65 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ ಹೋಂಡಾದ ಈ ಬೈಕ್

Honda Shine 100: ಹೀರೋ ಕಂಪನಿಯು ಗ್ರಾಹಕರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಹೊಸ ಬೈಕ್ ಬಿಡುಗಡೆ ಮಾಡಿದೆ. ಕಂಪನಿಯು ಈ 100 ಸಿಸಿ ಮೋಟಾರ್‌ಸೈಕಲ್ ಅನ್ನು ಹೋಂಡಾ ಶೈನ್ 100 ಎಂದು ಹೆಸರಿಸಿದೆ. 

Written by - Yashaswini V | Last Updated : Mar 15, 2023, 02:53 PM IST
  • ಈ ಹೋಂಡಾ ಬೈಕ್‌ನ ಕಾರ್ಯಕ್ಷಮತೆಯು ಸ್ಪ್ಲೆಂಡರ್ ಪ್ಲಸ್‌ಗೆ ಕಠಿಣ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗುತ್ತಿದೆ.
  • ಹೋಂಡಾ ನ್ಯೂ ಶೈನ್ 100cc ಕಂಪನಿಯ ವಿಭಾಗದಲ್ಲಿ ಅತ್ಯುತ್ತಮ ಮೈಲೇಜ್ ನೀಡಬಲ್ಲ ಬೈಕ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ.
  • ಹೋಂಡಾ ಶೈನ್ 100 - ಬೆಲೆ, ವೈಶಿಷ್ಟ್ಯಗಳು, ಮೈಲೇಜ್ ಮತ್ತು ಅದರ ವಿಶೇಷಣಗಳ ಬಗ್ಗೆ ತಿಳಿಯೋಣ...
65 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ ಹೋಂಡಾದ ಈ ಬೈಕ್  title=
Honda Shine 100

Honda Shine 100: ದೇಶದ ಲೆಜೆಂಡರಿ ದ್ವಿಚಕ್ರ ವಾಹನ ಕಂಪನಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ (HMSI) ಭಾರತೀಯ ಮಾರುಕಟ್ಟೆಯಲ್ಲಿ  ತನ್ನ ಅಗ್ಗದ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೀರೋ ಸ್ಪ್ಲೆಂಡರ್‌ಗೆ ಕಠಿಣ ಸ್ಪರ್ಧೆಯನ್ನು ನೀಡಲು ಕಂಪನಿಯು ತನ್ನ 100 ಸಿಸಿ ಮೋಟಾರ್‌ಸೈಕಲ್ ಅನ್ನು ಹೋಂಡಾ ಶೈನ್ 100  ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಹೋಂಡಾ ಶೈನ್ 100 - ಬೆಲೆ, ವೈಶಿಷ್ಟ್ಯಗಳು, ಮೈಲೇಜ್ ಮತ್ತು ಅದರ ವಿಶೇಷಣಗಳ ಬಗ್ಗೆ ತಿಳಿಯೋಣ...

ಹೋಂಡಾ ಶೈನ್ 100 ಬೆಲೆ:
ಹೋಂಡಾ ಶೈನ್ 100 ಹೆಸರಿನ ಈ ಹೊಸ ಮೋಟಾರ್‌ಸೈಕಲ್ ಅನ್ನು ಈಗ 65 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆಯನ್ನು  64,900 ರೂ. (ಎಕ್ಸ್ ಶೋ ರೂಂ) ಗಳೆಂದು ನಿಗದಿಗೊಳಿಸಲಾಗಿದೆ. ಈ ಹೊಸ ಬೈಕ್ ಈಗ ಭಾರತದಲ್ಲಿ ಅತ್ಯಂತ ಕೈಗೆಟುಕುವ ಹೋಂಡಾ ಬೈಕ್ ಆಗಲಿದೆ. ಹೋಂಡಾ ಶೈನ್ 100 ನಲ್ಲಿ 6 ವರ್ಷಗಳ ವಿಶೇಷ ವಾರಂಟಿ ಪ್ಯಾಕೇಜ್ (3 ವರ್ಷಗಳ ಪ್ರಮಾಣಿತ + 3 ವರ್ಷಗಳ ಐಚ್ಛಿಕ ವಿಸ್ತೃತ ವಾರಂಟಿ) ಸಹ ನೀಡಲಾಗುತ್ತಿದೆ.

