ನಿಮ್ಮ ಲವರ್‌ Instagram ಹಳೆಯ ಚಾಟ್‌ ಡಿಲೀಟ್‌ ಆಯ್ತಾ..? ಹೀಗೆ ಮಾಡಿ

ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದಿಷ್ಟು ಮಂದಿಯ ಚಾಟ್‌ಗಳು ಅಳಿಸಲಾರದಂತಿರುತ್ತವೆ. ಅವುಗಳಲ್ಲಿ ಪ್ರೀತಿ, ಭಾವನೆ, ಭಾವುಕ ಬಂಧನಗಳ ಕೊಂಡಿ ಚಾಚಿಕೊಂಡಿರುತ್ತದೆ. ಆದ್ರೆ ಕೋಪದಲ್ಲಿ ಅಥವಾ ಯಾವುದೋ ಕಾರಣಕ್ಕೆ ಅವರ ಚಾಟ್‌ನ್ನು ಡಿಲೀಟ್‌ ಮಾಡಿ ನಂತರ ಅವುಗಳಿಗಾಗಿ ಪರದಾಡುತ್ತಿದ್ದರೆ ಡೋಂಟ್‌ ವರಿ, ಇಲ್ಲಿ ನಾವು ಹಳೆಯ ಸಂದೇಶಗಳನ್ನ ಮರಳಿ ಪಡೆಯುವುದು ಹೇಗೆ ಅಂತ ನಿಮಗೆ ಹೇಳಿಕೊಡ್ತೀವಿ.

Written by - Krishna N K | Last Updated : Dec 29, 2022, 05:08 PM IST
  • ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದಿಷ್ಟು ಮಂದಿಯ ಚಾಟ್‌ಗಳು ಅಳಿಸಲಾರದಂತಿರುತ್ತವೆ.
  • ಅವುಗಳಲ್ಲಿ ಪ್ರೀತಿ, ಭಾವನೆ, ಭಾವುಕ ಬಂಧನಗಳ ಕೊಂಡಿ ಚಾಚಿಕೊಂಡಿರುತ್ತದೆ.
  • ಆದ್ರೆ ಅಪ್ಪಿ ತಪ್ಪಿ ಅವುಗಳನ್ನು ಡಿಲೀಟ್‌ ಮಾಡಿದ್ರೆ ಮರುಪಡೆಯಲು ಹೀಗೆ ಮಾಡಿ
 ನಿಮ್ಮ ಲವರ್‌ Instagram ಹಳೆಯ ಚಾಟ್‌ ಡಿಲೀಟ್‌ ಆಯ್ತಾ..? ಹೀಗೆ ಮಾಡಿ title=

Instagram char data : ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದಿಷ್ಟು ಮಂದಿಯ ಚಾಟ್‌ಗಳು ಅಳಿಸಲಾರದಂತಿರುತ್ತವೆ. ಅವುಗಳಲ್ಲಿ ಪ್ರೀತಿ, ಭಾವನೆ, ಭಾವುಕ ಬಂಧನಗಳ ಕೊಂಡಿ ಚಾಚಿಕೊಂಡಿರುತ್ತದೆ. ಆದ್ರೆ ಕೋಪದಲ್ಲಿ ಅಥವಾ ಯಾವುದೋ ಕಾರಣಕ್ಕೆ ಅವರ ಚಾಟ್‌ನ್ನು ಡಿಲೀಟ್‌ ಮಾಡಿ ನಂತರ ಅವುಗಳಿಗಾಗಿ ಪರದಾಡುತ್ತಿದ್ದರೆ ಡೋಂಟ್‌ ವರಿ, ಇಲ್ಲಿ ನಾವು ಹಳೆಯ ಸಂದೇಶಗಳನ್ನ ಮರಳಿ ಪಡೆಯುವುದು ಹೇಗೆ ಅಂತ ನಿಮಗೆ ಹೇಳಿಕೊಡ್ತೀವಿ.

ಇನ್‌ಸ್ಟಾಗ್ರಾಮ್‌ ಚಾಟ್‌ಗಳನ್ನು ಮರುಪಡೆಯಲು ಮಾರ್ಗವೇನು?

ನೀವು ಇನ್‌ಸ್ಟಾಗ್ರಾಮ್‌ ಚಾಟ್‌ಗಳನ್ನು ಮರಳಿ ಪಡೆಯಲು ಬಯಸಿದರೆ, ಇದಕ್ಕಾಗಿ ನೀವು ನೇರವಾಗಿ ಅಪ್ಲಿಕೇಶನ್‌ಗೆ ಹೋಗದೆ ಬ್ರೌಸರ್‌ನಿಂದ Instagram ಲಿಂಕ್ ಒಪನ್‌ ಮಾಡಬೇಕು. ನಂತರ ನೀವು ಅಳಿಸಿದ ಚಾಟ್‌ಗಳನ್ನು ಹಿಂಪಡೆಯಲು ಬಯಸುವ ಖಾತೆಯನ್ನು ಲಾಗಿನ್ ಮಾಡಿ. ಪ್ರೊಫೈಲ್‌ನಲ್ಲಿ ಪ್ರದರ್ಶನವಾದ ಬಳಿಕ ಸೆಟ್ಟಿಂಗ್ಸ್‌ಗೆ ಹೋಗಿ, ನಂತರ ಗೌಪ್ಯತೆ ಮತ್ತು ಭದ್ರತೆ ಆಯ್ಕೆ ಮಾಡಿಕೊಳ್ಳಬೇಕು.

ಒಮ್ಮೆ ನೀವು ಗೌಪ್ಯತೆ ಮತ್ತು ಭದ್ರತೆ  ಮೇಲೆ ಕ್ಲಿಕ್ ಮಾಡಿದರೆ, ಹಲವಾರು ಆಯ್ಕೆಗಳನ್ನು ಬರುತ್ತವೆ. ಅವುಗಳಲ್ಲಿ ನೀವು ಡೇಟಾ ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲೀಕ್‌ ಮಾಡಿ. ಒಮ್ಮೆ ನೀವು ಈ ಆಯ್ಕೆಯ ಮೇಲೆ ಕ್ಲೀಕ್‌ ಮಾಡಿದ ನಂತರ, ಡೇಟಾ ವಿನಂತಿ ಎಂಬ ಆಯ್ಕೆ ಕಾಣಿಸುತ್ತದೆ. ಆಗ ನೀವು ಡೇಟಾ ಫೈಲ್‌ಗಳನ್ನು ಸ್ವೀಕರಿಸಲು ಬಯಸುವ Gmail ID ಯನ್ನು ನಿರ್ದಿಷ್ಟಪಡಿಸಬೇಕು. ಅಲ್ಲದೆ, Instagram ಖಾತೆಯ ಪಾಸ್‌ವರ್ಡ್ ಅನ್ನು ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರ ಸಂಪೂರ್ಣ ಹಳೆಯ ಚಾಟಿಂಗ್‌ ಡೇಟಾ ನಿಮ್ಮ Gmail ID ಗೆ 14 ದಿನಗಳಲ್ಲಿ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News