7,999 ರೂ.ಗೆ ಸ್ಮಾರ್ಟ್ ಎಲ್ ಇಡಿ ಟಿವಿ .! ದೀಪಾವಳಿಗೊಂದು ಅದ್ಭುತ ಆಫರ್

Flipkart Smart LED TV Offer: ಫ್ಲಿಪ್‌ಕಾರ್ಟ್‌ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಮಾರಾಟ ಮಾಡಲಾಗುತ್ತಿದೆ. ಈ ಟಿವಿಯ ವೈಶಿಷ್ಟ್ಯ ಕೂಡಾ ಅದ್ಬುತವಾಗಿದೆ.   

Written by - Ranjitha R K | Last Updated : Oct 14, 2022, 12:43 PM IST
  • 8 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ
  • ಫ್ಲಿಪ್‌ಕಾರ್ಟ್ ನೀಡುತ್ತಿದೆ ಭಾರೀ ಆಫರ್
  • ಯಾವುದು ಈ ಸ್ಮಾರ್ಟ್ LED ಟಿವಿ ?
 7,999 ರೂ.ಗೆ ಸ್ಮಾರ್ಟ್ ಎಲ್ ಇಡಿ ಟಿವಿ .!  ದೀಪಾವಳಿಗೊಂದು ಅದ್ಭುತ ಆಫರ್  title=
Flipkart Smart LED TV Offer

Flipkart Smart LED TV Offer : ಈ ದೀಪಾವಳಿಯಲ್ಲಿ, ನಿಮ್ಮ ಮನೆಯಲ್ಲಿ ಬಳಸುವ ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಟಿವಿಗೆ ಅಪ್‌ಗ್ರೇಡ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಸಾಮಾನ್ಯವಾಗಿ ಅದಕ್ಕಾಗಿ  20000 ರಿಂದ 25000 ರೂಪಾಯಿಗಳನ್ನು ಖರ್ಚು ಮಾಡಬೇಕಾಗಬಹುದು. ಆದರೆ ಈಗ 8 ಸಾವಿರಕ್ಕಿಂತ ಕಡಿಮೆ ಬಜೆಟ್ ನಲ್ಲಿಯೂ ಸ್ಮಾರ್ಟ್ ಟಿವಿ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಮಾರಾಟ ಮಾಡಲಾಗುತ್ತಿದೆ.  ಈ ಟಿವಿಯ ವೈಶಿಷ್ಟ್ಯ ಕೂಡಾ ಅದ್ಬುತವಾಗಿದೆ. 

ಯಾವುದು ಈ ಸ್ಮಾರ್ಟ್ LED ಟಿವಿ  ?:
ನಾವಿಲ್ಲಿ Infinix Y1 80 cm HD Ready LED Smart Linux TVಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಸ್ಮಾರ್ಟ್ ಟಿವಿಯಲ್ಲಿ ಬಳಕೆದಾರರು ತುಂಬಾ ಇಷ್ಟಪಡುವ ಹಲವಾರು ವೈಶಿಷ್ಟ್ಯಗಳಿವೆ.  ಎಲ್ಲದ್ದಕ್ಕಿಂತ ಹೆಚ್ಚಾಗಿ ಈ ಸ್ಮಾರ್ಟ್ ಟಿವಿಯ ಬೆಲೆ ಕೇವಲ 7999 ರೂಪಾಯಿ. ವಾಸ್ತವವಾಗಿ ಈ ಟಿವಿಯ ಮೂಲ ಬೆಲೆ  16299 ರೂಪಾಯಿ.  ಆದರೆ ಈ ಟಿವಿಯ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ 52 ಪ್ರತಿಶತದಷ್ಟು  ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂದರೆ ಈ ಟಿವಿಯನ್ನು ಗ್ರಾಹಕರು 7999 ರೂಪಾಯಿಗೆ ಖರೀದಿಸಬಹುದು. 

ಇದನ್ನೂ ಓದಿ : DSLR ಕ್ಯಾಮೆರಾಗೆ ಸೆಡ್ಡು; ಬಂದಿದೆ Oppoದ ಅತ್ಯಂತ ಸುಂದರ ಸ್ಮಾರ್ಟ್‌ಫೋನ್!

ಟಿವಿಯ ವೈಶಿಷ್ಟ್ಯಗಳು  :
ಈ ಸ್ಮಾರ್ಟ್ LED ಟಿವಿಯಲ್ಲಿ, ಗ್ರಾಹಕರು 32-ಇಂಚಿನ ಪ್ರಕಾಶಮಾನವಾದ ಡಿಸ್ಪ್ಲೇ ಜೊತೆಗೆ  ಪ್ರಿ ಇನ್ಸ್ಟಾಲ್ಡ್  ಅಪ್ಲಿಕೇಶನ್ ಗಳನ್ನೂ ಪಡೆಯುತ್ತಾರೆ.  ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಬರುವ  ಈ ಟಿವಿಯ ರೆಫರೆನ್ಸ್ ರೇಟ್ 60 ಆಗಿದೆ. Hz ಮತ್ತು ಇದು 20 ವ್ಯಾಟ್‌ಗಳ ಆಡಿಯೊ ಸಪೋರ್ಟ್ ಅನ್ನು ಹೊಂದಿದೆ.

ಇದನ್ನೂ ಓದಿ : iPhone 14 ನ್ನು ಅರ್ಧ ಬೆಲೆಗೆ ಖರೀದಿಸುವ ಸುವರ್ಣಾವಕಾಶ! ಅದೂ ಬ್ರಾಂಡ್ ನ್ಯೂ ಫೋನ್... ಸೆಕೆಂಡ್ ಹ್ಯಾಂಡ್ ಅಲ್ಲ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News