ಇದನ್ನೂ ಓದಿ- ನಿಮ್ಮ ಕನಸಿನ Maruti Brezza SUV ಅನ್ನು ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ

ಹೋಂಡಾ ಶೈನ್ 100 ಮೈಲೇಜ್: 
ಹೋಂಡಾ ಬೈಕ್‌ನ ಕಾರ್ಯಕ್ಷಮತೆಯು ಸ್ಪ್ಲೆಂಡರ್ ಪ್ಲಸ್‌ಗೆ ಕಠಿಣ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗುತ್ತಿದೆ. ಹೋಂಡಾ ನ್ಯೂ ಶೈನ್ 100cc ಕಂಪನಿಯ ವಿಭಾಗದಲ್ಲಿ ಅತ್ಯುತ್ತಮ ಮೈಲೇಜ್ ನೀಡಬಲ್ಲ ಬೈಕ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಹೋಂಡಾ ಶೈನ್ 100 ವೈಶಿಷ್ಟ್ಯತೆ: 
ಹೋಂಡಾ ಶೈನ್ 100ಸಿಸಿ  97.2 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8 ಬಿಎಚ್‌ಪಿ ಪವರ್ ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸೈಡ್ ಸ್ಟ್ಯಾಂಡ್ ತೆಗೆಯದಿದ್ದರೆ ಈ ಎಂಜಿನ್ ಪ್ರಾರಂಭವಾಗುವುದಿಲ್ಲ. ಹೊಸ 100 ಸಿಸಿ ಶೈನ್‌ನೊಂದಿಗೆ, ಹೋಂಡಾ ಗ್ರಾಮೀಣ ಮಾರುಕಟ್ಟೆಗಳತ್ತ ಗಮನ ಹರಿಸುತ್ತಿದೆ. 

ಇದನ್ನೂ ಓದಿ- ಮಾರುತಿ ಆಲ್ಟೊ 800 ದರದಲ್ಲಿಯೇ ಸಿಗುತ್ತೆ ಅದಕ್ಕಿಂತ ಹಲವು ಪಟ್ಟು ಉತ್ತಮ ಕಾರ್

ಹೋಂಡಾ ಶೈನ್ ಬಣ್ಣಗಳ ಆಯ್ಕೆ:
ಈ ಬೈಕ್ 5 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ. ಕೆಂಪು ಪಟ್ಟಿಗಳೊಂದಿಗೆ ಕಪ್ಪು, ನೀಲಿ ಪಟ್ಟಿಗಳೊಂದಿಗೆ ಕಪ್ಪು, ಹಸಿರು ಪಟ್ಟಿಗಳೊಂದಿಗೆ ಕಪ್ಪು, ಚಿನ್ನದ ಪಟ್ಟಿಯೊಂದಿಗೆ ಕಪ್ಪು ಮತ್ತು ಬೂದು ಪಟ್ಟಿಗಳೊಂದಿಗೆ ಕಪ್ಪು ಬಣ್ಣದ ಆಯ್ಕೆಯಲ್ಲಿ ಬೈಕ್ ಲಭ್ಯವಾಗಲಿದೆ. ಇದು ಆಕರ್ಷಕ ಫ್ರಂಟ್ ಕೌಲ್, ಎಲ್ಲಾ ಕಪ್ಪು ಮಿಶ್ರಲೋಹದ ಚಕ್ರಗಳು, ಪ್ರಾಯೋಗಿಕ ಅಲ್ಯೂಮಿನಿಯಂ ಗ್ರಾಬ್ ರೈಲ್, ಬೋಲ್ಡ್ ಟೈಲ್ ಲ್ಯಾಂಪ್ ಅನ್ನು ಪಡೆಯುತ್ತದೆ.

ತನ್ನ ಹೊಸ 100cc ಶೈನ್‌ನೊಂದಿಗೆ, ಹೋಂಡಾ ಗ್ರಾಮೀಣ ಮಾರುಕಟ್ಟೆಗಳ ಮೇಲೆ ಹೆಚ್ಚು ಗಮನಹರಿಸುವ ನಿರೀಕ್ಷೆಯಿದೆ. ಈ ಹೊಸ ಹೋಂಡಾ ಶೈನ್ 100 677 ಎಂಎಂ ಅಳತೆಯ ಉದ್ದದ ಸೀಟ್ ಮತ್ತು 786 ಎಂಎಂ ಸೀಟ್ ಅನ್ನು ಪಡೆಯುತ್ತದೆ. ಟರ್ನಿಂಗ್ ತ್ರಿಜ್ಯ ಕೇವಲ 1.9 ಮೀಟರ್. ಗ್ರೌಂಡ್ ಕ್ಲಿಯರೆನ್ಸ್ 168 ಎಂಎಂ ಮತ್ತು ವೀಲ್ ಬೇಸ್ 1245 ಎಂಎಂ ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News