವಿದ್ಯುತ್

Amazon Prime subscription ಬೆಲೆಯಲ್ಲಿ ಏರಿಕೆ :  
ಹೌದು, ಅಮೆಜಾನ್ ಪ್ರೈಮ್ ಚಂದಾದಾರಿಕೆ ಬೆಲೆಯನ್ನು ಹೆಚ್ಚಿಸಲಾಗಿದೆ. ಭಾರತದಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ ಒಂದು ತಿಂಗಳಿಗೆ 299 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಡಿಸೆಂಬರ್ 2021 ರಲ್ಲಿ  ಈ ಬೆಲೆಯನ್ನು 179 ರೂಪಾಯಿಗೆ ನಿಗದಿ ಪಡಿಸಲಾಗಿತ್ತು. ಇದರೊಂದಿಗೆ ಕಂಪನಿಯು Amazon Prime subscription ಬೆಲೆಯನ್ನು 120 ರೂ. ವರೆಗೆ ಹೆಚ್ಚಿಸಿದೆ. ಇನ್ನು ಮುಂದೆ ಅಮೆಜಾನ್ ಪ್ರೈಮ್ ನ ಪ್ರಯೋಜನ ಪಡೆಯಬೇಕಾದರೆ ತಿಂಗಳಿಗೆ 120 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. 

ಇಲ್ಲಿದೆ ದರ ಪಟ್ಟಿ : 
 ಇನ್ನು ಮುಂದೆ ಮೂರು ತಿಂಗಳ Amazon Prime  ಮೆಂಬರ್ ಶಿಪ್ ಗಾಗಿ 599 ರೂ. ಪಾವತಿಸಬೇಕಾಗುತ್ತದೆ. ಮೊದಲು ಈ ಪ್ಲಾನ್ ಗೆ ಪಾವತಿಸಬೇಕಾಗಿದ್ದು  ಕೇವಲ 459 ರೂಪಾಯಿ. ಅಂದರೆ ಈ ಬೆಲೆಯಲ್ಲಿ 140 ರಷ್ಟು ಹೆಚ್ಚಳವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಆದರೆ  ದೀರ್ಘಾವಧಿಯ ಯೋಜನೆಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.   ಇದು ಬಳಕೆದಾರರಿಗೆ ಖುಷಿಯ ಸಂಗತಿ. ವಾರ್ಷಿಕ Amazon Prime ಸದಸ್ಯತ್ವದ ಬೆಲೆ 1,499 ರೂ, ಆಗಿದ್ದರೆ, ವಾರ್ಷಿಕ ಪ್ರೈಮ್ ಲೈಟ್ ಬೆಲೆ  999 ರೂಪಾಯಿ ಎಂದು ಅಧಿಕೃತ ಸೈಟ್‌ನಲ್ಲಿ  ಹೇಳಲಾಗಿದೆ. 

ಇದನ್ನೂ ಓದಿ : Big Update: ಇಂದಿನಿಂದ 4 ಸ್ಮಾರ್ಟ್ ಫೋನ್ ಗಳಲ್ಲಿ ಸಿಂಗಲ್ ವಾಟ್ಸ್ ಆಪ್ ಅಕೌಂಟ್ ನಿರ್ವಹಿಸಿ, ಝಕರ್ಬರ್ಗ್ ಘೋಷಣೆ

ಅಮೆಜಾನ್ ಪ್ರೈಮ್ ಸದಸ್ಯತ್ವ ಪಡೆಯುವ ಪ್ರಯೋಜನಗಳು : 
ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಹೊಂದಿರುವ ಜನರು ಪ್ರೈಮ್ ಶಿಪ್ಪಿಂಗ್‌ ಪ್ರಯೋಜನ ಪಡೆಯುತ್ತಾರೆ. ಇದರ ಮೂಲಕ ಹೆಚ್ಚುವರಿ ಹಣ ಪಾವತಿಸದೇ  ನೀವು ಆರ್ಡರ್ ಮಾಡಿರುವ ವಸ್ತುಗಳನ್ನು ವೇಗವಾಗಿ ವಿತರಣೆ ಮಾಡಲಾಗುತ್ತದೆ. ಜನರು ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಪ್ರೈಮ್ ಡೀಲ್‌ಗಳು, ಪ್ರೈಮ್ ರೀಡಿಂಗ್, ಪ್ರೈಮ್ ಗೇಮಿಂಗ್ ಮತ್ತು ಅಮೆಜಾನ್ ಫ್ಯಾಮಿಲಿಗೆ  ಕೂಡಾ ಅಕ್ಸೆಸ್ ಪಡೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News