Reliance Jio : ಜಿಯೋ ತನ್ನ ಬಳಕೆದಾರರಿಗೆ ಅತ್ಯುತ್ತಮ ಸೌಲಭ್ಯವನ್ನು ನೀಡುತ್ತದೆ.ಅದರ ಅಡಿಯಲ್ಲಿ ಬಳಕೆದಾರರು ತಮ್ಮ ಆಯ್ಕೆಯ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಬಹುದು.ಈ ಯೋಜನೆಯನ್ನು ಜಿಯೋ ಚಾಯ್ಸ್ ನಂಬರ್ ಸ್ಕೀಮ್ ಎಂದು ಕರೆಯಲಾಗುತ್ತದೆ.ಇದರಲ್ಲಿ ಶುಲ್ಕವನ್ನು ಪಾವತಿಸುವ ಮೂಲಕ ನಿಮ್ಮ ಆಯ್ಕೆಯ ಸಂಖ್ಯೆಯನ್ನು ಪಡೆದುಕೊಳ್ಳಬಹುದು. ತಮ್ಮ ಆಯ್ಕೆಯ ಪ್ರಕಾರ ಸಂಖ್ಯೆಯನ್ನು ಆಯ್ಕೆ ಮಾಡಲು ಬಯಸುವ ಅಥವಾ ಅವರ ಆಯ್ಕೆಯ ಪ್ರಕಾರ ಸಂಖ್ಯೆಯನ್ನು ಕಸ್ಟಮೈಸ್ ಮಾಡಲು ಬಯಸುವವರಿಗೆ ಈ ಸ್ಕೀಮ್ ಉಪಯುಕ್ತವಾಗಿದೆ. ಜನ್ಮದಿನ,ವಿವಾಹ ವಾರ್ಷಿಕೋತ್ಸವ ಅಥವಾ ಯಾವುದೇ ವಿಶೇಷ ಸಂಖ್ಯೆಯನ್ನು ನಿಮ್ಮ ಫೋನ್ ನಂಬರ್ ಆಗಿ ಬಳಸಿಕೊಳ್ಳಬೇಕಾದರೆ Jio ಚಾಯ್ಸ್ ಸಂಖ್ಯೆ ಯೋಜನೆ ನಿಮ್ಮ ಆಸೆಯನ್ನು ನೆರವೇರಿಸುತ್ತದೆ.
ಜಿಯೋ ಚಾಯ್ಸ್ ನಂಬರ್ ಸ್ಕೀಮ್:
ಜಿಯೋ ಚಾಯ್ಸ್ ನಂಬರ್ ಸ್ಕೀಮ್ ಅಡಿಯಲ್ಲಿ, ಬಳಕೆದಾರರು 499 ರೂಪಾಯಿ ಪಾವತಿಸುವ ಮೂಲಕ ಸಂಖ್ಯೆಯನ್ನು ಆಯ್ಕೆ ಮಾಡಬಹುದು.ಇದರಲ್ಲಿ, ಬಳಕೆದಾರರು ತಮ್ಮ ಸಂಖ್ಯೆಯ ಕೊನೆಯ 4-6 ಅಂಕೆಗಳನ್ನು ಆಯ್ಕೆ ಮಾಡುವ ಸೌಲಭ್ಯವನ್ನು ಪಡೆಯುತ್ತಾರೆ.ಬಳಕೆದಾರರು ಆಯ್ಕೆ ಮಾಡಿದ ಸಂಖ್ಯೆ ಲಭ್ಯವಿಲ್ಲದಿದ್ದರೆ, Jio ಬಳಕೆದಾರರಿಗೆ ಅವರ ಪಿನ್‌ಕೋಡ್ ಅನ್ನು ಆಧರಿಸಿ ಇತರ ಸಂಖ್ಯೆಗಳ ಆಯ್ಕೆಯನ್ನು ನೀಡುತ್ತದೆ.ಈ ಸೌಲಭ್ಯವು JioPlus ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಲಭ್ಯವಿದೆ.ಇದಲ್ಲದೆ, ಬಳಕೆದಾರರು ಹೊಸ ಸಿಮ್ ಕಾರ್ಡ್ ಅನ್ನು ಪಡೆಯುವುದು ಕೂಡಾ ಸಾಧ್ಯವಾಗುತ್ತದೆ.
