ಬ್ರಹ್ಮಾಂಡದಲ್ಲಿ ಸೂರ್ಯನಿಗೂ ಬೆಳಕನ್ನು ನೀಡುವ ಅತ್ಯಂತ ಸೂಕ್ಷ್ಮ ಕಣವಿದೆ ಎಂಬುದು ನಿಮಗೆ ತಿಳಿದಿದೆಯಾ?

Particles That Makes Our Sun Shine - ಅಮೆರಿಕಾ (America) ಚಿಕಾಗೋ (Chicago) ಬಳಿಯ ಇಲಿನಾಯ್ಸ್ ಪ್ರಾಂತ್ಯದಲ್ಲಿ (Ilians Provience) ಪ್ರಯೋಗ ಶಾಲೆಯೊಂದಿದೆ. ಇದನ್ನು ಫರ್ಮಿ ನ್ಯಾಷನಲ್ ಆಕ್ಸಿಲರೇಟರ್ ಲ್ಯಾಬೊರೇಟರಿ (Fermi National Acceletor Laboratory) ಎಂದು ಕರೆಯಲಾಗುತ್ತದೆ. ಸಂಕ್ಷಿಪ್ತವಾಗಿ, ಫರ್ಮಿಲಾಬ್, ಇಲ್ಲಿ ವಿಶ್ವದ ಅನೇಕ ದೇಶಗಳ ವಿಜ್ಞಾನಿಗಳು ಬ್ರಹ್ಮಾಂಡದ (Universe) ಹೆಚ್ಚಿನ ಶಕ್ತಿಯ ಕಣಗಳ ಕುರಿತು ಅಧ್ಯಯನ ನಡೆಸುತ್ತಾರೆ. ಈ ಅಧ್ಯಯನದ ಸಮಯದಲ್ಲಿ, ಸೂರ್ಯನ ಬೆಳಕಿಗೆ ಕಾರಣವಾದ ಆ ಅಲ್ಟ್ರಾ-ಫೈನ್ ಕಣವನ್ನು ಪತ್ತೆಹಚ್ಚಲಾಗಿದೆ.  

Written by - Nitin Tabib | Last Updated : Apr 8, 2022, 07:50 PM IST
  • ಸೂರ್ಯ ಇಡೀ ಸೃಷ್ಟಿಯನ್ನೇ ಬೆಳಗುತ್ತಾನೆ
  • ಆದರೆ ಈ ಕಣ ಸೂರ್ಯಾನನ್ನು ಬೆಳಗುತ್ತದೆ.
  • ಯಾವುದು ಆ ಕಣ? ಇಲ್ಲಿದೆ ಹೊಸ ಆವಿಷ್ಕಾರ
ಬ್ರಹ್ಮಾಂಡದಲ್ಲಿ ಸೂರ್ಯನಿಗೂ ಬೆಳಕನ್ನು ನೀಡುವ ಅತ್ಯಂತ ಸೂಕ್ಷ್ಮ ಕಣವಿದೆ ಎಂಬುದು ನಿಮಗೆ ತಿಳಿದಿದೆಯಾ? title=
Particles That Makes Our Sun Shine

