ChatGPT ಸಹಾಯದಿಂದ CV ತಯಾರಿಸಿದ ವ್ಯಕ್ತಿಗೆ ಆಫರ್ ಗಳ ಸುರಿಮಳೆಯಂತೆ !

ಇತರರಿಗಿಂತ ಭಿನ್ನವಾಗಿರುವ  ಮತ್ತು ವಿಶಿಷ್ಟವಾದ CVಯನ್ನು ರಚಿಸುವಂತೆ ವ್ಯಕ್ತಿಯೊಬ್ಬರು  ChatGPT ಯನ್ನು  ಕೋರಿದ್ದಾರೆ. ChatGPT ಸಹಾಯದಿಂದ ತಯಾರಾದ ಸಿವಿಯಿಂದಾಗಿ ವ್ಯಕ್ತಿಗೆ  ಕಂಪನಿಗಳಿಂದ ಸಂದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆ ಬರುತ್ತಿದೆಯಂತೆ.

Written by - Ranjitha R K | Last Updated : Apr 27, 2023, 04:04 PM IST
  • ChatGPT ಸಾಕಷ್ಟು ಜನಪ್ರಿಯವಾಗಿದೆ
  • ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಲೇ ಇದೆ.
  • ವೈರಲ್ ಆಗಿದೆ ಬಳಕೆದಾರರ ಸಂದೇಶ
ChatGPT ಸಹಾಯದಿಂದ CV ತಯಾರಿಸಿದ ವ್ಯಕ್ತಿಗೆ ಆಫರ್ ಗಳ ಸುರಿಮಳೆಯಂತೆ ! title=

ಬೆಂಗಳೂರು : ChatGPT ಸಾಕಷ್ಟು ಜನಪ್ರಿಯವಾಗಿದೆ. ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಈ ಅಪ್ಲಿಕೇಶನ್ ತುಂಬಾ ಜನಪ್ರಿಯವಾಗಿದೆ. ಬಳಕೆದಾರರ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯದಿಂದಾಗಿಯೇ ಈ ಅಪ್ಲಿಕೇಶನ್ ಜನಪ್ರಿಯತೆ ಹೆಚ್ಚುತ್ತಿದೆ ಎನ್ನಲಾಗಿದೆ.  AI ಚಾಟ್‌ಬಾಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕೆಲವೇ ಪ್ರಕರಣಗಳಲ್ಲಿ ಮಾತ್ರ ಸಾಬೀತಾಗಿದೆ.  ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಉದ್ದೇಶದಿಂದ CV ಅನ್ನು ರಚಿಸಲು Reddit ಬಳಕೆದಾರರು  ChatGPT ಸಹಾಯ ಕೋರಿದ್ದಾರೆ.  ಹೀಗೆ  ChatGPT ಸಹಾಯದಿಂದ ಸಿವಿ ರಚಿಸಿದ ಮೇಲೆ ವ್ಯಕ್ತಿ ಅತಿಯಾಗಿ ಸಂದರ್ಶನ ಕರೆಗಳನ್ನು ಸ್ವೀಕರಿಸುತ್ತಿದ್ದಾರೆಯಂತೆ. 

ವೈರಲ್ ಆಗಿದೆ ಬಳಕೆದಾರರ ಸಂದೇಶ : 
ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ChatGPT ಅನ್ನು ಬಳಸುತ್ತಿರುವುದಾಗಿ ವ್ಯಕ್ತಿಯೊಬ್ಬರು ಹೇಳಿದ್ದಾರೆ. ChatGPT ಸಹಾಯದಿಂದ CV ರಚಿಸಿ, ತನಗೆ ಬೇಕಾಗಿರುವ ಕೆಲಸದ ವಿವರಗಳನ್ನು ನೀಡಿರುವುದಾಗಿ ಬಳಕೆದಾರರು Reddit ನಲ್ಲಿ ಬರೆದಿದ್ದಾರೆ. ನನ್ನ ಸಿವಿ ಮತ್ತು ಅನುಭವಕ್ಕೆ ಸರಿ ಹೊಂದುವಂತೆ ವಿವರಣೆಯನ್ನು  ಹೊಂದಿಸಿಕೊಂಡುವಂತೆ ಕೇಳಿದ್ದಾರೆ. 

