Largest Comet Ever Towards Earth: ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಖಗೋಳಶಾಸ್ತ್ರಜ್ಞರು ಇದುವರೆಗೆ ನೋಡಿದ ಅತಿದೊಡ್ಡ ಹಿಮಧೂಮಕೇತುವಿನ ಕುರಿತು ಮಾಹಿತಿ ಬಹಿರಂಗಪಡಿಸಿದೆ. ಈ ವಿಶೇಷ ಧೂಮಕೇತು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವುದು ಕಂಡುಬಂದಿದೆ. ಇದರ ದ್ರವ್ಯರಾಶಿ (ಬಾಹ್ಯಾಕಾಶದಲ್ಲಿನ ತೂಕ) 500 ಟ್ರಿಲಿಯನ್ ಟನ್. ಇದು ಸಾಮಾನ್ಯವಾಗಿ ಕಂಡುಬರುವ ಕಾಮೆಟ್ ದ್ರವ್ಯರಾಶಿಗಿಂತ ಸುಮಾರು ಒಂದು ಮಿಲಿಯನ್ ಪಟ್ಟು ಹೆಚ್ಚಾಗಿದೆ.
ತುಂಬಾ ವಿಶಾಳಕಾಯದ ಧೂಮಕೇತು ಇದಾಗಿದೆ
ಈ ಧೂಮಕೇತುವಿನ ಅಂದಾಜು ವ್ಯಾಸವು 80 ಮೈಲುಗಳಿಗಿಂತ ಹೆಚ್ಚು ಇರಬಹುದು ಎಂದು ನಾಸಾ ಬಹಿರಂಗಪಡಿಸಿದೆ. ಇದರರ್ಥ ಇದು US ರಾಜ್ಯವಾದ ರೋಡ್ ಐಲೆಂಡ್‌ಗಿಂತ ದೊಡ್ಡದಾಗಿದೆ. ಇದುವರೆಗೆ ತಿಳಿದಿರುವ ಎಲ್ಲಾ ಧೂಮಕೇತುಗಳಿಗಿಂತ ಇದು ಸುಮಾರು 50 ಪಟ್ಟು ದೊಡ್ಡದಾಗಿದೆ ಎಂದು ನಾಸಾ ಹೇಳಿದೆ.
ಇದನ್ನೂ ಓದಿ-Amazon Smartphone Sale: 75 ಸಾವಿರ ಬೆಲೆಯ Samsung 5G ಸ್ಮಾರ್ಟ್ಫೋನ್ ಮೇಲೆ 53 ಸಾವಿರ ರೂ.ಗಳ ರಿಯಾಯಿತಿ!
ತುಂಬಾ ವೇಗವಾಗಿ ಭೂಮಿಯತ್ತ ಧಾವಿಸುತ್ತಿದೆ
C/2014 UN271 'Bernardinelli-Bernstein' ಹೆಸರಿನ ಈ ಧೂಮಕೇತು 22,000 mph (35,200 kmph) ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಎಂದು US ಮೂಲದ ಬಾಹ್ಯಾಕಾಶ ಸಂಸ್ಥೆ NASA ಬಹಿರಂಗಪಡಿಸಿದೆ. ಆದರೆ, ಭೂಮಿಯ ಸಮೀಪಕ್ಕೆ ಬರದ ಕಾರಣ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು ಒಂದು ಚಿಕ್ಕ ಟಿಪ್ಪಣಿ ಬರೆದುಕೊಂಡಿರುವ ನಾಸಾ, 'ಸೂರ್ಯನಿಂದ 1 ಬಿಲಿಯನ್ ಮೈಲಿ ದೂರದಲ್ಲಿ ಬರುವವರೆಗೆ ಇದು ಮತ್ತೆ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ' ಎಂದು ಹೇಳಿದೆ, ಇದು ಶನಿಯಿಂದ ಸ್ವಲ್ಪ ದೂರದಲ್ಲಿ ಇರುವಾಗ ಕೊನೆಗೊಳ್ಳಬಹುದು. ಯಾವುದೇ ಸಂದರ್ಭದಲ್ಲಿ, ಇದು 2031 ರವರೆಗೆ ಉಳಿಯುವುದಿಲ್ಲ ಎಂದು ನಾಸಾ ಹೇಳಿದೆ.
ಇದನ್ನೂ ಓದಿ-InspectIR: ಈ ಡಿವೈಸ್ ಮೂಲಕ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೊರೊನಾ ಟೆಸ್ಟ್ ನಡೆಸಿ
ಈ ಧೂಮಕೇತು ಮಂಜುಗಡ್ಡೆಯ ತಲೆಯನ್ನು ಹೊಂದಿದೆ
"ಸೌರವ್ಯೂಹದ ದೂರದ ಭಾಗಗಳಲ್ಲಿ ಅಪರೂಪವಾಗಿ ಕಂಡುಬರುವ ಸಾವಿರಾರು ಧೂಮಕೇತುಗಳಿಗೆ ಈ ಧೂಮಕೇತು ಅಕ್ಷರಶಃ ಮಂಜುಗಡ್ಡೆಯ ತಲೆಯಾಗಿದೆ" ಎಂದು ನಾಸಾ ಹೇಳಿದೆ ಎಂದು ಡೇವಿಡ್ ಜ್ವಿಟ್ ಹೇಳಿದ್ದಾರೆಂದು . ಡೇವಿಡ್ ಜ್ವಿಟ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ (UCLA) ನಲ್ಲಿ ಗ್ರಹಗಳ ವಿಜ್ಞಾನ ಮತ್ತು ಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಅವರು ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್‌ನಲ್ಲಿ ಹೊಸ ಅಧ್ಯಯನದ ಸಹ-ಲೇಖಕಕರೂ ಕೂಡ ಆಗಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.