Gmail New Feature: ಇನ್ಮುಂದೆ ಹ್ಯಾಕರ್ ಗಳು ನಿಮ್ಮ Gmail ಖಾತೆ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಬರಲಿದೆ ಈ ಅದ್ಭುತ ವೈಶಿಷ್ಟ್ಯ

Gmail BIMI Feature - ಈ ವೈಶಿಷ್ಟ್ಯದಲ್ಲಿ, ಸಂದೇಶ ಗುರುತಿಸುವಿಕೆಗಾಗಿ ಬ್ರಾಂಡ್ ಇಂಡಿಕೇಟರ್ (Brand Indicator For Message Identification) ಎಂಬ ಮಾನದಂಡವನ್ನು ಬಳಸಲಾಗಿದ್ದು ಅದು ಇಮೇಲ್ (e-Mail) ಅನ್ನು ಹೆಚ್ಚು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.

Written by - Nitin Tabib | Last Updated : Aug 1, 2021, 04:08 PM IST
  • ಒಂದು ವೇಳೆ ನೀವೂ ಕೂಡ ಮೇಲ್ ಗಳಿಗಾಗಿ Gmail ಅನ್ನು ಬಳಸುತ್ತಿದ್ದರೆ ಈ ಸುದ್ದಿ ನಿಮಗಾಗಿ.
  • ಪ್ರತಿ ನಿತ್ಯ ಹೊಸ ಹೊಸ ಹ್ಯಾಕಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
  • ಇಂತಹ ಪರಿಸ್ಥಿತಿಯಲ್ಲಿ, ಇದೀಗ ಗೂಗಲ್ ವೈಶಿಷ್ಟ್ಯವೊಂದನ್ನು ಜಾರಿಗೆ ತರುತ್ತಿದೆ ಬನ್ನಿ ಈ ಕುರಿತು ತಿಳಿಯೋಣ.
Gmail New Feature: ಇನ್ಮುಂದೆ ಹ್ಯಾಕರ್ ಗಳು ನಿಮ್ಮ Gmail ಖಾತೆ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಬರಲಿದೆ ಈ ಅದ್ಭುತ ವೈಶಿಷ್ಟ್ಯ

ನವದೆಹಲಿ: Gmail BIMI Feature - ಒಂದು ವೇಳೆ ನೀವೂ ಕೂಡ ಮೇಲ್ ಕಳುಹಿಸಲು/  ಪಡೆಯಲು  Gmail ಅನ್ನು ಬಳಸುತ್ತಿದ್ದರೆ ಈ ಸುದ್ದಿ ನಿಮಗಾಗಿ.  ಪ್ರತಿ ನಿತ್ಯ ಹೊಸ ಹೊಸ ಹ್ಯಾಕಿಂಗ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಗೂಗಲ್ ತನ್ನ ಹೊಸ ವೈಶಿಷ್ಟ್ಯ ಜಾರಿಗೆ ತರುತ್ತಿದ್ದು ಇದು ನಿಮ್ಮ ಇ-ಮೇಲ್ ಖಾತೆಯನ್ನು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಿಸಲಿದೆ. ಜಿ-ಮೇಲ್ ನಲ್ಲಿ ಪ್ರಮಾಣೀಕೃತ ಬ್ರಾಂಡ್ ಲೋಗೋ (Brand Logo) ಒಂದು ಸುರಕ್ಷಿತ ಸೇವೆಯಾಗಿದ್ದು, ಇದನ್ನು ಕಳೆದ ಜುಲೈನಲ್ಲಿ ಘೋಷಿಸಲಾಗಿತ್ತು. ಈ ಸೇವೆ ಮುಂಬರುವ ವಾರಗಳಲ್ಲಿ ಬಿಡುಗಡೆಯಾಗಲಿದೆ. ಗೂಗಲ್ (Google) ಈ ಕುರಿತು ಖುದ್ದಾಗಿ ಮಾಹಿತಿ ನೀಡಿದೆ. ಗೂಗಲ್ ಪ್ರಕಾರ, ಈ ವೈಶಿಷ್ಟ್ಯವು ಸಂದೇಶ ಗುರುತಿಸುವಿಕೆಗಾಗಿ ಬ್ರಾಂಡ್ ಇಂಡಿಕೇಟರ್ (BIMI) ಎಂಬ ಮಾನದಂಡವನ್ನು ಬಳಸುತ್ತದೆ, ಇದು ಇ-ಮೇಲ್‌ಗಳನ್ನು ಹೆಚ್ಚು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವೂ ಕೂಡ ನಿಮ್ಮ ಸಂವಹನಗಳಿಗಾಗಿ GMAIL ಬಳಸುತ್ತಿದ್ದರೆ, ಈ ಮಾಹಿತಿ ನಿಮಗೆ ಕೆಲಸಕ್ಕೆ ಬರಲಿದೆ. 

