Twitter Appoints Interim Chief Compliance Officer: ಕೊನೆಗೂ ಒತ್ತಡಕ್ಕೆ ಮಣಿದ Twitterನಿಂದ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯ ನೇಮಕ

Twitter Appoints Interim Chief Compliance Officer: ಭಾರತದಲ್ಲಿ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ Twitter ಹೇಳಿದ್ದು, ಶೀಘ್ರದಲ್ಲಿಯೇ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜೊತೆಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.

Written by - Nitin Tabib | Last Updated : Jun 15, 2021, 10:28 PM IST
  • ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದ Twitter.
  • ಭಾರತದಲ್ಲಿ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯ ನೇಮಕ.
  • ಶೀಘ್ರದಲ್ಲಿಯೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಜೊತೆಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದ ವಕ್ತಾರರು.
Twitter Appoints Interim Chief Compliance Officer: ಕೊನೆಗೂ ಒತ್ತಡಕ್ಕೆ ಮಣಿದ Twitterನಿಂದ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯ ನೇಮಕ title=
Twitter Appoints Interim Chief Compliance Officer (File Photo)

ನವದೆಹಲಿ: Twitter Appoints Interim Chief Compliance Officer - ಭಾರತದಲ್ಲಿ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ Twitter ಹೇಳಿದ್ದು, ಶೀಘ್ರದಲ್ಲಿಯೇ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜೊತೆಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಟ್ವಿಟ್ಟರ್ ವಕ್ತಾರರು, ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪ್ರತಿ ಹಂತದಲ್ಲೂ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Latest Twitter News Today - ಕಳೆದ ಕೆಲವು ತಿಂಗಳುಗಳಿಂದ ಟ್ವಿಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ಹಲವು ವಿಷಯಗಳ ಬಗ್ಗೆ ಸಂಘರ್ಷ ಏರ್ಪಟ್ಟಿದೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸುವಂತೆ ಕೋರಿ ಟ್ವಿಟರ್‌ಗೆ "ಕೊನೆಯ ನೋಟೀಸ್" ನೀಡಿತ್ತು.

Latest Twitter Update - ಈ ವಿವಾದಗಳ ನಡುವೆಯೇ, ಕಾಂಗ್ರೆಸ್ ಮುಖಂಡ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯು ಮೈಕ್ರೋ ಬ್ಲಾಗಿಂಗ್ ಸೈಟ್‌ನ ಉನ್ನತ ಅಧಿಕಾರಿಗಳನ್ನು ಕರೆದು ತಮ್ಮ ಹೇಳಿಕೆಗಳನ್ನು ದಾಖಲಿಸಲು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯ ದುರುಪಯೋಗವನ್ನು ತಡೆಗಟ್ಟುವ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಹೇಳಿತ್ತು.

Latest Twitter News - ಸಂಸತ್ತಿನ ಮಾಹಿತಿ ಮತ್ತು ತಂತ್ರಜ್ಞಾನದ ಸ್ಥಾಯಿ ಸಮಿತಿಯು ಸಾಮಾಜಿಕ ಮಾಧ್ಯಮ ವೇದಿಕೆಗಳ ದುರುಪಯೋಗ ಮತ್ತು ನಾಗರಿಕ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ನಿಲುವನ್ನು ಮಂಡಿಸಲು ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ರಂಗದ ದೈತ್ಯ ಕಂಪನಿಗಳಿಗೆ ಕರೆ ನೀಡಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-WhatsApp Upcoming Features: ಬಳಕೆದಾರರ ಚಾಟಿಂಗ್ ಅನುಭವ ಬದಲಿಸಲು ಮುಂದಾದ WhatsApp? ಬಳಕೆದಾರರಿಗೇನು ಲಾಭ?

ಹೊಸ ನಿಯಮಗಳು (New IT Rules In India)
ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಕೇಂದ್ರ ಸರ್ಕಾರ ಹೊಸ IT ನಿಯಮಗಳನ್ನು ಘೋಶಿಸಿದ್ದು, ಈ ನಿಯಮಗಳು ಕಳೆದ ತಿಂಗಳಿನಿಂದ ಜಾರಿಗೆ ಬಂದಿವೆ. ಹೊಸ ನಿಯಮಗಳ ಅಡಿ Twitter, Facebook, Instagram ಹಾಗೂ WhatsApp ಗಳಂತಹ ದೈತ್ಯ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೆಚ್ಚುವರಿ ಉಪಾಯಗಳನ್ನು ಮಾಡಬೇಕಾಗಲಿದೆ.  ನಿಯಮಗಳ ಭಾಗವಾಗಿ ಈ ಕಂಪನಿಗಳು ಭಾರತದಲ್ಲಿ Interim ChiefCompliance Officer, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಗಳ ನೇಮಕ ಇದರಲ್ಲಿ ಶಾಮೀಲಾಗಿವೆ.

ಇದನ್ನೂ ಓದಿ- Whatsapp Number change : ಹೀಗೆ ಮಾಡಿದರೆ ಸುಲಭವಾಗಿ ಬದಲಾಯಿಸಬಹುದು ವಾಟ್ಸಾಪ್ ನಂಬರ್

ಈ ಪ್ರಮುಖ ಸಾಮಾಹಿಕ ಮಾಧ್ಯಮ ವೇದಿಕೆಗಳಿಗೆ ಹೊಸ ನಿಯಮಗಳ ಅನುಷ್ಠಾನಕ್ಕಾಗಿ ಮೂರು ತಿಂಗಳುಗಳ ಕಾಲಾವಕಾಶ ನೀಡಲಾಗಿತ್ತು. ಯಾವ ಸಾಮಾಜಿಕ ಮಾಧ್ಯಮಗಳ ಅಧಿಕೃತ ಬಳಕೆದಾರರ ಸಂಖ್ಯೆ 50 ಲಕ್ಷಕ್ಕಿಂತ ಹೆಚ್ಚಾಗಿದೆಯೋ ಅಂತಹ ವೇದಿಗೆಗಳನ್ನು ಈ ಶ್ರೇಣಿಯಲ್ಲಿ ಇಡಲಾಗಿದೆ. 

ಇದನ್ನೂ ಓದಿ-WhatsApp:ವಾಟ್ಸಾಪ್‌ನಲ್ಲಿ ನಿಮ್ಮ ರಹಸ್ಯ ಚಾಟ್ ಅನ್ನು ಮರೆಮಾಡಬೇಕೆ? ಈ ಟ್ರಿಕ್ ಒಮ್ಮೆ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News