ಇನ್ನು WhatsAppನಲ್ಲೂ ಸಿಗುವುದು Blue Tick : ಪಡೆದುಕೊಳ್ಳುವ ಪ್ರಕ್ರಿಯೆ ಹೀಗಿರಲಿದೆ

WhatsApp Blue Tick : WhatsApp ಕುರಿತು ಮಾಹಿತಿ ನೀಡುವಲ್ಲಿ ಸಾಕಷ್ಟು ವಿಶ್ವಾಸಾರ್ಹವಾಗಿರುವ WhatsAppinfo ಹೆಸರಿನ ವೆಬ್‌ಸೈಟ್ ಈ ಸುದ್ದಿಯನ್ನು ನೀಡಿದೆ. ಮುಂಬರುವ ಅಪ್ಡೇಟ್ ನೊಂದಿಗೆ WhatsAppನಲ್ಲಿ ಹೊಸ ವೈಶಿಷ್ಟ್ಯವು ಬರಲಿದೆ ಎನ್ನಲಾಗಿದೆ.

Written by - Ranjitha R K | Last Updated : Jan 12, 2024, 11:45 AM IST
  • ಈಗ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತೆ ವಾಟ್ಸಾಪ್ ಕೂಡ ಬ್ಲೂ ಟಿಕ್ ಪಡೆಯಲಿದೆ
  • ಯಾರು ನೀಲಿ ಟಿಕ್ ಪಡೆಯಬಹುದು
  • ನೀಲಿ ಟಿಕ್ ಅನ್ನು ಹೇಗೆ ಪಡೆಯುವುದು?
ಇನ್ನು WhatsAppನಲ್ಲೂ ಸಿಗುವುದು Blue Tick : ಪಡೆದುಕೊಳ್ಳುವ ಪ್ರಕ್ರಿಯೆ ಹೀಗಿರಲಿದೆ title=

WhatsApp  Blue Tick : ಈಗ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತೆ ವಾಟ್ಸಾಪ್ ಕೂಡ ಬ್ಲೂ ಟಿಕ್ ಪಡೆಯಲಿದೆ. ವಾಟ್ಸಾಪ್ ನಲ್ಲಿ ಗೋಚರಿಸುವ ಈ ಗುರುತು ನೀವು ಮಾತನಾಡುತ್ತಿರುವ ಖಾತೆಯು ಅಸಲಿ ಎನ್ನುವುದನ್ನು ಸೂಚಿಸುತ್ತದೆ. ಆದರೆ ಎಲ್ಲರಿಗೂ ಈ ನೀಲಿ ಟಿಕ್ (WhatsApp  Blue Tick) ಸಿಗುವುದಿಲ್ಲ.ಇದು WhatsApp ನ  ಬಿಸಿನೆಸ್ ಖಾತೆಗಳಿಗೆ ಮಾತ್ರ  ಲಭ್ಯವಿರುತ್ತದೆ. ಅಂದರೆ, ವಾಟ್ಸಾಪ್‌ನಲ್ಲಿ ಅಂಗಡಿ ಅಥವಾ ಕಂಪನಿಯೊಂದಿಗೆ ಮಾತನಾಡುತ್ತಿದ್ದರೆ, ಅವರು ಬ್ಲೂ ಟಿಕ್ ಹೊಂದಿರಬಹುದು.