ನವದೆಹಲಿ: ಸೂರ್ಯನು (Sun) ಇಡೀ ಸೃಸ್ಥಿಯನ್ನೇ ಬೆಳಗುತ್ತಾನೆ. ಇದುವರೆಗೆ ಎಲ್ಲಾ ಜನರು ಇದನ್ನೇ ನಿಜ ಎಂದು ನಂಬಿದ್ದಾರೆ ಮತ್ತು ಈ ಕುರಿತು ಓದಿದ್ದಾರೆ. ಆದರೆ, ಇದೀಗ ಈ ಕುರಿತು ಹೊಸ ವೈಜ್ಞಾನಿಕ ಆವಿಷ್ಕಾರ ನಡೆದಿದ್ದು, ಇದರಲ್ಲಿ ಅತ್ಯಂತ ಸೂಕ್ಷ್ಮವಾದ ಕಣ ಪತ್ತೆಯಾಗಿದ್ದು, ಇದು ಸೂರ್ಯನಿಗೂ ಸಹ ಬೆಳಕು ನೀಡುತ್ತದೆ ಎನ್ನಲಾಗಿದೆ. ಇದನ್ನು ಕೇಳಿ ನಿಮಗೂ ಕೂಡ ಆಶ್ಚರ್ಯವಾದೀತು. ಆದರೆ ವಿಜ್ಞಾನಿಗಳ ಪ್ರಕಾರ, ಇದರಲ್ಲಿ ಆಶ್ಚರ್ಯಪಡುವ ಯಾವುದೇ ಸಂಗತಿ ಇಲ್ಲ ಎನ್ನಲಾಗುತ್ತದೆ. ಏಕೆಂದರೆ ಈ ಕಣವು ಅನಾದಿ ಕಾಲದಿಂದಲೂ ಬ್ರಹ್ಮಾಂಡದಲ್ಲಿಯೇ (Universe) ಇದೆ. ಆದರೆ, ಇತ್ತೀಚೆಗಷ್ಟೇ ಅದು ಪತ್ತೆಯಾಗಿದೆ ಮತ್ತು ಈಗ ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಉದಾಹರಣೆಗೆ, ಅದರ ತೂಕ, ಗಾತ್ರ, ನೋಟ ಇತ್ಯಾದಿ. ಚಿಕಾಗೋ ಸಮೀಪದ ಇಲಿನಾಯ್ಸ್ ಪ್ರಾಂತ್ಯದಲ್ಲಿ ಪ್ರಯೋಗಶಾಲೆಯೊಂದಿದ್ದು. ಇದನ್ನು ಫರ್ಮಿ ನ್ಯಾಷನಲ್ ಆಕ್ಸಿಲರೇಟರ್ ಲ್ಯಾಬೊರೇಟರಿ ಎಂದು ಕರೆಯಲಾಗುತ್ತದೆ. ಸಂಕ್ಷಿಪ್ತವಾಗಿ, ಫರ್ಮಿಲಾಬ್, ವಿಶ್ವದ ಅನೇಕ ದೇಶಗಳ ವಿಜ್ಞಾನಿಗಳು ಬ್ರಹ್ಮಾಂಡದ ಹೆಚ್ಚಿನ ಶಕ್ತಿಯ ಕಣಗಳ ಕುರಿತು ಇಲ್ಲಿ ಅಧ್ಯಯನ ಮಾಡುತ್ತಾರೆ.

ಈ ಅಧ್ಯಯನದ ಸಮಯದಲ್ಲಿ, ಸೂರ್ಯನ ಬೆಳಕಿಗೆ ಕಾರಣವಾದ ಅಲ್ಟ್ರಾ-ಫೈನ್ ಕಣವನ್ನು ಪತ್ತೆಹಚ್ಚಲಾಗಿದೆ. ಅದಕ್ಕೆ 'WBoson' ಎಂದು ಹೆಸರಿಡಲಾಗಿದೆ. ಇದು ಪರಮಾಣುವಿನ ಮಧ್ಯಭಾಗದಲ್ಲಿದೆ. ಇದು ಆದರೆ ಮೂಲಭೂತ ಶಕ್ತಿಯ ಮೂಲವೂ ಆಗಿದೆ. ಒಂದು ಪರಮಾಣುವಿನ ಮಧ್ಯಭಾಗದ ಸೆಕೆಂಡಿನ ನೂರನೇ-ಸಾವಿರ  ಭಾಗದಲ್ಲಿ wboson ಕಾಣಿಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಅಸ್ತಿತ್ವಕ್ಕೆ ಬಂದ ವೇಗದಲ್ಲಿಯೇ ವಿಭಜನೆಯಾಗುತ್ತದೆ. ಈ ರೀತಿಯಾಗಿ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿಯುತ್ತದೆ. Wboson ನ ಈ ಪರಮಾಣು ಪ್ರಕ್ರಿಯೆಯು ಸೂರ್ಯನಿಗೆ ಬೆಳಕನ್ನು ನೀಡುತ್ತದೆ ಮತ್ತು ನಂತರ ಇಡೀ ವಿಶ್ವವು ಇದರಿಂದ ಪ್ರಕಾಶಿಸಲ್ಪಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-Big Wonder - ಗಾಳಿಯಿಂದ ವಜ್ರ ತಯಾರಿಸಿದ ಕಂಪನಿ ! ಸುದ್ದಿ ಓದಿ... ನೀವೂ ನಿಬ್ಬೇರಗಾಗುವಿರಿ

