Part Time Job Scam: ಯೂಟ್ಯೂಬ್ ವೀಡಿಯೊ ಲೈಕ್ ಮಾಡಿ, ಹಣ ಗಳಿಸಿ ಎಂಬ ಮೋಸದ ಜಾಲ!

Part Time Job Scam: ಇತ್ತೀಚಿನ ದಿನಗಳಲ್ಲಿ ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಯೂಟ್ಯೂಬ್ ವೀಡಿಯೊವನ್ನು ಲೈಕ್ ಮಾಡುವ ಮೂಲಕ ಹಣ ಗಳಿಸಿ ಎಂಬ ಸಂದೇಶಗಳು ಹರಿದಾಡುತ್ತಿವೆ. ಹಾಗಂತ ಈ ಮೋಸದ ಜಾಲಕ್ಕೆ ಸಿಲುಕಿದರೆ ನಿಮ್ಮ ಖಾತೆ ಖಾಲಿಯಾಗಬಹುದು ಎಚ್ಚರ!

Written by - Yashaswini V | Last Updated : Apr 27, 2023, 10:26 AM IST
  • ಮಹಾರಾಷ್ಟ್ರದ ಪುಣೆಯ ಮಹಿಳೆಯೊಬ್ಬರು ಇಂತಹದ್ದೇ ಟ್ರಿಕ್‌ಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
  • ವೃತ್ತಿಯಲ್ಲಿ ನೇತ್ರ ತಜ್ಞೆಯಾಗಿರುವ ಈಕೆ ಯೂಟ್ಯೂಬ್ ವೀಡಿಯೊವನ್ನು ಲೈಕ್ ಮಾಡಿ ಹಣ ಗಳಿಸಿ ಎಂಬ ಮೋಸದ ಜಾಲಕ್ಕೆ ಸಿಲುಕಿ 24 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
Part Time Job Scam: ಯೂಟ್ಯೂಬ್ ವೀಡಿಯೊ ಲೈಕ್ ಮಾಡಿ, ಹಣ ಗಳಿಸಿ ಎಂಬ ಮೋಸದ ಜಾಲ! title=

Part Time Job Scam: ತಂತ್ರಜ್ಞಾನದ ಪ್ರಗತಿಯಾಗುತ್ತಿದ್ದಂತೆ ಆನ್‌ಲೈನ್ ಸ್ಕ್ಯಾಮರ್‌ಗಳು ಸಹ ನಿರಂತರವಾಗಿ ಹೊಸ ಹೊಸ ಮಾರ್ಗಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅರೆಕಾಲಿಕ ಉದ್ಯೋಗ ಎಂದರೆ ಪಾರ್ಟ್ ಟೈಮ್ ಜಾಬ್ ಮಾಡಿ ಹಣ ಗಳಿಸಿ. ಕೇವಲ ಅರ್ಧಗಂಟೆ ಕೆಲಸ ಮಾಡಿ ಸಾವಿರಾರು ರೂ. ಸಂಪಾದಿಸಿ ಎಂಬಿತ್ಯಾದಿ ಸಂದೇಶಗಳು ಸಖತ್ ವೈರಲ್ ಆಗುತ್ತಿರುತ್ತವೆ. ಅಂತಹ ವಂಚನೆಗಳಲ್ಲಿ ಒಂದು ಯೂಟ್ಯೂಬ್ ವೀಡಿಯೊ ಲೈಕ್ ಮಾಡಿ ಹಣ ಸಂಪಾದಿಸಿ ಎಂಬ ಸಂದೇಶ. 

ವಾಸ್ತವವಾಗಿ, ಮಹಾರಾಷ್ಟ್ರದ ಪುಣೆಯ ಮಹಿಳೆಯೊಬ್ಬರು ಇಂತಹದ್ದೇ ಟ್ರಿಕ್‌ಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ನೇತ್ರ ತಜ್ಞೆಯಾಗಿರುವ ಈಕೆ ಯೂಟ್ಯೂಬ್ ವೀಡಿಯೊವನ್ನು ಲೈಕ್ ಮಾಡಿ ಹಣ ಗಳಿಸಿ ಎಂಬ ಮೋಸದ ಜಾಲಕ್ಕೆ ಸಿಲುಕಿ 24 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. 

ಏನಿದು ಮೋಸದ ಜಾಲ?
ಲಭ್ಯವಿರುವ ಮಾಹಿತಿಯ ಪ್ರಕಾರ, ಸಂತ್ರಸ್ತ ಮಹಿಳೆಗೆ ವರ್ಕ್ ಫ್ರಮ್ ಹೋಂ ಮೂಲಕ ಸುಲಭವಾಗಿ ಹಣ ಗಳಿಸಿ ಎಂಬ ಸಂದೇಶ ಬಂದಿತ್ತು. ಮಹಿಳೆ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವ್ಯಕ್ತಿಯೋರ್ವನನ್ನು ಸಂಪರ್ಕಿಸಿದ್ದಳು. ಬಳಿಕ ಆ ವ್ಯಕ್ತಿಯ ಸೂಚನೆ ಮೇರೆಗೆ ಉದ್ಯೋಗಕ್ಕಾಗಿ ಅರ್ಜಿಯನ್ನೂ ಹಾಕಿದ್ದಳು. ಈ ಸಮಯದಲ್ಲಿ ಜಸ್ಟ್ ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡಿ ಹಣ ಸಂಪಾದನೆ ಮಾಡುವಂತಹ ಕೆಲಸ ನೀಡಲಾಗಿತ್ತು. ಆರಂಭದಲ್ಲಿ ಈ ಕೆಲಸದಿಂದ ಆಕೆ 10,275 ರೂ. ಗಳ ವೇತನವನ್ನೂ ಪಡೆದಿದ್ದಳು. 