ಈ ಸೇವೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಹೊಸ ಸೇವೆಯೊಂದಿಗೆ ಯಾವುದೇ ಸಂಸ್ಥೆಯಾ ಲೋಗೋ ಇ-ಮೇಲ್ ಕಳುಹಿಸಿದ ಬಳಿಕ, ನಿಗದಿತ ವ್ಯಕ್ತಿಯ ಇನ್-ಬಾಕ್ಸ್ ನಲ್ಲಿ ಕಾಣಿಸಲಿದೆ. ಇದು ಡೊಮೇನ್ ಆಧಾರಿತ ಸಂದೇಶ ಪ್ರಮಾಣೀಕರಣ, ರಿಪೋರ್ಟಿಂಗ್ ಹಾಗೂ ಅನುರೂಪತೆ (DMARC) ಹೆಸರಿನ ಒಂದು ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು ಇದು ಫಿಶಿಂಗ್ (Phishing) ಸಂದೇಶಗಳನ್ನು ಕಡಿತಗೊಳಿಸಲು ಸಹಾಯ ಮಾಡಲಿದೆ.

ತಂತ್ರಜ್ಞಾನದ ಈ ದೈತ್ಯ ಕಂಪನಿ 2019ರಲ್ಲಿ BIMI ಕಾರ್ಯ ಸಮೂಹದಲ್ಲಿ ಶಾಮೀಲಾಗಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಕಂಪನಿ, ತಮ್ಮ ಇ-ಮೇಲ್ ಗಳ ಪ್ರಮಾನೀಕರಣಕ್ಕೆ ಯಾವ ಕಂಪನಿ ಸೆಂಡರ್ ಪಾಲಸಿ ಫ್ರೇಮ್ ವರ್ಕ್ (SPF) ಅಥವಾ ಡೊಮೇನ್ ಗಳ ಐಡೆಂಟಿಫೈಡ್ ಮೇಲ್ (DKIM) ಗಳನ್ನು ಬಳಸುತ್ತವೆಯೋ ಅವುಗಳ ಲೋಗೋ ಕಾಣಿಸಲಿದೆ ಎಂದು ಹೇಳಿತ್ತು. SPF ಹಾಗೂ DKIM ಇ-ಮೇಲ್ ಪ್ರಮಾಣೀಕರಣದ ತಂತ್ರಜ್ಞಾನಗಳಾಗಿದ್ದು, ಸ್ಪ್ಯಾಮಾರ್ ಗಳನ್ನು ನಿಯಂತ್ರಣದಲ್ಲಿಡಲು ಇವುಗಳ ಬಳಕೆ ಮಾಡಲಾಗುತ್ತದೆ. ಒಂದು ವೇಳೆ ಬಳಕೆದಾರರವತಿಯಿಂದ ಯಾವುದೇ ಒಂದು ಇ-ಮೇಲ್ ಅನ್ನು ಸ್ಪಾಮ್ ಪಟ್ಟಿಗೆ ಸೇರಿಸಿದ ಸಂದರ್ಭಗಳಲ್ಲಿ ಈ ತಂತ್ರಜ್ಞಾನಗಳನ್ನು ಬಳಸುವ ಸಂಘಟನೆಗಳು ಪರಿಣಾಮಗಳನ್ನು ಎದುರಿಸುವ ಸಮಯ ಬರುತ್ತದೆ.

ಇದನ್ನೂ ಓದಿ- Corona Delta Variant: ಸಿಡುಬಿನಂತೆ ಹರಡುತ್ತದೆ ಕೊರೊನಾ ವೈರಸ್ ನ ಈ ರೂಪಾಂತರಿ, ವಿಜ್ಞಾನಿಗಳ ಎಚ್ಚರಿಕೆ!