Wbosonsಗಳಿಗೆ ಪ್ರೋಟಾನ್‌ಗಳಿಗಿಂತ 80 ಪಟ್ಟು ಹೆಚ್ಚು ತೂಕವಿರುತ್ತದೆ
ಪ್ರಪಂಚದ ಎಲ್ಲಾ ವಿಜ್ಞಾನಿಗಳು 1985 ಮತ್ತು 2011 ರ ನಡುವೆ WBoson ಸುತ್ತಲಿನ ಎಲ್ಲಾ ಮಾಹಿತಿ ಹಾಗೂ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ನಂತರ ನಿಧಾನವಾಗಿ ಇಡೀ ವಿಶ್ವಕ್ಕೆ ಅದರ ಬಗ್ಗೆ ಮಾಹಿತಿ ನೀಡಲಾಗಿದೆ. ನಂತರ ಪ್ರಯೋಗಾಲಯದಲ್ಲಿ ಸುಮಾರು 10 ಬಾರಿಗೆ 4 ಮಿಲಿಯನ್ wbosons ಶಕ್ತಿ ಕಣಗಳನ್ನು ಪರಸ್ಪರ ಡಿಕ್ಕಿ ಹೊಡೆಸುವ ಮೂಲಕ ಅವುಗಳ ಕುರಿತು ಅಧ್ಯಯನ ನಡೆಸಲಾಗಿದೆ. ಈ ಪ್ರಯೋಗದಲ್ಲಿ ಅದರ ತೂಕ ಇತ್ಯಾದಿಗಳನ್ನು ಪರೀಕ್ಷಿಸಲಾಗಿದೆ. ಕೊನೆಯಲ್ಲಿ ಫಲಿತಾಂಶಗಳು ಬಂದಾಗ, ವಿಜ್ಞಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅವುಗಳಲ್ಲಿ ಒಂದು wboson ಪ್ರೋಟಾನ್‌ಗಿಂತ 80 ಪಟ್ಟು ಹೆಚ್ಚು ತೂಕವಿರುತ್ತದೆ ಎಂಬುದು ಕಂಡುಬಂದಿದೆ.

ಇದನ್ನೂ ಓದಿ-Bizarre News: ಈ ಯುವತಿಗೆ ತನ್ನ ಪರ್ಸನಲ್ Photo ಕಳುಹಿಸುತ್ತವೆಯಂತೆ ಎಲಿಯನ್ ಗಳು!

ಪರಿಣಾಮಗಳು ಇನ್ನೂ ನಿಖರವಾಗಿಲ್ಲ, ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ನ್ಯೂಕ್ಲಿಯರ್ ಫಿಸಿಕ್ಸ್‌ನ (National Institute For Nuclear Physics) ಸಹ-ವಕ್ತಾರ ಜಾರ್ಜಿಯೊ ಚಾರೆಲ್ಲಿ ಹೇಳುವ ಪ್ರಕಾರ, 'ಇಷ್ಟು ಸುದೀರ್ಘ ಅಧ್ಯಯನದ ಹೊರತಾಗಿಯೂ, ಸಂಶೋಧನೆಗಳ ನಿಖರತೆ ಇನ್ನೂ ಶೇ.0.01% ರಷ್ಟಿದೆ. ಈ ಕಣಗಳನ್ನು ಅಳೆಯುವುದು, ತೂಕ ಮಾಡುವುದು ತುಂಬಾ ಸವಾಲಿನ ಕೆಲಸವಾಗಿದೆ.ಏಕೆಂದರೆ ಇವು 1 ಸೆಕೆಂಡ್ ಕೂಡ ನಿಲ್ಲುವುದಿಲ್ಲ. ಹೀಗಾಗಿ ವಿಜ್ಞಾನಿಗಳು ನಿಖರವಾದ ತೀರ್ಮಾನಗಳನ್ನು ತಲುಪಲು ಹಲವು ವರ್ಷಗಳೇ ಬೇಕಾಗಲಿವೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಿಖರವಾಗಿ ಏನನ್ನೂ ಕೂಡ  ಹೇಳುವುದು ತುಂಬಾ ಮುಂಚಿತವಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News