ಇದನ್ನೂ ಓದಿ : ಸಮೂಹ ನಾಶಕ ಶಸ್ತ್ರಾಸ್ತ್ರಗಳೆಂದರೇನು?

CV ರಚಿಸಲು ChatGPT ಅನ್ನು  ಕೋರಿದ ಬಳಕೆದಾರರು : 
 ಇತರರಿಗಿಂತ ಭಿನ್ನವಾಗಿರುವ  ಮತ್ತು ವಿಶಿಷ್ಟವಾದ CVಯನ್ನು ರಚಿಸಲು ChatGPT ಯನ್ನು ವ್ಯಕ್ತಿ ಕೇಳಿಕೊಂಡಿದ್ದಾರೆ. ಚಾಟ್‌ಜಿಪಿಟಿ ರಚಿಸಿದ ಸಿವಿಯನ್ನು ಉದ್ಯೋಗದಾತರಿಗೆ ಕಳುಹಿಸಿದ ನಂತರ, ಆ ವ್ಯಕ್ತಿಗೆ ಆಫರ್ ಗಳ ಮೇಲೆ ಆಫರ್ ಬರುತ್ತಿದೆಯಂತೆ. ಹಲವಾರು ಕಂಪನಿಗಳು ವ್ಯಕ್ತಿಯನ್ನು ಸಂದರ್ಶನಕ್ಕೆ ಆಹ್ವಾನಿಸಿವೆಯಂತೆ. 'ಅಪ್ಲಿಕೇಶನ್ ಅದ್ಭುತವಾಗಿರುವಂತೆ ಮತ್ತು ವಿಭಿನ್ನವಾಗಿರುವಂತೆ ರಚಿಸಿರುವ ಕಾರಣ  ಸಂದರ್ಶಕರನ್ನು ಮೆಚ್ಚಿಸುವುದು ಸಾಧ್ಯವಾಗಿದೆ ಎನ್ನತ್ತಾರೆ ಬಳಕೆದಾರರು. ಇದಕ್ಕೂ ಮೊದಲು ಕಂಪನಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಸಂದರ್ಶನಕ್ಕೆ ಕರೆಯುತ್ತಿರಲಿಲ್ಲ. ಆದರೆ ಇದೀಗ ನನ್ನನ್ನು ಸಂದರ್ಶನಕ್ಕೆ ಆಹ್ವಾನಿಸುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ.  

ಪ್ರೂಫ್ ರೀಡ್ ಮಾಡಬೇಕಾಗುತ್ತದೆ : 
ಉದ್ಯೋಗಾಕಾಂಕ್ಷಿಗಳು ಚಾಟ್‌ಜಿಪಿಟಿ ಸಹಾಯದಿಂದ ರಚಿಸಲಾದ ಸಿವಿಯನ್ನು ತಮ್ಮ ಸ್ವಂತ ಪ್ರಯತ್ನಗಳಿಗೆ ಪೂರಕವಾಗಿ ಬಳಸಬೇಕು. ChatGPT ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಬಹುದು.  ಅಂತಿಮವಾಗಿ CV ಕೌಶಲ್ಯ ಮತ್ತು ಅನುಭವಗಳ ನಿಖರವಾದ ಪ್ರತಿಬಿಂಬವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದು ಅರ್ಜಿ ಸಲ್ಲಿಸುವವರಿಗೆ ಬಿಟ್ಟದ್ದು. ಇನ್ನು ChatGPT ಸಹಾಯದಿನತ ತಯಾರಿಸಲಾದ CV ಯಲ್ಲಿ ಯಾವುದೇ ರೀತಿಯ ದೋಷಗಳು ಅಥವಾ ಅಸಂಗತತೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಉದ್ಯೋಗಾಕಾಂಕ್ಷಿಗಳು ತಮ್ಮ CV ಅನ್ನು ಸಲ್ಲಿಸುವ ಮೊದಲು ಪ್ರೂಫ್ ರೀಡ್ ಮಾಡಿ ಕೊಳ್ಳುವುದು ಉತ್ತಮ. 

