Flipkart: Vivo ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್‌ನಲ್ಲಿ ರೂ. 15,000 ರಿಯಾಯಿತಿ

Flipkart Vivo Carnival Sale: Vivo ಇತ್ತೀಚೆಗೆ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್ Vivo V23 ಅನ್ನು ಬಿಡುಗಡೆ ಮಾಡಿದೆ. ಫೋನ್‌ಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಇದೀಗ ಈ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಸೇಲ್‌ನಲ್ಲಿ ಖರೀದಿಸಬಹುದು. ಹೇಗೆ ಎಂದು ತಿಳಿಯೋಣ...

Written by - Yashaswini V | Last Updated : Apr 6, 2022, 01:22 PM IST
  • ವಿವೋ ಕಾರ್ನಿವಲ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ.
  • ವಿವೋ ಕಾರ್ನಿವಲ್ ಸೇಲ್ ಏಪ್ರಿಲ್ 1 ರಿಂದ ಏಪ್ರಿಲ್ 7 ರವರೆಗೆ ನಡೆಯಲಿದೆ.
  • ಈ ಸೇಲ್‌ನಲ್ಲಿ Vivo V23 ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
Flipkart: Vivo ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್‌ನಲ್ಲಿ ರೂ. 15,000 ರಿಯಾಯಿತಿ  title=
Flipkart Vivo Carnival Sale

Flipkart Vivo Carnival Sale: Flipkart ನಲ್ಲಿ  ವಿವೋ ಕಾರ್ನಿವಲ್ ಮಾರಾಟವು (Flipkart Vivo Carnival Sale)  ನಡೆಯುತ್ತಿದೆ. ಈ ಸೇಲ್ ಏಪ್ರಿಲ್ 1 ರಿಂದ ಪ್ರಾರಂಭವಾಗಿದೆ ಮತ್ತು ಏಪ್ರಿಲ್ 7 ರವರೆಗೆ ನಡೆಯಲಿದೆ. ಮಾರಾಟದಲ್ಲಿ Vivo ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳಿವೆ. ನೀವು ಕಡಿಮೆ ಬಜೆಟ್ನಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗಾಗಿ ಹುಡುಕುತ್ತಿದ್ದರೆ ಈ ಮಾರಾಟವು ನಿಮಗೆ ಉಪಯುಕ್ತವಾಗಬಹುದು. 

ಪ್ರೀಮಿಯಂ ಫೋನ್‌ಗಳನ್ನು ಫ್ಲಿಪ್ಕಾರ್ಟ್ ವಿವೋ ಕಾರ್ನಿವಲ್  ಸೇಲ್‌ನಲ್ಲಿ (Flipkart Vivo Carnival Sale) ಅತ್ಯಂತ ಅಗ್ಗವಾಗಿ ಖರೀದಿಸಬಹುದು. Vivo T1 5G, Vivo V23 5G ನಂತಹ ಫೋನ್‌ಗಳಲ್ಲಿ ಉತ್ತಮ ಕೊಡುಗೆಗಳು ಲಭ್ಯವಿವೆ. Vivo ಇತ್ತೀಚೆಗೆ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್ Vivo V23 ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಂದ ಈ ಫೋನ್‌ಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ.  ಈ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಸೇಲ್‌ನಲ್ಲಿ ಖರೀದಿಸಬಹುದು. ಹೇಗೆ ಎಂದು ತಿಳಿಯೋಣ...

ಇದನ್ನೂ ಓದಿ- Twitter : ಶೀಘ್ರದಲ್ಲೇ ಟ್ವಿಟ್ಟರ್ ವಿಶೇಷ ವೈಶಿಷ್ಟ್ಯ, ಇದರಿಂದ ಎಡಿಟ್ ಸಹ ಮಾಡಬಹುದು

Flipkart Vivo ಕಾರ್ನಿವಲ್ ಮಾರಾಟ: Vivo V23 5G ಕೊಡುಗೆಗಳು ಮತ್ತು ರಿಯಾಯಿತಿಗಳು (Flipkart Vivo Carnival Sale: Vivo V23 5G Offers And Discounts) :
Vivo V23 5G 8GB RAM + 128 GB ಸ್ಟೋರೇಜ್ ರೂಪಾಂತರದ ಬಿಡುಗಡೆಯ ಬೆಲೆ ರೂ. 34,990 ಆಗಿದೆ, ಆದರೆ ಫೋನ್ ಸೇಲ್‌ನಲ್ಲಿ ರೂ. 29,990 ಗೆ ಲಭ್ಯವಿದೆ. ಇದರ ನಂತರ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಇವೆ, ಇದರಿಂದಾಗಿ ಫೋನ್‌ನ ಬೆಲೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

Flipkart Vivo ಕಾರ್ನಿವಲ್ ಮಾರಾಟ: Vivo V23 5G ಬ್ಯಾಂಕ್ ಆಫರ್ (Flipkart Vivo Carnival Sale: Vivo V23 5G Bank Offer) :
Vivo V23 5G ಅನ್ನು ಖರೀದಿಸಲು ನೀವು HDFC ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Credit Card) ಅನ್ನು ಬಳಸಿದರೆ, ನೀವು 2 ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಅಂದರೆ, ಫೋನ್ ಬೆಲೆ 27,990 ರೂ. ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡ ಇದೆ. 

ಇದನ್ನೂ ಓದಿ- Whatsapp: ವಾಟ್ಸಾಪ್‌ನಲ್ಲಿ ಇನ್ಮುಂದೆ ಸಂದೇಶಗಳಿಗೆ ಸಂಬಂಧಿಸಿದ ಈ ಕೆಲಸ ಮಾಡಲು ಸಾಧ್ಯವಿಲ್ಲ

Flipkart Vivo ಕಾರ್ನಿವಲ್ ಸೇಲ್: Vivo V23 5G ಎಕ್ಸ್ಚೇಂಜ್ ಆಫರ್ (Flipkart Vivo Carnival Sale: Vivo V23 5G Exchange Offer) : 
Vivo V23 5G ನಲ್ಲಿ 13,000 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 13 ಸಾವಿರ ರಿಯಾಯಿತಿ ಲಭ್ಯವಿರುತ್ತದೆ. ನೀವು ಈ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ, 14,990 ರೂ.ಗಳಿಗೆ ಫೋನ್ ಅನ್ನು ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News