ಇದನ್ನೂ ಓದಿ : ಈ ಸ್ಮಾರ್ಟ್ ಫೋನ್ ಬೆಲೆ 7 ಸಾವಿರಕ್ಕಿಂತ ಕಡಿಮೆ.., ಬ್ಯಾಟರಿ, ಕ್ಯಾಮೆರಾ ಎಲ್ಲಾ ಅದ್ಬುತ...!
ನಿಮ್ಮ ಆಯ್ಕೆಯ ಸಂಖ್ಯೆಯನ್ನು ಆರಿಸುವ ಪ್ರಕ್ರಿಯೆ ಯಾವುದು ನೋಡೋಣ:
1. ಮೊದಲಿಗೆ https://www.jio.com/selfcare/choice-number ವೆಬ್‌ಸೈಟ್‌ಗೆ ಭೇಟಿ ನೀಡಿ .
2. ನಿಮ್ಮ JioPostpaid ಪ್ಲಸ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
3. ನಂತರ OTP ಹಾಕಿ ಪರಿಶೀಲಿಸಿ.
4. ಇದರ ನಂತರ ಹೊಸ ಪುಟ ತೆರೆಯುತ್ತದೆ. ಅಲ್ಲಿ 4-6 ಅಂಕೆಗಳು, ಹೆಸರು ಮತ್ತು ನಿಮ್ಮ ಆಯ್ಕೆಯ ಪಿನ್ ಕೋಡ್ ಅನ್ನು ನಮೂದಿಸಬಹುದು.
5.ನಿಮ್ಮ ಪಿನ್ ಕೋಡ್ ಪ್ರಕಾರ ಲಭ್ಯವಿರುವ ಫೋನ್ ಸಂಖ್ಯೆಗಳನ್ನು ನಿಮಗೆ ನೀಡಲಾಗುತ್ತದೆ.
6. ಇಲ್ಲಿ ನೀವು ನಿಮ್ಮ ಆಯ್ಕೆಯ ಸಂಖ್ಯೆಯನ್ನು ಆರಿಸಿ ಮತ್ತು ಪಾವತಿ ಮಾಡುವ ಮೂಲಕ ಹೊಸ ಸಿಮ್ ಕಾರ್ಡ್ ಅನ್ನು ಪಡೆಯಬಹುದು.
ಇದನ್ನೂ ಓದಿ : ಬಿಎಸ್‌ಎನ್ಎಲ್ ಗ್ರಾಹಕರಿಗೆ ಬಂಪರ್ ಕೊಡುಗೆ: 160 ದಿನಕ್ಕೆ 320GB ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ!
MyJio ಅಪ್ಲಿಕೇಶನ್‌ನಿಂದ :
1. ಮೊದಲನೆಯದಾಗಿ MyJio ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ
2. ಅಪ್ಲಿಕೇಶನ್‌ನಲ್ಲಿ ನಿಮ್ಮ ಜಿಯೋ ಪೋಸ್ಟ್‌ಪೇಯ್ಡ್ ಸಂಖ್ಯೆಯನ್ನು ನಮೂದಿಸಿ.
3. ಇಲ್ಲಿ The chosen number ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಇದರ ನಂತರ ಲೆಟ್ಸ್ ಬುಕ್ ನೌ " ಆಯ್ಕೆಯನ್ನು ಆರಿಸಿ.
5. ನಂತರ ನಿಮ್ಮ ಹೆಸರು, ಪಿನ್ ಕೋಡ್ ಮತ್ತು ನಿಮ್ಮ ಆಯ್ಕೆಯ ಕೊನೆಯ 4-5 ಅಂಕೆಗಳನ್ನು ನಮೂದಿಸಿ ಮತ್ತು "‘Show available numbers’ ಕ್ಲಿಕ್ ಮಾಡಿ.
6. ಇದರ ನಂತರ ಲಭ್ಯವಿರುವ ಫೋನ್ ಸಂಖ್ಯೆಗಳು ಕಾಣಿಸುತ್ತವೆ.
7. ಇಲ್ಲಿ ನಿಮ್ಮ ಆಯ್ಕೆಯ ಸಂಖ್ಯೆಯನ್ನು ಆರಿಸಿ ಮತ್ತು ಪಾವತಿ ಮಾಡುವ ಮೂಲಕ ನೀವು ಹೊಸ ಸಿಮ್ ಕಾರ್ಡ್ ಅನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.