BSNL Network :ಕಳೆದ ತಿಂಗಳು ಭಾರತದಲ್ಲಿ,ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ರಿಚಾರ್ಜ್ ಪ್ಲಾನ್ ಗಳ ವೆಚ್ಚವನ್ನು ಗಣನೀಯವಾಗಿ ಏರಿಸಿತ್ತು.ಇದಾದ ನಂತರ ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ಪ್ಲಾನ್‌ಗಳಿಂದ ಬೇಸತ್ತಿರುವ ಏರ್‌ಟೆಲ್, ಜಿಯೋ ಮತ್ತು ವಿ ಗ್ರಾಹಕರು ಈಗ ಬಿಎಸ್‌ಎನ್‌ಎಲ್ ನತ್ತ ಮುಖ ಮಾಡಲು ಆರಂಭಿಸಿದ್ದಾರೆ.
ಅಗ್ಗದ ಮತ್ತು ಉತ್ತಮ ಪ್ಲಾನ್ ನೀಡುತ್ತಿರುವ BSNL:
ಸರ್ಕಾರಿ ಟೆಲಿಕಾಂ ಕಂಪನಿ ತನ್ನ ಪೋರ್ಟ್ಫೋಲಿಯೊದಲ್ಲಿ ಅನೇಕ ಅಗ್ಗದ ಯೋಜನೆಗಳನ್ನು ಪರಿಚಯಿಸುತ್ತಿದೆ.ಕಂಪನಿಯು ಅಗ್ಗದ ಯೋಜನೆಗಳನ್ನು ಜಾರಿಗೆ ತಂದರೂ ಎಲ್ಲಾ ಕಡೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಲಭ್ಯವಿಲ್ಲದ ಕಾರಣ ಜನ ಪೇಚಿಗೆ ಸಿಲುಕಬೇಕಾಗುತ್ತದೆ. ನೀವು ಕೂಡಾ Airtel, Jio, Vodafone Idea ಗ್ರಾಹಕರಾಗಿದ್ದು, ಅಲ್ಲಿನ ದುಬಾರಿ ಪ್ಲಾನ್ ಹೊರೆಯಿಂದಾಗಿ BSNL ಗೆ ಶಿಫ್ಟ್ ಆಗಬೇಕೆಂದಿದ್ದರೆ ಮೊದಲು ನಿಮ್ಮ ಏರಿಯಾದಲ್ಲಿ ನೆಟ್ವರ್ಕ್ ಕವರೇಜ್ ಹೇಗಿದೆ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ನೀವು ಇರುವ ಏರಿಯಾದಲ್ಲಿ BSNL ನೆಟ್ವರ್ಕ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಪರಿಶೀಲಿಸಿದ ನಂತರವೇ ಸಿಮ್ ಖರೀದಿ ಮಾಡುವುದು ಜಾಣತನ.
ಇದನ್ನೂ ಓದಿ : ರಾತ್ರಿ ಮೊಬೈಲ್ ನೋಡುತ್ತಲೇ ನಿದ್ದೆಗೆ ಜಾರುತ್ತೀರಾ ? ಹಾಗಿದ್ದರೆ ಈ ವಿಚಾರ ಕೂಡಾ ಗೊತ್ತಿರಲಿ
ನಿಮ್ಮ ಏರಿಯಾದಲ್ಲಿ BSNL ನೆಟ್‌ವರ್ಕ್ ಇದೆಯಾ ಎಂದು ಚೆಕ್ ಮಾಡುವುದು ಹೇಗೆ ? :
1. ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ nperf ವೆಬ್‌ಸೈಟ್ ತೆರೆಯಿರಿ.
2. ಇಲ್ಲಿ ನೀವು ಮ್ಯಾಪ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು .
3. ಈಗ ಮೇಲ್ಭಾಗದಲ್ಲಿರುವ ಆಯ್ಕೆಯಲ್ಲಿ ನಿಮ್ಮ ದೇಶ ಭಾರತವನ್ನು ಆಯ್ಕೆ ಮಾಡಬೇಕು.
4. ಇದರ ನಂತರ, ಕವರೇಜ್ ಅನ್ನು ನೋಡಲು ಬಯಸುವ ಮೊಬೈಲ್ ನೆಟ್‌ವರ್ಕ್ ಅನ್ನು ಆಯ್ಕೆ ಮಾಡಿ.
5. BSNL ವ್ಯಾಪ್ತಿಯನ್ನು ಪರಿಶೀಲಿಸಲು, BSNL ಅನ್ನು ಕ್ಲಿಕ್ ಮಾಡಬೇಕು.
6. ಈಗ ನೀವು ಕೆಳಭಾಗದಲ್ಲಿ 6 ಬಣ್ಣದ ಐಕಾನ್ ಕಾಣಿಸುತ್ತದೆ. ಗ್ರೇ ಐಕಾನ್ ನೆಟ್ವರ್ಕ್ ಇಲ್ಲ ಎನ್ನುವುದನ್ನು ಸೂಚಿಸುತ್ತದೆ.ನೀಲಿ ಐಕಾನ್ 2G ಯನ್ನು ಪ್ರತಿನಿಧಿಸುತ್ತದೆ, ಹಸಿರು ಐಕಾನ್ 3G ಯನ್ನು ಪ್ರತಿನಿಧಿಸುತ್ತದೆ, ಕಿತ್ತಳೆ ಐಕಾನ್ 4G ಅನ್ನು ಪ್ರತಿನಿಧಿಸುತ್ತದೆ, ಮರೂನ್ 4G+ ಮತ್ತು ನೇರಳೆ ಐಕಾನ್ 5G ಅನ್ನು ಪ್ರತಿನಿಧಿಸುತ್ತದೆ.
7. ಈಗ ದೇಶ ಮತ್ತು ನೆಟ್‌ವರ್ಕ್‌ನ ಕೆಳಗೆ ನೀವು ಇನ್ನೊಂದು ಸರ್ಚ್ ಬಾರ್ ಕಾಣಿಸುತ್ತದೆ.
8. ಈ ಸರ್ಚ್ ಬಾರ್‌ಗೆ ಹೋಗುವ ಮೂಲಕ, ನೀವು ನಿಮ್ಮ ನಗರ ಮತ್ತು ಪ್ರದೇಶದ ಹೆಸರನ್ನು ನಮೂದಿಸಬಹುದು. ಈ ಮೂಲಕ ನಿಮ್ಮ ಏರಿಯಾದಲ್ಲಿ BSNL ಕವರೇಜ್ ಹೇಗಿದೆ ಎಂಬುದನ್ನು ನೋಡಬಹುದು.
ಇದನ್ನೂ ಓದಿ : Jio, Airtel, Viಗೆ ಕಠಿಣ ಸ್ಪರ್ಧೆ ಒಡ್ಡಿದ ಬಿಎಸ್‌ಎನ್‌ಎಲ್: 150ದಿನಗಳ ಪ್ಲಾನ್ ಬೆಲೆ ₹400ಕ್ಕಿಂತಲೂ ಕಡಿಮೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.