ಇದನ್ನೂ ಓದಿ : Part Time Job Scam: ಯೂಟ್ಯೂಬ್ ವೀಡಿಯೊ ಲೈಕ್ ಮಾಡಿ, ಹಣ ಗಳಿಸಿ ಎಂಬ ಮೋಸದ ಜಾಲ!

ಚಾಟ್‌ ಜಿಪಿಟಿ ಎಂದರೇನು ? : 
ChatGPT ಎಂದರೆ ಜನರೇಟಿವ್ ಪ್ರಿ ಟ್ರೈನ್ ಸಾಫ್ಟ್‌ವೇರ್ ಅಂದರೆ AI ಸಾಫ್ಟ್‌ವೇರ್ . ಇದು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತದೆ.  ಇದು ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರವಲ್ಲ ಈ ಸಾಫ್ಟ್‌ವೇರ್ ನಿಮ್ಮ ಪ್ರಶ್ನೆಗಳಿಗೆ ಮನುಷ್ಯನಂತೆ ಚಿಂತನಶೀಲವಾಗಿ ಉತ್ತರಿಸುತ್ತದೆ.  ನೀವು ಯಾವುದೋ ಯಂತ್ರದ ಸಹಾಯದಿಂದ ಉತ್ತರವನ್ನು ಪಡೆಯುತ್ತಿದ್ದೀರಿ ಎಂದು ಅನ್ನಿಸುವುದಿಲ್ಲ. ಈ ಉತ್ತರವು ಮನುಷ್ಯ ನೀಡುವ ಉತ್ತರದಂತೆಯೇ ನಿರಂತರವಾಗಿ ಬರುತ್ತಿರುವ ಜನರ ಫೀಡ್ ಬ್ಯಾಕ್ ನೋಡಿದರೆ ಗೂಗಲ್ ಅನ್ನು ಬಿಟ್ಟು ಇದು ಮುಂದಕ್ಕೆ ಸಾಗಲಿದೆ ಎಂಬುದು ಜನರ ಅಭಿಪಾಯವಾಗಿದೆ. 

ಏನಿದರ ವೈಶಿಷ್ಟ್ಯ : 
ಚಾಟ್ GPT ಬಳಕೆದಾರರ ಪ್ರಶ್ನೆಗಳಿಗೆ ಯಾಂತ್ರಿಕವಾಗಿ  ಉತ್ತರಿಸುವುದಿಲ್ಲ. ಅಂದರೆ, ಇಲ್ಲಿ ತಪ್ಪಿಗೆ ಹೆಚ್ಚು ಆಸ್ಪದ ಇರುವುದಿಲ್ಲ. ಸಾಮಾನ್ಯವಾಗಿ, Googleನಲ್ಲಿ ಸರ್ಚ್ ಮಾಡಿದಾಗ ಅನೇಕ ರೀತಿಯ ಉತ್ತರಗಳು ನಿಮ್ಮ ಮುಂದೆ ಬರುತ್ತದೆ.  ಈ ಪೈಕಿ ಕೆಲವೊಂದು ನಿಮಗೆ ಉಪಯೋಗಕ್ಕೆ ಬರಬಹುದು. ಇನ್ನು ಕೆಲವು ಯಾವುದೇ ರೀತಿಯಲ್ಲಿಯೂ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ಚಾಟ್ GPTಯಲ್ಲಿ ಇಂಥ ಸಮಸ್ಯೆ ಗಳು ತಲೆದೋರುವುದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ : ಬಳಕೆದಾರರಿಗೆ ಮತ್ತೆ ಶಾಕ್ ! ದುಬಾರಿಯಾಯಿತು ಅಮೆಜಾನ್ ಪ್ರೈಮ್! ಇಲ್ಲಿದೆ ಕಂಪ್ಲೀಟ್ ಪ್ರೈಸ್ ಲಿಸ್ಟ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News