ಪ್ರೇಮ ಪಕ್ಷಿಗಳೇ ಎಚ್ಚರ !Valentine's Day ಗುಂಗಿನಲ್ಲಿ ಈ ಸ್ಕ್ಯಾಮ್ ಗೆ ಬಲಿಯಾಗದಿರಿ!

Valentine's Day  Scam : ಈ ವಂಚನೆಗಳನ್ನು ತಪ್ಪಿಸುವುದು ಹೇಗೆ ಎಂದು ತಿಳಿದುಕೊಳ್ಳುವ ಮುನ್ನ ಈ ಸಾಮಾನ್ಯ ರೀತಿಯ ವಂಚನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

Written by - Ranjitha R K | Last Updated : Feb 13, 2024, 01:40 PM IST
  • ಈ ದಿನಗಳಲ್ಲಿ ಆನ್‌ಲೈನ್ ಡೇಟಿಂಗ್ ತುಂಬಾ ಟ್ರೆಂಡ್‌ನಲ್ಲಿದೆ.
  • ಡೇಟಿಂಗ್ ಹಗರಣಗಳಲ್ಲಿ ಎಷ್ಟು ವಿಧಗಳಿವೆ?
  • ಡೇಟಿಂಗ್ ಸ್ಕ್ಯಾಮ್ ಹೇಗೆ ಕೆಲಸ ಮಾಡುತ್ತದೆ?
ಪ್ರೇಮ ಪಕ್ಷಿಗಳೇ ಎಚ್ಚರ !Valentine's Day ಗುಂಗಿನಲ್ಲಿ ಈ ಸ್ಕ್ಯಾಮ್ ಗೆ ಬಲಿಯಾಗದಿರಿ!  title=

Valentine's Day: ನಾಳೆಯೇ ಪ್ರೇಮಿಗಳ ದಿನ. ಈ ದಿನಗಳಲ್ಲಿ ಆನ್‌ಲೈನ್ ಡೇಟಿಂಗ್ ತುಂಬಾ ಟ್ರೆಂಡ್‌ನಲ್ಲಿದೆ.ತಮಗೂ ಸಂಗಾತಿ ಬೇಕು ಎಂದು ಬಯಸುವ ಅನೇಕರು ತಮ್ಮ ಸಂಗಾತಿಯನ್ನು ಹುಡುಕಲು ಈ ಮಾರ್ಗವನ್ನು ಆಶ್ರಯಿಸುತ್ತಾರೆ. ಆದರೆ ಸಮಸ್ಯೆ ಏನೆಂದರೆ ವ್ಯಾಲೆಂಟೈನ್ಸ್ ಡೇಗೆ ಸಂಬಂಧಿಸಿದ ವಂಚನೆಗಳು ಮತ್ತು ಆನ್‌ಲೈನ್ ಡೇಟಿಂಗ್ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂಟರ್‌ಪೋಲ್ ಕೂಡಾ ಡೇಟಿಂಗ್ ಆಪ್‌ಗಳಿಗೆ ಸಂಬಂಧಿಸಿದ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಈ ವಂಚನೆಗಳನ್ನು ತಪ್ಪಿಸುವುದು ಹೇಗೆ ಎಂದು ತಿಳಿದುಕೊಳ್ಳುವ ಮುನ್ನ ಈ ಸಾಮಾನ್ಯ ರೀತಿಯ ವಂಚನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಡೇಟಿಂಗ್ ಹಗರಣಗಳಲ್ಲಿ ಎಷ್ಟು ವಿಧಗಳಿವೆ? : 
ವಂಚಕರು ಪದೇ ಪದೇ ಹಣವನ್ನು ಕೇಳುತ್ತಾರೆ. ಒಮ್ಮೆ ಅವರಿಗೆ ನೀಡಿದ ಹಣವನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಬ್ಯಾಂಕ್ ವರ್ಗಾವಣೆಯ ಮೂಲಕ ಹಣವನ್ನು ಕೇಳುವುದು ವಂಚಕರು ಅನುಸರಿಸುವ ಒಂದು ವಿಧಾನವಾಗಿದೆ. ಒಮ್ಮೆ ನೀವು ಹಣ ವರ್ಗಾವಣೆ ಮಾಡಿದರೆ, ಆ ಹಣವನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಕಾರಣವೆಂದರೆ ಬ್ಯಾಂಕ್ ವರ್ಗಾವಣೆಯನ್ನು ರದ್ದು ಮಾಡುವುದು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : ಡೋಪಮೈನ್ ಜಾಲ: ಸ್ಮಾರ್ಟ್‌ಫೋನ್‌ಗಳಿಗೆ ಬಲಿಯಾಗುತ್ತಿದೆಯೇ ನಿಮ್ಮ ಸಂತೋಷ?

