ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದು ಸಂಪರ್ಕದಲ್ಲಿ ನೋಡಿ ಎರಡು ಟಿವಿ

Jio TV Plus plans: ಈ ಯೋಜನೆಯ ಅಡಿಯಲ್ಲಿ ಗ್ರಾಹಕರು 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳು ಮತ್ತು 13 ಒಟಿಟಿ ಅಪ್ಲಿಕೇಷನ್‌ಗಳ ಸೌಲಭ್ಯವನ್ನು ಪಡೆಯುತ್ತಾರೆ. ಈ ಸೇವೆಯು ಜಿಯೋ ಟಿವಿ ಪ್ಲಸ್ ಅಪ್ಲಿಕೇಷನ್ ಮೂಲಕ ಲಭ್ಯವಿದೆ.

Written by - Chetana Devarmani | Last Updated : Aug 21, 2024, 03:24 PM IST
    • ಜಿಯೋ ಟಿವಿ ಪ್ಲಸ್ ಟೂ ಇನ್ ಒನ್
    • ಒಂದೇ ಸಂಪರ್ಕದಿಂದ ಎರಡು ಟಿವಿ ನೋಡಿ
    • 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳು
ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದು ಸಂಪರ್ಕದಲ್ಲಿ ನೋಡಿ ಎರಡು ಟಿವಿ title=

ನವದೆಹಲಿ : ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಜಿಯೋ ಟಿವಿ ಪ್ಲಸ್ ಟೂ ಇನ್ ಒನ್ ಅನ್ನು ಪರಿಚಯಿಸಿದೆ. ಈ ಆಫರ್ ನಲ್ಲಿ  ಗ್ರಾಹಕರು ಈಗ ಒಂದೇ ಜಿಯೋ ಏರ್ ಫೈಬರ್ ಸಂಪರ್ಕದಿಂದ ಎರಡು ಟಿವಿಗಳನ್ನು ಒಂದೇ ಸಮಯದಲ್ಲಿ ನೋಡಬಹುದು/ಬಳಸಬಹುದು. ಈ ಯೋಜನೆಯ ಅಡಿಯಲ್ಲಿ ಗ್ರಾಹಕರು 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳು ಮತ್ತು 13 ಒಟಿಟಿ ಅಪ್ಲಿಕೇಷನ್‌ಗಳ ಸೌಲಭ್ಯವನ್ನು ಪಡೆಯುತ್ತಾರೆ. ಈ ಸೇವೆಯು ಜಿಯೋ ಟಿವಿ ಪ್ಲಸ್ ಅಪ್ಲಿಕೇಷನ್ ಮೂಲಕ ಲಭ್ಯವಿದೆ.

ಜಿಯೋ ಟಿವಿ ಪ್ಲಸ್ ಅಪ್ಲಿಕೇಷನ್ 10 ಭಾಷೆಗಳಲ್ಲಿ ಮತ್ತು 20 ವಿಭಾಗಗಳಲ್ಲಿ 800 ಡಿಜಿಟಲ್ ಟಿವಿ ಚಾನೆಲ್‌ಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಜತೆಗೆ ಬಳಕೆದಾರರು ಒಂದೇ ಲಾಗಿನ್‌ನಿಂದ 13 ಜನಪ್ರಿಯ ಒಟಿಟಿ ಅಪ್ಲಿಕೇಷನ್‌ಗಳನ್ನು ಬಳಸಬಹುದು. 

ಇದನ್ನೂ ಓದಿ: ರವಿ ಬಸ್ರೂರ್ ವಿಭಿನ್ನ ಪ್ರಯೋಗ..ಸಿನಿಮಾ ಜಗತ್ತಿನ ಹೊಸ ಸಾಹಸಕ್ಕೆ ಕೈ ಹಾಕಿದ ಮ್ಯೂಸಿಕ್ ಡೈರೆಕ್ಟರ್

ಜಿಯೋ ಟಿವಿ ಪ್ಲಸ್ ಅಪ್ಲಿಕೇಷನ್‌ನ ಪ್ರಮುಖ ವೈಶಿಷ್ಟ್ಯಗಳು ಏನೆಂದರೆ, ಒಂದೇ ಸೈನ್ -ಆನ್ ಆಯ್ಕೆ, ಸ್ಮಾರ್ಟ್ ಟಿವಿ ರಿಮೋಟ್ ಹೊಂದಾಣಿಕೆ ಮತ್ತು ವೈಯಕ್ತಿಕಗೊಳಿಸಿದ ಕಂಟೆಂಟ್ ಒಳಗೊಂಡಿದೆ. 

