Jio, Airtel, Viಗೆ ಕಠಿಣ ಸ್ಪರ್ಧೆ ಒಡ್ಡಿದ ಬಿ‌ಎಸ್‌ಎನ್‌ಎಲ್: 150ದಿನಗಳ ಪ್ಲಾನ್ ಬೆಲೆ ₹400ಕ್ಕಿಂತಲೂ ಕಡಿಮೆ

BSNL Prepaid Plan: ಸರ್ಕಾರಿ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ 150 ದಿನಗಳ ವಿಶೇಷ ಯೋಜನೆಯನ್ನು ಘೋಷಿಸಿದೆ. ಪೂರ್ಣ ಐದು ತಿಂಗಳವರೆಗೆ ಸಿಗುವ ಈ ಯೋಜನೆಯಲ್ಲಿ ಹಲವು ಪಯೋಜನಗಳು ಲಭ್ಯವಿದೆ. 

Written by - Yashaswini V | Last Updated : Aug 28, 2024, 08:46 AM IST
  • ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಹಲವು ಆಕರ್ಷಕ ಕೊಡುಗೆಗಳನ್ನು ಪ್ರಾರಂಭಿಸಿದೆ.
  • ದೇಶಾದ್ಯಂತ 4ಜಿ ಸೇವೆ ಆರಂಭಿಸಿರುವ ಬಿ‌ಎಸ್‌ಎನ್‌ಎಲ್ ಇದಕ್ಕಾಗಿ 25,000 ಕ್ಕೂ ಹೆಚ್ಚು ಹೊಸ 4G ಟವರ್‌ಗಳನ್ನು ಸ್ಥಾಪಿಸಿದೆ.
  • ಇದಲ್ಲದೆ ಖಾಸಗಿ ಟೆಲಿಕಾಂ ಕಂಪನಿಗಳ ಸುಂಕ ಹೆಚ್ಚಳದಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುತ್ತಿದ್ದಾರೆ.
Jio, Airtel, Viಗೆ ಕಠಿಣ ಸ್ಪರ್ಧೆ ಒಡ್ಡಿದ ಬಿ‌ಎಸ್‌ಎನ್‌ಎಲ್:  150ದಿನಗಳ ಪ್ಲಾನ್ ಬೆಲೆ ₹400ಕ್ಕಿಂತಲೂ ಕಡಿಮೆ  title=

BSNL Prepaid Plan: ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್‌, ವಿಐಗೆ ಭಾರೀ ಟಕ್ಕರ್ ನೀಡಿರುವ ಸರ್ಕಾರಿ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯ ಜಬರ್ದಸ್ತ್ ಯೋಜನೆಯನ್ನು ಪ್ರಾರಂಭಿಸಿದೆ. ಐದು ತಿಂಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ರಿಚಾರ್ಜ್ ಪ್ಲಾನ್ ಬೆಲೆ 400 ರೂ. ಗಳಿಗಿಂತಲೂ ಕಡಿಮೆ ಎಂಬುದು ಗಮನಾರ್ಹ ವಿಷಯವಾಗಿದೆ. 

₹400ಕ್ಕಿಂತಲೂ ಕಡಿಮೆ ಬೆಲೆಯ ಬಿ‌ಎಸ್‌ಎನ್‌ಎಲ್  ಪ್ಲಾನ್ (BSNL plan for less than ₹400): 
150 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಬಿ‌ಎಸ್‌ಎನ್‌ಎಲ್ ನ ಈ ಯೋಜನೆಯ ಬೆಲೆ (BSNL Plan Price) ₹ 397. ಇದರಲ್ಲಿ 4ಜಿ ಡೇಟಾ ಮತ್ತು ಅನಿಯಮಿತ ಕರೆ  ಸೌಲಭ್ಯಗಳು ಲಭ್ಯವಿವೆ. ಜಿಯೋ (Jio) ಅಥವಾ ಏರ್‌ಟೆಲ್‌ನಿಂದ  (Airtel) ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುವವರಿಗೆ ಬಿ‌ಎಸ್‌ಎನ್‌ಎಲ್ ನ ಈ ಪ್ಲಾನ್ ತುಂಬಾ ಎಂದು ಸಾಬೀತುಪಡಿಸಲಿದೆ. 

ಇದನ್ನೂ ಓದಿ- Jio ಗ್ರಾಹಕರಿಗೆ ಕೃಷ್ಣಜನ್ಮಾಷ್ಟಮಿ ಗಿಫ್ಟ್: ಮೂರು ತಿಂಗಳ ಅಗ್ಗದ ಯೋಜನೆ ಪ್ರಕಟಿಸಿದ ಮುಕೇಶ್ ಅಂಬಾನಿ

ಸೆಕೆಂಡರಿ ಸಿಮ್ ಬಳಕೆದಾರರಿಗಾಗಿ ವಿನ್ಯಾಸ: 
ಲಭ್ಯವಿರುವ ಮಾಹಿತಿಯ ಪ್ರಕಾರ, ಬಿ‌ಎಸ್‌ಎನ್‌ಎಲ್ ₹ 397 ರಿಚಾರ್ಜ್ ಯೋಜನೆಯಲ್ಲಿ ವಿಶೇಷವಾಗಿ ಸೆಕೆಂಡರಿ ಸಿಮ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. 

ಇದನ್ನೂ ಓದಿ- ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮ

ಬಿ‌ಎಸ್‌ಎನ್‌ಎಲ್ ₹ 397 ರಿಚಾರ್ಜ್ ಯೋಜನೆಯ ಪ್ರಯೋಜನಗಳು (Benefits of BSNL ₹ 397 Recharge Plan): 
* ಮೊದಲ 30 ದಿನಗಳು ಎಂದರೆ ಮೊದಲ ಒಂದು ತಿಂಗಳು ಯಾವುದೇ ಸಂಖ್ಯೆಗೆ ಅನಿಯಮಿತ ಉಚಿತ ಕರೆ ಸೌಲಭ್ಯ. 
* ಆದಾಗ್ಯೂ, 150 ದಿನಗಳವರೆಗೆ ರಿಚಾರ್ಜ್ ಮಾಡದೆಯೂ ಇನ್ಕಮಿಂಗ್ ಕಾಲ್ ಉಚಿತವಾಗಿರುತ್ತದೆ. 
* ಬಿ‌ಎಸ್‌ಎನ್‌ಎಲ್ ನ ಈ ಯೋಜನೆಯಲ್ಲಿ ಮೊದಲ ತಿಂಗಳು ನಿತ್ಯ 2ಜಿಬಿ  4G ಡೇಟಾ ಲಭ್ಯವಿರುತ್ತದೆ. ಇನ್ನುಳಿದ 120 ದಿನಗಳವರೆಗೆ  40 kbps ವೇಗದಲ್ಲಿ ಅನಿಯಮಿತ ಡೇಟಾ ಲಭ್ಯವಾಗಲಿದೆ.  
* ಇದಲ್ಲದೆ, ಈ ಯೋಜನೆಯಲ್ಲಿ ಮೊದಲ 30 ದಿನಗಳಲ್ಲಿ  ಗ್ರಾಹಕರಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನವೂ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News