ನಿಮ್ಮ ಫೋನ್‌ನಲ್ಲಿ ಕೂಡ ಗ್ರೀನ್ ಬ್ಲಿಂಕರ್ ಕಾಣಿಸುತ್ತಿದೆಯೇ? ಇದರ ಹಿಂದಿನ ರಹಸ್ಯವೇನು?

ಐಒಎಸ್ 14ರಲ್ಲಿ ಆಪಲ್ ಎಲ್ಲಾ ಐಫೋನ್‌ಗಳಿಗೆ ಹೊಸ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್‌ಗ್ರೇಡ್ ಸಾಫ್ಟ್‌ವೇರ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆ. ಇದರ ಅಡಿಯಲ್ಲಿ ನಿಮ್ಮ ಅನುಮತಿಯಿಲ್ಲದೆ ಯಾರಾದರೂ ಈಗ ನಿಮ್ಮ ಕ್ಯಾಮೆರಾ ಅಥವಾ ಸ್ಪೀಕರ್ ಅನ್ನು ಆನ್ ಮಾಡಿದರೆ, ಈ ಬ್ಲಿಂಕರ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ.

Last Updated : Nov 2, 2020, 01:25 PM IST
  • ನಿಮ್ಮ ಸ್ಮಾರ್ಟ್‌ಫೋನ್ ಬೇಹುಗಾರಿಕೆ ಮಾಧ್ಯಮವಾಗಬಹುದು
  • ನಿಮ್ಮ ಫೋನಿನಲ್ಲಿ ಬ್ಲಿಂಕರ್ ಕಾಣಿಸಿಕೊಂಡರೆ ಜಾಗರೂಕರಾಗಿರಿ
  • ಅಂತಹ ಪತ್ತೇದಾರಿ ಅಪ್ಲಿಕೇಶನ್ ಅನ್ನು ತಪ್ಪಿಸುವುದು ಸುಲಭ
ನಿಮ್ಮ ಫೋನ್‌ನಲ್ಲಿ ಕೂಡ ಗ್ರೀನ್ ಬ್ಲಿಂಕರ್ ಕಾಣಿಸುತ್ತಿದೆಯೇ? ಇದರ ಹಿಂದಿನ ರಹಸ್ಯವೇನು? title=

ನವದೆಹಲಿ: ನಿಮ್ಮ ಐಫೋನ್‌ನ ಮುಂಭಾಗದ ಕ್ಯಾಮೆರಾದ ಪಕ್ಕದಲ್ಲಿಯೇ  ಬ್ಲಿಂಕರ್ ಅನ್ನು ನೀವು ಎಂದಾದರೂ ನೋಡಿದ್ದೀರಾ? ಕೆಲವೊಮ್ಮೆ ಇದು ಹಸಿರು ಬಣ್ಣದಲ್ಲಿ ಮತ್ತು ಕೆಲವೊಮ್ಮೆ ಕಿತ್ತಳೆ ಬಣ್ಣದರುತ್ತದೆ. ನಿಮ್ಮ ಉತ್ತರ ಹೌದು ಎಂದಾದರೆ ಜಾಗರೂಕರಾಗಿರಿ. ಯಾರೋ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿರಬಹುದು. ನಿಮ್ಮ ಸ್ಥಳ ಮತ್ತು ಚಟುವಟಿಕೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂಬುದರ ಸಂಕೇತ ಇದು. ಇದರ ಹಿಂದಿನ ರಹಸ್ಯವೇನು? ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಈ ಹೊಸ ವೈಶಿಷ್ಟ್ಯ ಹೊಂದಿರುವ ಆಪಲ್:-
ಆಪಲ್ ಇತ್ತೀಚೆಗೆ ತನ್ನ ಆಪರೇಟಿಂಗ್ ಸಾಫ್ಟ್‌ವೇರ್ ಅನ್ನು ನವೀಕರಿಸಿದೆ. ಐಒಎಸ್ (iOS) 14 ರಲ್ಲಿ ಆಪಲ್ ಎಲ್ಲಾ ಐಫೋನ್‌ಗಳಿಗಾಗಿ ಹೊಸ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್‌ಗ್ರೇಡ್ ಸಾಫ್ಟ್‌ವೇರ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆ. ಇದರ ಅಡಿಯಲ್ಲಿ ನಿಮ್ಮ ಅನುಮತಿಯಿಲ್ಲದೆ ಯಾರಾದರೂ ಈಗ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಅಥವಾ ಸ್ಪೀಕರ್ ಅನ್ನು ಆನ್ ಮಾಡಿದರೆ ಈ ಬ್ಲಿಂಕರ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ. ಈ ಬ್ಲಿಂಕರ್ ಐಫೋನ್‌ನ (iPhone) ಮುಂಭಾಗದ ಕ್ಯಾಮೆರಾದ ಪಕ್ಕದಲ್ಲಿದೆ. 

ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ iPhone, ಆನ್‌ಲೈನ್‌ನಲ್ಲಿ ಈ ರೀತಿ ಪಡೆಯಿರಿ

ಗ್ರೀನ್ / ಆರೆಂಜ್ ಬ್ಲಿಂಕರ್ ಅರ್ಥವೇನು?
ದಿ ಸನ್ ವೆಬ್‌ಸೈಟ್ ಪ್ರಕಾರ, ನಿಮ್ಮ ಐಫೋನ್‌ನಲ್ಲಿ ಗ್ರೀನ್ ಬ್ಲಿಂಕರ್ ಕಂಡುಬಂದರೆ, ನಿಮ್ಮ ಕ್ಯಾಮೆರಾವನ್ನು ಸಕ್ರಿಯಗೊಳಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ. ಅಪ್ಲಿಕೇಶನ್ ನಿಮ್ಮ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದೆ. ಜೊತೆಗೆ ನಿಮ್ಮ ಫೋಟೋಗಳನ್ನು ವೀಡಿಯೊಗಳನ್ನು ಸಹ ತೆಗೆದುಕೊಳ್ಳಬಹುದು. ಒಂದೊಮ್ಮೆ ಆರೆಂಜ್ ಬ್ಲಿಂಕರ್ ಕಾಣಿಸಿಕೊಂಡರೆ ಅಪ್ಲಿಕೇಶನ್ ನಿಮ್ಮ ಧ್ವನಿಯನ್ನು ರೆಕಾರ್ಡ್ ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

VIDEO: 6 ಸಾವಿರ ರೂ. ಪೋನನ್ನು 1 ಲಕ್ಷ ರೂ. iPhone ನಂತೆ ರೂಪಾಂತರಗೊಳಿಸಿದ ವ್ಯಕ್ತಿ

ಇದರಿಂದ ಬಚಾವ್ ಆಗುವುದು ಹೇಗೆ?
ಆಪಲ್‌ನ ಹೊಸ ಸಾಫ್ಟ್‌ವೇರ್ ಅಪ್‌ಗ್ರೇಡ್ ಪ್ರಕಾರ ನಿಮ್ಮ ಕ್ಯಾಮೆರಾ ಮತ್ತು ಆಡಿಯೊವನ್ನು ನೀವೇ ನಿಯಂತ್ರಿಸಬಹುದು. ಇದಕ್ಕಾಗಿ ನೀವು ಮೊಬೈಲ್‌ನ ನಿಯಂತ್ರಣ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಆಡಿಯೋ ಮತ್ತು ವೀಡಿಯೊ ರೆಕಾರ್ಡ್ ಮಾಡಲು ನೀವು ಯಾವ ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡಿದ್ದೀರಿ ಎಂಬುದನ್ನು ಇಲ್ಲಿ ನೀವು ನೋಡಬಹುದು. ಇಲ್ಲಿ ಯಾವುದಾದರೂ ಅಪ್ಲಿಕೇಶನ್ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಆಡಿಯೊ ಮತ್ತು ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವುದು ಕಂಡು ಬಂದರೆ ನೀವು ಅದನ್ನು ಬಂದ್ ಮಾಡಬಹುದು.

Trending News