ಗ್ರಾಹಕರು ಸ್ಮಾರ್ಟ್ ಫಿಲ್ಟರ್‌ಗಳನ್ನು ಬಳಸಿಕೊಂಡು ಚಾನಲ್‌ಗಳನ್ನು ಸುಲಭವಾಗಿ ಹುಡುಕಬಹುದು, ಪ್ಲೇಬ್ಯಾಕ್ ವೇಗವನ್ನು ನಿಯಂತ್ರಿಸಬಹುದು ಮತ್ತು ಈ ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಈ ಸೇವೆಯು ಎಲ್ಲ ಜಿಯೋ ಏರ್ ಫೈಬರ್ ಯೋಜನೆಗಳಲ್ಲಿ ಲಭ್ಯವಿದೆ. ಆದರೆ ಜಿಯೋ ಫೈಬರ್ ಪೋಸ್ಟ್‌ಪೇಯ್ಡ್‌ನಲ್ಲಿ, ಇದು ರೂ 599, ರೂ 899 ಮತ್ತು ಹೆಚ್ಚಿನ ಮೊತ್ತದ ಯೋಜನೆಗಳಲ್ಲಿ ಲಭ್ಯವಿದೆ. ಜಿಯೋ ಫೈಬರ್ ಪ್ರಿಪೇಯ್ಡ್‌ನಲ್ಲಿ ಇದು ರೂ 999 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಗಳಲ್ಲಿ ಲಭ್ಯವಿದೆ.

ಜಿಯೋ ಟಿವಿ ಅಪ್ಲಿಕೇಷನ್‌ನಲ್ಲಿ ಲಭ್ಯವಿರುವ ಪ್ರಮುಖ ಚಾನೆಲ್‌ಗಳು ಮತ್ತು ಒಟಿಟಿ ಅಪ್ಲಿಕೇಶನ್‌ಗಳಲ್ಲಿ ಜನಪ್ರಿಯ ನೆಟ್‌ವರ್ಕ್‌ಗಳಾದ ಕಲರ್ಸ್ ಟಿವಿ, ಸ್ಟಾರ್ ಪ್ಲಸ್ ಮತ್ತು ಝೀ ಟಿವಿಯನ್ನು ಒಳಗೊಂಡಿವೆ. ಇದರೊಂದಿಗೆ ಡಿಸ್ನಿ ಪ್ಲಸ್, ಹಾಟ್‌ಸ್ಟಾರ್, ಸೋನಿ ಲಿವ್ ಮತ್ತು ಜೀ ಫೈವ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಹ ದೊರೆಯುತ್ತವೆ.

ಇದನ್ನೂ ಓದಿ: Ramachari Kannada Serial: ʼರಾಮಾಚಾರಿʼ ಸಿರೀಯಲ್‌ ರಿತ್ವಿಕ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ! ರಾಷ್ಟ್ರಪಶಸ್ತಿ ವಿಜೇತರೂ ಹೌದು!! ಯಾರು ಗೊತ್ತೇ?

ಈ ಯೋಜನೆಯ ಲಾಭವನ್ನು ನೀವು ಕೂಡ ಪಡೆಯುವುದಕ್ಕಾಗಿ ನಿಮ್ಮ ಸ್ಮಾರ್ಟ್ ಟಿವಿಯ ಆಪ್ ಸ್ಟೋರ್‌ನಿಂದ ಜಿಯೋ ಟಿವಿ ಪ್ಲಸ್ (Jio TV Plus) ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿ, ನಿಮ್ಮ ಜಿಯೋ ಫೈಬರ್ ಅಥವಾ ಜಿಯೋ ಏರ್ ಫೈಬರ್ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ ಮತ್ತು ದೊಡ್ಡ ಮಟ್ಟದ ಕಂಟೆಂಟ್ ಲೈಬ್ರರಿಯನ್ನು ತಕ್ಷಣವೇ ಆನಂದಿಸಲು ಪ್ರಾರಂಭಿಸಿ. ಈ ಆಫರ್‌ನೊಂದಿಗೆ, ಜಿಯೋ ಟಿವಿ ವೇಗವಾಗಿ ಬೆಳೆಯುತ್ತಿರುವ ಭಾರತದ ಅತಿದೊಡ್ಡ ಕಂಟೆಂಟ್ ಅಗ್ರಿಗೇಟರ್ ಪ್ಲಾಟ್‌ಫಾರ್ಮ್ ಆಗುತ್ತಿದೆ, ಯಾವುದೇ ಹೆಚ್ಚುವರಿ ಶುಲ್ಕಗಳು ಅಥವಾ ಸಂಪರ್ಕವಿಲ್ಲದೆ ಬಹು ಪ್ಲಾಟ್‌ಫಾರ್ಮ್‌ಗಳಲ್ಲಿ ಮನರಂಜನೆಗೆ ಯಾವುದೇ ಅಡೆತಡೆ ಇಲ್ಲದ ಸಂಪರ್ಕವನ್ನು ಒದಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News