ಈ ಸೇವೆಯ ಲಾಭಗಳೇನು?
ಈ ಕುರಿತು ಬ್ಲಾಗ್ ಪೋಸ್ಟ್ ವೊಂದರಲ್ಲಿ ಬರೆದುಕೊಂಡ ಕಂಪನಿ, ಒಂದೊಮ್ಮೆ ಈ ದೃಡೀಕರಿಸಿದ  ಇಮೇಲ್‌ಗಳು ನಮ್ಮ ಎಲ್ಲ ರುಜುವಾತುಗಳನ್ನು ನಿಜ ಎಂದು ಸಾಬೀತುಪಡಿಸಿದಲ್ಲಿ, Gmail UIM ನಲ್ಲಿ ಅಸ್ತಿತ್ವದಲ್ಲಿರುವ ಸ್ಲಾಟ್‌ನಲ್ಲಿ  ಲೋಗೋ  ಕಾಣಲಾರಂಭಿಸುತ್ತದೆ ಎಂದು ಹೇಳಿದೆ. ಲೋಗೋ ಮುಂದಿನ ಸಣ್ಣ ವೃತ್ತಾಕಾರದ ಅವತಾರ್ ಸ್ಲಾಟ್‌ನಲ್ಲಿ ಕಾಣಿಸಲಿದೆ. Gmailನಲ್ಲಿನ ಇ-ಮೇಲ್‌ಗಾಗಿ, ರಿಸೀವರ್‌ನ ಇನ್‌ಬಾಕ್ಸ್‌ನಲ್ಲಿ ಒಂದು ವಿಶಿಷ್ಟ ಗುರುತನ್ನು ನೀಡಲಿದೆ. ಇದು ಬ್ರ್ಯಾಂಡ್‌ಗಳು ತಮ್ಮ ಸುದ್ದಿಪತ್ರಗಳನ್ನು ದೃಡೀಕರಿಸಲು, ಇಮೇಲ್‌ಗಳನ್ನು ನೀಡಲು ಮತ್ತು ಇನ್ನೂ ಹೆಚ್ಚಿನ ಸಂಗತಿಗಳನ್ನುಮಾಡಲು ಸಹಾಯ ಮಾಡುತ್ತದೆ., ಇದಲ್ಲದೆ ಇದು ವಿಶೇಷವಾಗಿ  ಫಿಶಿಂಗ್‌ಗೆ (Phishing) ಯತ್ನಿಸುವ ಹ್ಯಾಕರ್‌ (Hacking) ಗಳಿಗೆ ಹೆಚ್ಚಾಗಿ ಹಾನಿ ಮಾಡುತ್ತದೆ. 

ಇದನ್ನೂ ಓದಿ-Oukitel WP15 5G: ಆ. 23ಕ್ಕೆ ಲಾಂಚ್ ಆಗಲಿದೆ ವಿಶ್ವದ ಮೊದಲ 15,600mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌

Two Step Verificationನಿಂದ ಕೂಡ ಲಾಭ
ವಿಶ್ವಾದ್ಯಂತ ಕೋಟ್ಯಂತರ ಜನರು ಪರ್ಸನಲ್ ಇ-ಮೇಲ್ ರೂಪದಲ್ಲಿ ಜಿ-ಮೇಲ್ ಅನ್ನು ಬಳಸುತ್ತಾರೆ. ಜಿ-ಮೇಲ್ ಅನ್ನು ಸಿಕ್ಯೂರ್ ಆಗಿಸಲು ನೀವು 2SV ವೈಶಿಷ್ಟ್ಯವನ್ನು ಕೂಡ ಬಳಕೆ ಮಾಡಬೇಕು. ಈ ವೈಶಿಷ್ಟ್ಯದ ವಿಶೇಷತೆ ಎಂದರೆ, ಒಂದು ವೇಳೆ ಯಾವುದೇ ಓರ್ವ ವ್ಯಕ್ತಿಗೆ ನಿಮ್ಮ ಜಿ-ಮೇಲ್ ಖಾತೆಯ ಪಾಸ್ವರ್ಡ್ ಗೊತ್ತಿದ್ದರೂ ಕೂಡ ಆ ವ್ಯಕ್ತಿ ನಿಮ್ಮ ಜಿ-ಮೇಲ್ ಖಾಎಯನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಖಾತೆ ತೆರೆಯಲು ಪಾಸ್ವರ್ಡ್ ಜೊತೆಗೆ ವೆರಿಫಿಕೆಶನ್ ಅವಶ್ಯಕತೆ ಕೂಡ ಬೀಳಲಿದೆ. ಈ ವೆರಿಫಿಕೆಶನ್ ಕೋಡ್ ಅನ್ನು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಎಲ್ಲಿಯವರೆಗೆ ಈ ಫೆರಿಫಿಕೆಶನ್ ಕೋಡ್ ನಮೂದಿಸಲಾಗುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಜಿ-ಮೇಲ್ ಖಾತೆ ತೆರೆಯುವುದಿಲ್ಲ.

ಇದನ್ನೂ ಓದಿ-Smartphone Tips And Tricks: ಸ್ಮಾರ್ಟ್ ಫೋನ್ ಕಳೆದುಹೋದರೆ ತಕ್ಷಣ ನೀವು ಮಾಡಲೇ ಬೇಕಾದ ಕೆಲಸ ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News