Jio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ

Jio Recharge Plan: ದೇಶದ ಅತ್ಯಂತ ಶಕ್ತಿಶಾಲಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಹಲವು ಅಗ್ಗದ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್​ಗಳನ್ನು ಘೋಷಿಸಿದೆ. ಇದರಲ್ಲಿ ಕೇವಲ ಅನ್ಲಿಮಿಟೆಡ್ ಕಾಲ್ ಅಷ್ಟೇ ಅಲ್ಲದೆ, ಉಚಿತ ನೆಟ್‌ಫ್ಲಿಕ್ಸ್, ಜಿಯೋ ಟಿವಿ, ಜಿಯೋ ಸಿನಿಮಾದಂತಹ ಹಲವು ಪ್ರಯೋಜನಗಳನ್ನು ಪಡೆಯಬಹುದು. 

Written by - Yashaswini V | Last Updated : Aug 28, 2024, 12:55 PM IST
  • ಜಿಯೋದ ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ ಕೇವಲ ಅನ್ಲಿಮಿಟೆಡ್ ಕರೆ, ಡೇಟಾ ಸೌಲಭ್ಯಗಳಷ್ಟೇ ಅಲ್ಲದೆ, ಕೆಲವು ಒಟಿಟಿ ಪ್ಲಾಟ್ಫಾರ್ಮ್ ಗಳ ಉಚಿತ ಚಂದಾದಾರಿಕೆಯೂ ಲಭ್ಯವಿದೆ.
  • ಅಂತಹ ಯೋಜನೆಗಳು ಯಾವುವು, ಯಾವ ರಿಚಾರ್ಜ್ ಪ್ಲಾನ್​ನಲ್ಲಿ ಯಾವ ಪ್ರಯೋಜನ ಲಭ್ಯವಿದೆ ಎಂದು ತಿಳಿಯೋಣ...
Jio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ  title=

Jio Cheapest Recharge Plan: ಭಾರತದ ಟೆಲಿಕಾಂ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಮತ್ತೆ ಅದೇ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಜಿಯೋ ಬಳಕೆದಾರರಿಗಾಗಿ  ಆಗಾಗ್ಗೆ ಹಲವು ಜನಪ್ರಿಯ ಕೈಗೆಟುಕುವ ಯೋಜನೆಗಳನ್ನು ಪರಿಚಯಿಸುವ ರಿಲಯನ್ಸ್ ಜಿಯೋ ಇದೀಗ ಅಗ್ಗದ ದರಲ್ಲಿ ಮೂರು ತಿಂಗಳ ಯೋಜನೆಯನ್ನು ಬಿಡುಗಡೆ ಮಾಡಿದೆ. 

ಜಿಯೋದ ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ ಕೇವಲ ಅನ್ಲಿಮಿಟೆಡ್ ಕರೆ (Unlimited Call), ಡೇಟಾ ಸೌಲಭ್ಯಗಳಷ್ಟೇ ಅಲ್ಲದೆ, ಕೆಲವು ಒಟಿಟಿ ಪ್ಲಾಟ್ಫಾರ್ಮ್ ಗಳ ಉಚಿತ ಚಂದಾದಾರಿಕೆಯೂ ಲಭ್ಯವಿದೆ. ಅಂತಹ ಯೋಜನೆಗಳು ಯಾವುವು, ಯಾವ ರಿಚಾರ್ಜ್ ಪ್ಲಾನ್​ನಲ್ಲಿ ಯಾವ ಪ್ರಯೋಜನ ಲಭ್ಯವಿದೆ ಎಂದು ತಿಳಿಯೋಣ... 

ಜಿಯೋ ₹479 ರೀಚಾರ್ಜ್ ಪ್ಲಾನ್ (Jio ₹479 Recharge Plan): 
ಜಿಯೋದ ಮೂರು ತಿಂಗಳ ರಿಚಾರ್ಜ್ ಯೋಜನೆಗಳಲ್ಲಿ ಜಿಯೋ ₹479 ರೀಚಾರ್ಜ್ ಪ್ಲಾನ್ (Jio ₹479 Recharge Plan) ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿರುವ ಯೋಜನೆಯಾಗಿದೆ. 84 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ, 1000 ಉಚಿತ ಎಸ್‌ಎಮ್‌ಎಸ್ ಮತ್ತು ಒಟ್ಟು 6ಜಿಬಿ ಇಂಟರ್ನೆಟ್ ಲಭ್ಯವಿದೆ. ಇದಲ್ಲದೆ, ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಗೆ ಪ್ರವೇಶ ಉಚಿತವಾಗಿರುತ್ತದೆ.  