ಇದನ್ನೂ ಓದಿ- ಮನೆಯ ಛಾವಣಿಯ ಮೇಲೆ ಈ ಡಿವೈಸ್ ಸ್ಥಾಪಿಸಿ, ಜೀವನಪರ್ಯಂತ ಪಡೆಯಿರಿ ಫ್ರೀ ವಿದ್ಯುತ್

ಆಕೆಯ ವಿಶ್ವಾಸವನ್ನು ಗಳಿಸಿದ ಬಳಿಕ ವಂಚಕರು ಆಕೆಗೆ ಪ್ರಿಪೇಯ್ಡ್ ಕಾರ್ಯಗಳನ್ನು ನೀಡಿ, ಕ್ರಿಪ್ಟೋಕರೆನ್ಸಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಿಸಿದ್ದರು. ಇದನ್ನು ನಂಬಿದ ಸಂತ್ರಸ್ತ ಮಹಿಳೆಯು  ಮಾರ್ಚ್ 28 ಮತ್ತು ಏಪ್ರಿಲ್ 22 ರ ನಡುವೆ ಎರಡು ಬ್ಯಾಂಕ್ ಖಾತೆಗಳಿಗೆ 23.83 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಳು. ಬಳಿಕ ಆಕೆ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ವಂಚಕರು ಆಕೆಯನ್ನು ಇನ್ನೂ 30 ಲಕ್ಷ ರೂ.ಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಕೆ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದಾಳೆ. ಬಳಿಕ ಮತ್ತೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. 

ಇದೊಂದೇ ಪ್ರಕರಣ ಮಾತ್ರವಲ್ಲ, ಪುಣೆಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಇತ್ತೀಚೆಗೆ ಮುನ್ನಲೆಗೆ ಬಂದಿದೆ. ಈ ಪ್ರಕರಣದಲ್ಲಿ  ಯುವ ಇಂಜಿನಿಯರ್‌ಯೊಬ್ಬರು ಏಪ್ರಿಲ್ 12 ರಂದು  ಪ್ರತಿ ಲೈಕ್‌ಗೆ 50 ರೂ. ಗಳಿಸುವ ಅವಕಾಶ. ವೀಡಿಯೊಗಳನ್ನು ಲೈಕ್ ಮಾಡಿ ದಿನಕ್ಕೆ 5000 ರೂ. ಗಳಿಸಿ ಎಂಬ ಸಂದೇಶವನ್ನು ಸ್ವೀಕರಿಸಿದ್ದಾರೆ. ಈ  ಸ್ವೀಕರಿಸಿದ ಸಂದೇಶಕ್ಕೆ ಮಾರು ಹೋಗಿ ಏಪ್ರಿಲ್ 14 ಮತ್ತು 20 ರ ನಡುವೆ ಸುಮಾರು 9 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ- ಬಳಕೆದಾರರಿಗೆ ಮತ್ತೆ ಶಾಕ್ ! ದುಬಾರಿಯಾಯಿತು ಅಮೆಜಾನ್ ಪ್ರೈಮ್! ಇಲ್ಲಿದೆ ಕಂಪ್ಲೀಟ್ ಪ್ರೈಸ್ ಲಿಸ್ಟ್

ಪುಣೆಯಲ್ಲಿ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಇಂತಹದ್ದೇ ಪ್ರಕರಣಗಳು ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತವೆ. ನೀವು ಇಂತಹ ಮೋಸದ ಜಾಲದಲ್ಲಿ ಬೀಳುವುದನ್ನು ತಪ್ಪಿಸಲು ಸಾಮಾಜಿಕ ಮಾಧ್ಯಮದ ಮೂಲಕ ಒಡ್ಡಲಾಗುವ ಆಮಿಷಗಳನ್ನು ನಂಬಬೇಡಿ. ಯಾವುದೇ ಬ್ಯಾಂಕ್, ಗ್ರಾಹಕ ಆರೈಕೆ ಕೇಂದ್ರಗಳ ಹೆಸರಿನಿಂದ ಕರೆ ಅಥವಾ ಸಂದೇಶಗಳಿಗೆ ರಿಪ್ಲೈ ಮಾಡಬೇಡಿ. ಯಾರೊಂದಿಗೂ ಸಹ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News