Romance In Space: ಬಾಹ್ಯಾಕಾಶದಲ್ಲಿ ಸೆಕ್ಸ್! ಟಿಕೆಟ್ ಬುಕ್ಕಿಂಗ್ ಆರಂಭ.. ಟಿಕೆಟ್ ಬೆಲೆ ಎಷ್ಟು ಗೊತ್ತಾ?

Romance In Space: ಪ್ರೇಮಕ್ಕಾಗಿ ಪ್ರೇಮಿಗಳು ಏಳು ಸಮುದ್ರಗಳನ್ನು ದಾಟುವ ಕಾಲ ಈಗ ಕಳೆದುಹೋಗಿದೆ.  ಇದೀಗ ಬಾಹ್ಯಾಕಾಶದಲ್ಲಿ ಪ್ರೀತಿ, ಪ್ರಣಯ ಮತ್ತು ಲೈಂಗಿಕತೆಯ ಅವಕಾಶವೂ ಸಾಧ್ಯವಾಗಲಿದೆ. ಇದು ಯಾವುದೇ ವೈಜ್ಞಾನಿಕ ಚಲನಚಿತ್ರದ ಕಥೆಯಲ್ಲ ಆದರೆ ವಾಸ್ತವ.  

Written by - Nitin Tabib | Last Updated : Apr 2, 2023, 07:11 PM IST
  • ಶೀಘ್ರದಲ್ಲೇ ಜನರು ಬಾಹ್ಯಾಕಾಶದಲ್ಲಿ ಪ್ರಣಯಕ್ಕಾಗಿ ಬುಕ್ ಮಾಡಲು ಸಾಧ್ಯವಾಗಲಿದೆ.
  • ನಾಸಾ ಗಗನಯಾತ್ರಿ ಜೋಸ್ ಹೆರ್ನಾಂಡೆಜ್ ಅವರು
  • ಬಾಹ್ಯಾಕಾಶ ಪ್ರಣಯ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
Romance In Space: ಬಾಹ್ಯಾಕಾಶದಲ್ಲಿ ಸೆಕ್ಸ್! ಟಿಕೆಟ್ ಬುಕ್ಕಿಂಗ್ ಆರಂಭ.. ಟಿಕೆಟ್ ಬೆಲೆ ಎಷ್ಟು ಗೊತ್ತಾ? title=
ಬಾಹ್ಯಾಕಾಶದಲ್ಲಿ ಪ್ರೀತಿ-ಪ್ರಣಯ!

Romance In Space: ಪ್ರೇಮಕ್ಕಾಗಿ ಪ್ರೇಮಿಗಳು ತನ್ನ ಸಂಗಾತಿಯನ್ನು ಭೇಟಿಯಾಗಲು ಏಳು ಸಮುದ್ರಗಳನ್ನು ದಾಟುವ ಕಾಲ ಈಗ ಕಳೆದುಹೋಗಿದೆ. ಇದೀಗ ಬಾಹ್ಯಾಕಾಶದಲ್ಲಿ ಪ್ರೀತಿ, ಪ್ರಣಯ ಮತ್ತು ಲೈಂಗಿಕತೆಯ ಅವಕಾಶವೂ ಸಾಧ್ಯವಾಗಲಿದೆ. ಇದು ಯಾವುದೇ ವೈಜ್ಞಾನಿಕ ಚಲನಚಿತ್ರದ ಕಥೆಯಲ್ಲ ಆದರೆ ವಾಸ್ತವ. ನೀವು ಕೂಡ ಒಂದು ವೇಳೆ ಬಾಹ್ಯಾಕಾಶದಲ್ಲಿ ನಿಮ್ಮ ಸಂಗಾತಿಯೊಂದಿಗೆ ಪ್ರೇಮ, ಪ್ರಣಯ ಮಾಡಲು ಇಚ್ಛಿಸುತ್ತಿದ್ದರೆ, ನಿಮಗೂ ಕೂಡ ನಾಸಾದ ಈ ಯೋಜನೆಯ ಬಗ್ಗೆ ಮಾಹಿತಿ ಇರಬೇಕು

ಇದುವರೆಗೆ ಯಾವುದೇ ಮಾನವ ಬಾಹ್ಯಾಕಾಶದಲ್ಲಿ ಸೆಕ್ಸ್ ಸಾಧಿಸಿಲ್ಲ ಎಂದು ನಾಸಾ ಹೇಳಿಕೊಂಡಿದೆ. ಆದರೆ ಈಗ ಅದು ಸಾಧ್ಯವಾಗಲಿದೆ. ಪ್ರಣಯದ ಹೊಸ ಜಗತ್ತಿಗೆ ನಾಸಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ನಾಸಾ ಈ ಯೋಜನೆಗೆ 68 ಮೈಲ್ ಹೈ ಕ್ಲಬ್ ಎಂದು ಹೆಸರಿಸಿದೆ.