ಇದನ್ನೂ ಓದಿ- Jio, Airtel, Viಗೆ ಕಠಿಣ ಸ್ಪರ್ಧೆ ಒಡ್ಡಿದ BSNL: 150ದಿನಗಳ ಪ್ಲಾನ್ ಬೆಲೆ ₹400ಕ್ಕಿಂತಲೂ ಕಡಿಮೆ

ಜಿಯೋ ₹799 ರೀಚಾರ್ಜ್ ಯೋಜನೆ (Jio ₹799 Recharge Plan): 
ರಿಲಯನ್ಸ್ ಜಿಯೋದ ಮೂರು ತಿಂಗಳ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಜಿಯೋ ₹799 ರೀಚಾರ್ಜ್ ಪ್ಲಾನ್. ಒಟ್ಟು 84ದಿನಗಳ ಮಾನ್ಯತೆಯೊಂದಿಗೆ ಬರುವ ಈ ಪ್ಲಾನ್​ನಲ್ಲಿ ಜಿಯೋ ಬಳಕೆದಾರರು ಅನ್ಲಿಮಿಟೆಡ್ ಕರೆ, ಪ್ರತಿ ನಿತ್ಯ 1.5ಜಿಬಿ ಡೇಟಾ, ದಿನಕ್ಕೆ 100 ಫ್ರೀ ಎಸ್‌ಎಮ್‌ಎಸ್ ಜೊತೆಗೆ Jio TV, JioCinema ಮತ್ತು JioCloud ಸೌಲಭ್ಯವನ್ನು ಕೂಡ ಆನಂದಿಸಬಹುದು. 

ಜಿಯೋ ₹ 1,299 ಕಾಂಬೋ ಯೋಜನೆ (Jio ₹ 1,299 Combo Plan): 
ಜಿಯೋ 84 ದಿನಗಳ ಮತ್ತೊಂದು ಯೋಜನೆ ಎಂದರೆ ಜಿಯೋ ₹ 1,299 ಕಾಂಬೋ ಯೋಜನೆ. ಈ ಯೋಜನೆಯ ವಿಶೇಷತೆ ಏನೆಂದರೆ ಇದು ನೆಟ್‌ಫ್ಲಿಕ್ಸ್ (Netflix) (ಮೊಬೈಲ್) ಗೆ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ. ಬಳಕೆದಾರರು ಈ ಪ್ಲಾನ್ ರಿಚಾರ್ಜ್ ಮಾಡುವ ಮೂಲಕ  ನೆಟ್‌ಫ್ಲಿಕ್ಸ್‌ಗೆ ಉಚಿತ ಮೊಬೈಲ್ ಚಂದಾದಾರಿಕೆಯನ್ನು ಪಡೆಯಬಹುದು. ಇದರಲ್ಲಿ ಬಳಕೆದಾರರು 84 ದಿಂಗಳವರೆಗೆ ಅನಿಯಮಿತ ಕರೆ, ಪ್ರತಿದಿನ 2ಜಿಬಿ ಡೇಟಾ, ನಿತ್ಯ 100 ಉಚಿತ ಎಸ್‌ಎಮ್‌ಎಸ್ , ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಉಚಿತ ಪ್ರವೇಶವನ್ನು ಸಹ ಪಡೆಯುತ್ತಾರೆ.  ಒಂದೊಮ್ಮೆ ನೀವು 5ಜಿ ನೆಟ್‌ವರ್ಕ್  ಬಳಸುತ್ತಿದ್ದರೆ ಇದರಲ್ಲಿ 5ಜಿ ಡೇಟಾವನ್ನು ಕೂಡ ಆನಂದಿಸಬಹುದು. 

ಇದನ್ನೂ ಓದಿ- BSNL 4G: ಏರ್ಟೆಲ್, ಜಿಯೋಗೆ ಟಕ್ಕರ್, ₹ 150ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿ‌ಎಸ್‌ಎನ್‌ಎಲ್ ಜಬರ್ದಸ್ತ್ ಪ್ಲಾನ್!

ಅಂತಾರಾಷ್ಟ್ರೀಯ ರೋಮಿಂಗ್‌ಗಾಗಿ ಜಿಯೋ ರೀಚಾರ್ಜ್ ಪ್ಲಾನ್ (Jio Recharge Plan for International Roaming):
ಕೇವಲ ಎಸ್‌ಟಿ‌ಡಿ ಕರೆಗಳಿಗಾಗಿ ಮಾತ್ರವಲ್ಲದೆ, ಜಿಯೋ ಅಂತಾರಾಷ್ಟ್ರೀಯ ರೋಮಿಂಗ್‌ಗಾಗಿ ವಿಶೇಷ ರೋಮಿಂಗ್ ಪ್ಯಾಕ್‌ಗಳನ್ನು ಕೂಡ ಪರಿಚಯಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಕೆನಡಾ, ಥೈಲ್ಯಾಂಡ್ ಮತ್ತು ಸೌದಿ ಅರೇಬಿಯಾದಂತಹ ಗಮ್ಯಸ್ಥಾನಗಳಿಗೆ ಜಿಯೋ ದೇಶ-ನಿರ್ದಿಷ್ಟ ಪ್ಯಾಕ್‌ಗಳನ್ನು ಒದಗಿಸುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News