ಯಾರು ನೀಲಿ ಟಿಕ್ ಪಡೆಯಬಹುದು :
WhatsApp ಕುರಿತು ಮಾಹಿತಿ ನೀಡುವಲ್ಲಿ ಸಾಕಷ್ಟು ವಿಶ್ವಾಸಾರ್ಹವಾಗಿರುವ WhatsAppinfo ಹೆಸರಿನ ವೆಬ್‌ಸೈಟ್ ಈ ಸುದ್ದಿಯನ್ನು ನೀಡಿದೆ.ಮುಂಬರುವ  ಅಪ್ಡೇಟ್ ನೊಂದಿಗೆ  WhatsApp ನಲ್ಲಿ ಹೊಸ ವೈಶಿಷ್ಟ್ಯವು ಬರಲಿದೆ ಎನ್ನಲಾಗಿದೆ. ಆದರೆ ಕೆಲವು ಬಿಸಿನೆಸ್ ಖಾತೆಗಳಿಗೆ ಮಾತ್ರ ಈ ನೀಲಿ ಟಿಕ್ ಪಡೆಯಲು ಸಾಧ್ಯವಾಗುತ್ತದೆ ಎಂದು ಕೂಡಾ ಹೇಳಲಾಗಿದೆ. ಈ ಅಪ್ಡೇಟ್ ಬಂದಾಗ, ನಿಮ್ಮ WhatsApp  ಬಿಸಿನೆಸ್ ಖಾತೆಯ ಸೆಟ್ಟಿಂಗ್‌ಗಳಲ್ಲಿ  ನಿಮಗೆ ಈ ಹೊಸ ಆಯ್ಕೆ ಕಾಣಿಸುತ್ತದೆ. ಅದರ ಮೂಲಕ ನಿಮ್ಮ ಖಾತೆಯನ್ನು ಪರಿಶೀಲಿಸುವುದು ಸಾಧ್ಯವಾಗುತ್ತದೆ.

ಇದನ್ನೂ ಓದಿ : CES 2024: ವರ್ಷದ ಅತಿದೊಡ್ಡ ಟೆಕ್ ಶೋನಲ್ಲಿ ಬಿಡುಗಡೆಯಾಗಲಿವೆ ಈ ಅದ್ಭುತ ಗ್ಯಾಜೆಟ್‌ಗಳು

ಪರಿಶೀಲನೆ ಪ್ರಕ್ರಿಯೆ ಏನು? :
X (ಹಿಂದಿನ Twitter) ನಂತೆ, WhatsApp  ಬಿಸಿನೆಸ್ ಖಾತೆಗಳು ನೀಲಿ ಟಿಕ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಳ್ಳಬೇಕಾದರೆ ಇದರಲ್ಲಿ ಸ್ವಲ್ಪ ಹಣವನ್ನು ಪಾವತಿಸಬೇಕಾಗಬಹುದು.ಆದರೆ ಇದಕ್ಕೆ ಎಷ್ಟು ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ಇನ್ನು ಕೂಡಾ ಖಚಿತವಾಗಿಲ್ಲ. 

ನೀಲಿ ಟಿಕ್ ಅನ್ನು ಹೇಗೆ ಪಡೆಯುವುದು?:
WhatsApp ನಲ್ಲಿ ನೀಲಿ ಟಿಕ್ ಪಡೆಯಲು, ಮೊದಲನೆಯದಾಗಿ ನೀವು  ಬಿಸಿನೆಸ್ ಖಾತೆಯನ್ನು ಹೊಂದಿರಬೇಕು. ಇದು ಐಚ್ಛಿಕವಾಗಿದ್ದರೂ, ಪರಿಶೀಲನೆಯು ನಿಮ್ಮ ಖಾತೆಯನ್ನು ಹೆಚ್ಚು ನಂಬಲರ್ಹ ಮತ್ತು ನೈಜವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ. ಗಮನಿಸಬೇಕಾದ ವಿಷಯವೆಂದರೆ ನೀವು ಪರಿಶೀಲನೆಯ ಹೊರತಾಗಿಯೂ WhatsApp ವ್ಯಾಪಾರ ಖಾತೆಯನ್ನು ಬಳಸಬಹುದು. WhatsApp ವ್ಯಾಪಾರ ಖಾತೆಗಳ ಮೂಲಕ, ಕಂಪನಿಗಳು ಉತ್ತಮ ಮತ್ತು ಹೆಚ್ಚು ಸುರಕ್ಷಿತ ಅನುಭವವನ್ನು ಒದಗಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : Smartphone Tips: ನಿಮ್ಮ ಫೋನ್‌ನ್ನುಬೇರೆ ಚಾರ್ಜರ್‌ನಿಂದ ಚಾರ್ಜ್ ಮಾಡ್ತೀರಾ? ಇದರಿಂದ ಭಾರೀ ನಷ್ಟ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News