Jio Super offer..! ಬಳಕೆದಾರರಿಗೆ ಎರಡು ದಿನಗಳವರೆಗೆ ಉಚಿತವಾಗಿ ಸಿಗಲಿದೆ ಎಲ್ಲಾ ಸೇವೆಗಳು

ಈ ಘೋಷಣೆಯ ಅನ್ವಯ ಕೆಲವು ವಿಶೇಷ ಬಳಕೆದಾರರಿಗೆ ಎರಡು ದಿನಗಳವರೆಗೆ, ತಮ್ಮ jio ಕಂಪನಿಯ ಪ್ರತಿ ಸೇವೆಯನ್ನು (jio free service for two days)ಉಚಿತವಾಗಿ ನೀಡಲಾಗುವುದು.

Written by - Ranjitha R K | Last Updated : Feb 7, 2022, 04:41 PM IST
  • ಎರಡು ದಿನಗಳ ಕಾಲ ಉಚಿತ ಸೇವೆ ನೀಡುತ್ತಿದೆ ಜಿಯೋ
  • ಮುಂಬೈ ಬಳಕೆದಾರರಿಗೆ ಮಾತ್ರ ಈ ಪ್ರಯೋಜನ
  • ಅಸ್ತಿತ್ವದಲ್ಲಿರುವ ಪ್ಯಾಕ್‌ನ ಮಾನ್ಯತೆಯನ್ನು ಹೆಚ್ಚಿಸಲಾಗುವುದು
Jio Super offer..! ಬಳಕೆದಾರರಿಗೆ ಎರಡು ದಿನಗಳವರೆಗೆ ಉಚಿತವಾಗಿ ಸಿಗಲಿದೆ ಎಲ್ಲಾ ಸೇವೆಗಳು  title=
ಎರಡು ದಿನಗಳ ಕಾಲ ಉಚಿತ ಸೇವೆ ನೀಡುತ್ತಿದೆ ಜಿಯೋ (file photo)

ನವದೆಹಲಿ : ದೇಶದ ನಂಬರ್ ಒನ್ ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಇತ್ತೀಚೆಗೆ ಹೊಸ ಘೋಷಣೆಯೊಂದನ್ನು ಮಾಡಿದೆ. ಈ ಘೋಷಣೆಯ ಅನ್ವಯ ಕೆಲವು ವಿಶೇಷ ಬಳಕೆದಾರರಿಗೆ ಎರಡು ದಿನಗಳವರೆಗೆ, ತಮ್ಮ ಕಂಪನಿಯ ಪ್ರತಿ ಸೇವೆಯನ್ನು (jio free service for two days)ಉಚಿತವಾಗಿ ನೀಡಲಾಗುವುದು. 

ಯಾವ ಕಾರಣಕ್ಕೆ ಈ ಉಚಿತ ಸೇವೆ ? 
ಕೆಲ ದಿನಗಳಿಂದ ಮುಂಬೈ ನಗರದ ಅನೇಕ ಜಿಯೋ ಬಳಕೆದಾರರು (Jio users) ಸಾಮಾನ್ಯ ಸಮಸ್ಯೆಯನ್ನು ಎದುರಿಸಿದ್ದಾರೆ.  ಇತ್ತೀಚೆಗೆ ಮುಂಬೈನಲ್ಲಿ ಜಿಯೋ ನೆಟ್‌ವರ್ಕ್ ಡೌನ್ (Jio network down) ಆಗಿತ್ತು.  ಇದರಿಂದಾಗಿ ಮುಂಬೈನ ಜಿಯೋ ಬಳಕೆದಾರರು ಸುಮಾರು ಎಂಟು ಗಂಟೆಗಳ ಕಾಲ ತುಂಬಾ ಅಸಮಾಧಾನಗೊಂಡಿದ್ದರು. ನೆಟ್‌ವರ್ಕ್ ಡೌನ್‌ನಿಂದ ಬಳಕೆದಾರರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಯಿತು. ಇದೀಗ ಗ್ರಾಹಕರು ನೆಟ್‌ವರ್ಕ್ ಡೌನ್‌ನಿಂದ  ಅನುಭವಿಸಿದ ಸಮಸ್ಯೆಗಳ ಬದಲಿಗೆ, ಕಂಪನಿಯು ಈ ಆಫರ್ ಅನ್ನು ನೀಡಿದೆ. ಅಂದರೆ ಇಲ್ಲಿ ತನ್ನ ಗ್ರಾಹಕರಿಗೆ ಎರಡು ದಿನಗಳವರೆಗೆ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡಲಾಗುವುದು (free service for two days). 

ಇದನ್ನೂ ಓದಿ : 8 ವರ್ಷಗಳ ನಂತರ ಹೊಸ ಲೋಗೋವನ್ನು ಪಡೆಯುತ್ತಿದೆ Google Chrome

ಈ ರೀತಿಯ ಸೇವೆಯ ಲಾಭವನ್ನು ಪಡೆದುಕೊಳ್ಳಿ :
ಈ ಸೇವೆಯ ಲಾಭವನ್ನು ಯಾರು ಪಡೆಯಬಹುದು ಮತ್ತು ಈ ಸೇವೆಯ ಲಾಭವನ್ನು ಪಡೆಯಲು ಏನು ಮಾಡಬೇಕು? ಎಂಬ ಪ್ರಶ್ನೆ ಈಗ ಏಳುವುದು ಸಹಜ. ಈ ಉಚಿತ ಸೇವೆಯು ಮುಂಬೈನ ಬಳಕೆದಾರರಿಗೆ (Mumbai users) ಮಾತ್ರ ಸಿಗಲಿದೆ.  ಬಳಕೆದಾರರ ಅಸ್ತಿತ್ವದಲ್ಲಿರುವ ರೀಚಾರ್ಜ್ ಪ್ಯಾಕ್‌ಗೆ (Recharge Pack) ಈ ಉಚಿತ ಸೇವೆಗಳನ್ನು ಸೇರಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಅಂದರೆ, ನಿಮ್ಮ ಅಸ್ತಿತ್ವದಲ್ಲಿರುವ ಪ್ಯಾಕ್‌ನ ಮಾನ್ಯತೆಯನ್ನು (Validity) ಎರಡು ದಿನಗಳವರೆಗೆ ವಿಸ್ತರಿಸಲಾಗುವುದು.    

 ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ.  2021ರಲ್ಲಿ, ಕೆಲವು ಬಳಕೆದಾರರು   ಸಮಸ್ಯೆ ಎದುರಿಸಿದ ಕಾರಣ, ಎರಡು ದಿನಗಳವರೆಗೆ ಅವರಿಗೆ ಉಚಿತ ಸೇವೆಗಳನ್ನು ನೀಡಲಾಯಿತು.  

ಇದನ್ನೂ ಓದಿ : Valentine’s Day:ನಿಮ್ಮ ಪ್ರೇಮಿಗೆ ಉಡುಗೊರೆ ನೀಡಲು ಅತ್ಯುತ್ತಮ ಆಯ್ಕೆ ಈ 5G ಸ್ಮಾರ್ಟ್‌ಫೋನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

GOOGLE CHROMEBrowserGoogle Chrome New Icon

Trending News