ಈ ಕ್ಲಬ್‌ಗೆ ಸೇರುವ ಮೂಲಕ, ನಿಮ್ಮ ಸಂಗಾತಿಯೊಂದಿಗೆ ಬಾಹ್ಯಾಕಾಶದಲ್ಲಿ ಪ್ರಣಯ ಮಾಡಲು, ಸಂಬಂಧವನ್ನು ಬೆಳೆಸಲು ನಿಮಗೆ ಸಾಧ್ಯವಾಗಲಿದೆ. ಇದಕ್ಕಾಗಿ ಬುಕ್ಕಿಂಗ್ ಆರಂಭವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ನಾಸಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಎನ್ನಲಾಗಿದೆ.

ಇದನ್ನೂ ಓದಿ-ಇಂದಿನ ಬಹುತೇಕ ವಿವಾಹಿತ ಪುರುಷರಿಗೆ ಕೊತ್ತಂಬರಿ ಸೊಪ್ಪಿನ ಈ ಉಪಯೋಗ ಗೊತ್ತಿರಲಿಕಿಲ್ಲ!

ಶೀಘ್ರದಲ್ಲೇ ಜನರು ಬಾಹ್ಯಾಕಾಶದಲ್ಲಿ ಪ್ರಣಯಕ್ಕಾಗಿ ಬುಕ್ ಮಾಡಲು ಸಾಧ್ಯವಾಗಲಿದೆ. ನಾಸಾ ಗಗನಯಾತ್ರಿ ಜೋಸ್ ಹೆರ್ನಾಂಡೆಜ್ ಅವರು ಬಾಹ್ಯಾಕಾಶ ಪ್ರಣಯ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ವರ್ಷ ವಾಣಿಜ್ಯ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ ತಕ್ಷಣ ಪ್ರೀತಿಯಲ್ಲಿ ಏನನ್ನಾದರೂ ಹೊಸದಾಗಿ ಪ್ರಯತ್ನ ಮಾಡುವ ಬಾಹ್ಯಾಕಾಶ ಪ್ರವಾಸಿಗರಾಗುವ ಮೂಲಕ ಪ್ರಣಯದ ಹೊಸ ದಾಖಲೆಯನ್ನು ರಚಿಸಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Relationship: ದೈಹಿಕ ಸಂಬಂಧ ಬೆಳೆಸುವಾಗ ಪುರುಷರು ಮಹಿಳೆಯರ ಈ 4 ಸಂಗತಿಗಳನ್ನು ಹೆಚ್ಚು ಗಮನಿಸುತ್ತಾರೆ!

ಬಾಹ್ಯಾಕಾಶದಲ್ಲಿ ರೊಮ್ಯಾನ್ಸ್ ಮಾಡುವುದು ಅಥವಾ ಸೆಕ್ಸ್ ಮಾಡುವುದು ಕಾನೂನುಬಾಹಿರವಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಬಾಹ್ಯಾಕಾಶ ಯಾತ್ರೆಯ ವೆಚ್ಚದ ಬಗ್ಗೆ ಜೋಸ್ ಅವರು ಒಬ್ಬ ಪ್ರಯಾಣಿಕನಿಗೆ 3 ಕೋಟಿ 75 ಲಕ್ಷ ರೂ. ಖರ್ಚಾಗುತ್ತದೆ ಎಂದಿದ್ದಾರೆ. ಅಂದರೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ಬಾಹ್ಯಾಕಾಶ ಪ್ರಣಯದ ವೆಚ್ಚವು 7 ಕೋಟಿ ರೂ.ಗಿಂತ ಹೆಚ್ಚಾಗಿರಲಿದೆ ಎಂಬುದು ಇದರರ್ಥ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

 

Trending News