ಗಿಫ್ಟ್ ಕಾರ್ಡ್‌ಗಳು: ಈ ವಂಚಕರು ಗಿಫ್ಟ್ ಕಾರ್ಡ್‌ನ ಸಂಖ್ಯೆಯನ್ನು ಹೇಳುವಂತೆ  ಕೇಳುತ್ತಾರೆ. ಒಮ್ಮೆ ಈ ಸಂಖ್ಯೆಯನ್ನು ಕೊಟ್ಟರೆ, ಆ ಹಣವನ್ನು ಮರಳಿ ಪಡೆಯುವುದು ಅಸಾಧ್ಯ. ಹಣವನ್ನು ದೋಚಲು ವಂಚಕರು ಅನುಸರಿಸುತ್ತಿರುವ ಸುಲಭ ಮತ್ತು ಖಚಿತವಾದ ಮಾರ್ಗ ಇದಾಗಿದೆ. 

ಡೇಟಿಂಗ್ ಸ್ಕ್ಯಾಮ್ ಹೇಗೆ ಕೆಲಸ ಮಾಡುತ್ತದೆ? :
ವಂಚನೆಗಳು ಆನ್‌ಲೈನ್ ಡೇಟಿಂಗ್ ಸೈಟ್‌ಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಆಟಗಳಲ್ಲಿಯೂ ಸಂಭವಿಸುತ್ತವೆ.ವಂಚಕರು ಮೊದಲು ಇಲ್ಲಿ ನಿಮಗೆ ಹಲೋ ಹೇಳುತ್ತಾರೆ. ಸ್ನೇಹಿತರಂತೆ ನಟಿಸುತ್ತಾರೆ. ಉದ್ಯೋಗಗಳು ಮತ್ತು ಜೀವನದ ಬಗ್ಗೆ ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಾರೆ. ನಂತರ ನಿಮ ಜೊತೆಗಿನ ಸಂಬಂಧದ ಲಾಭವನ್ನು ಪಡೆದುಕೊಳ್ಳುತ್ತಾರೆ.ನಕಲಿ ಹೂಡಿಕೆ ಸಲಹೆಗಳನ್ನು ನೀಡುತ್ತಾರೆ ಮತ್ತು ನಕಲಿ ಯೋಜನೆಗಳಿಗೆ ಸೇರುವಂತೆ ಕೇಳುತ್ತಾರೆ. 

ಇದನ್ನೂ ಓದಿ : ಥ್ರೇಡ್ಸ್ ನಿಂದ ಇನ್ಸ್ಟಾ ರೀತಿಯಲ್ಲಿಯೇ ಪೋಸ್ಟಗಳನ್ನು ಸೇವ್ ಮಾಡುವ ಹೊಸ ವೈಶಿಷ್ಟ್ಯದ ಪರೀಕ್ಷೆ

ಈ ಹಗರಣಗಳನ್ನು ತಪ್ಪಿಸುವುದು ಹೇಗೆ? :
ಅಪ್ಲಿಕೇಶನ್‌ಗಳನ್ನು ಖಾಸಗಿಯಾಗಿಡಿ: Facebook ಮತ್ತು Instagram ನಲ್ಲಿ ಸೆಟ್ಟಿಂಗ್‌ಗಳನ್ನು ಬಳಸಿ ಇದರಿಂದ ನಿಮ್ಮ ಸ್ನೇಹಿತರು ಮಾತ್ರ ನಿಮ್ಮ ಪೋಸ್ಟ್‌ಗಳು ಮತ್ತು ಮಾಹಿತಿಯನ್ನು ನೋಡಬಹುದು.
ಹೊಸ ಜನರೊಂದಿಗೆ ಜಾಗರೂಕರಾಗಿರಿ: ಎಲ್ಲರಿಂದ ವಿಶೇಷವಾಗಿ ನಿಮಗೆ ಪರಿಚಯವಿಲ್ಲದ ಜನರ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಅದನ್ನು ಸ್ವೀಕರಿಸಬೇಡಿ. ಪ್ರೀತಿಯಲ್ಲಿ ಮೋಸ ಮಾಡುವವರು ಸಾಮಾನ್ಯವಾಗಿ ನಕಲಿ ಖಾತೆಗಳನ್ನು ಬಳಸಿ ಮಾಹಿತಿ ಪಡೆಯುತ್ತಾರೆ.
ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಿ : ನಿಮ್ಮ ಡಿವೈಸ್ ನ ಸೆಕ್ಯೂರಿಟಿ ಸಾಫ್ಟ್‌ವೇರ್ ಅನ್ನು ಯಾವಾಗಲೂ ಅಪ್ಡೇಟ್ ಮಾಡಿಕೊಳ್ಳಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News