ಬೆಂಗಳೂರು : ಭಾರತದಲ್ಲಿ ವಂಚನೆಗಳ ಸಂಖ್ಯೆ ಹೆಚ್ಚುತ್ತಿದೆ.ಇದನ್ನು ತಡೆಯಲು ಸರ್ಕಾರವೂ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ.ಬೇಸಿಗೆ ಬಂತೆಂದರೆ ವಿದ್ಯುತ್ ಕಡಿತವಾಗುವ ಆತಂಕ ಎದುರಾಗಿದೆ.ಎಲೆಕ್ಟ್ರಿಸಿಟಿ ಕೆವೈಸಿ ಅಪ್ಡೇಟ್ ಹೆಸರಿನ ಹಗರಣ ಇದೀಗ ಬೆಳಕಿಗೆ ಬಂದಿದೆ.ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) 392 ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ.ಈ ಮೊಬೈಲ್ ಫೋನ್ಗಳನ್ನು ವಿದ್ಯುತ್ KYC ಅಪ್ಡೇಟ್ ಹಗರಣದಲ್ಲಿ ಬಳಸಲಾಗುತ್ತಿತ್ತು.
ವಿದ್ಯುತ್ KYC ಅಪ್ಡೇಟ್ ಹಗರಣ ಹೇಗೆ ಕೆಲಸ ಮಾಡುತ್ತದೆ? :
ಕೆಲ ವಂಚಕರು ವಿದ್ಯುತ್ ಸಂಸ್ಥೆಯ ಅಧಿಕಾರಿಗಳಂತೆ ಬಿಂಬಿಸಿಕೊಂಡು ಎಸ್ಎಂಎಸ್, ವಾಟ್ಸ್ಆ್ಯಪ್ ಮೂಲಕ ಜನರಿಗೆ ಸಂದೇಶ ರವಾನಿಸುತ್ತಿದ್ದಾರೆ. ಈ ನಕಲಿ ಸಂದೇಶಗಳು ಜನರು ತಮ್ಮ KYC ಮಾಹಿತಿಯನ್ನು ಅಪ್ಡೇಟ್ ಮಾಡುವಂತೆ ಕೇಳಿಕೊಳ್ಳುತ್ತವೆ. KYC ಅಪ್ಡೇಟ್ ಮಾಡದೇ ಹೋದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ.ಈ ಸಂದೇಶಗಳು ಸಾಮಾನ್ಯವಾಗಿ ಲಿಂಕ್ಗಳನ್ನು ಒಳಗೊಂಡಿರುತ್ತವೆ. ಅದನ್ನು ಕ್ಲಿಕ್ ಮಾಡಿದರೆ ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿದರೆ ನಿಮಗೆ ಹಾನಿಯಾಗಬಹುದು.ವಂಚಕರು ನಂತರ ಹಣವನ್ನು ಗಳಿಸಲು ಈ ಮಾಹಿತಿಯನ್ನು ಬಳಸುತ್ತಾರೆ.
ಇದನ್ನೂ ಓದಿ : ಮಾರುಕಟ್ಟೆಗೆ ಬಿಡುಗಡೆಯಾಗಲಿದೆ OnePlusನ ಹೊಸ ಫೋನ್! ವಿನ್ಯಾಸ, ಫೀಚರ್ ಎಲ್ಲವೂ ಅದ್ಭುತ
Chakshu ಪೋರ್ಟಲ್ ಸಹಾಯದಿಂದ ಕ್ರಮ :
ಈ ವಂಚಕರನ್ನು ಹಿಡಿಯಲು 'ಚಕ್ಷು'(Chakshu) ಅಪ್ಲಿಕೇಶನ್ ಸರ್ಕಾರಕ್ಕೆ ತುಂಬಾ ಸಹಾಯಕವಾಗಿದೆ. ಇದು ಸರ್ಕಾರಿ ಆ್ಯಪ್ ಆಗಿದ್ದು, ಜನರು ಯಾವುದೇ ಅನುಮಾನಾಸ್ಪದ ಫೋನ್ ಕರೆ ಅಥವಾ ಸಂದೇಶದ ಬಗ್ಗೆ ದೂರುಗಳನ್ನು ಸಲ್ಲಿಸಬಹುದು.ಇತ್ತೀಚೆಗೆ,ಜನರು 'ಚಕ್ಷು'ಅಪ್ಲಿಕೇಶನ್ನಲ್ಲಿ ವಿದ್ಯುತ್ KYC ಅಪ್ಡೇಟ್ ಹಗರಣಕ್ಕೆ ಸಂಬಂಧಿಸಿದ ಅನೇಕ ದೂರುಗಳನ್ನು ದಾಖಲಿಸಿದ್ದಾರೆ. ಈ ದೂರುಗಳನ್ನು ಗಮನಿಸಿ ಸರ್ಕಾರವು 'ಚಕ್ಷು'ಆಪ್ನಲ್ಲಿಯೇ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಬಳಸಿದೆ.ಈ AI ವ್ಯವಸ್ಥೆಯು ಈ ಹಗರಣದಲ್ಲಿ ಭಾಗಿಯಾಗಿರುವ 392 ಮೊಬೈಲ್ ಫೋನ್ಗಳು ಮತ್ತು 31,740 ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಗುರುತಿಸಿದೆ.ಇದರ ನಂತರ, ದೂರಸಂಪರ್ಕ ಇಲಾಖೆ (DoT) ದೇಶಾದ್ಯಂತ ಈ ಮೊಬೈಲ್ ಸಂಖ್ಯೆಗಳು ಮತ್ತು ಫೋನ್ಗಳನ್ನು ನಿರ್ಬಂಧಿಸಲು ಟೆಲಿಕಾಂ ಕಂಪನಿಗಳಿಗೆ ಆದೇಶಿಸಿದೆ.
ವಿದ್ಯುತ್ KYC ಅಪ್ಡೇಟ್ ಹಗರಣವನ್ನು ತಪ್ಪಿಸುವುದು ಹೇಗೆ? :
-ವಿದ್ಯುತ್ ಇಲಾಖೆಯಿಂದ ಎಂದು ಹೇಳಿಕೊಂಡು ಬರುವ ಸಂದೇಶದಲ್ಲಿ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ ಅಟ್ಯಾಚ್ಮೆಂಟ್ ಅನ್ನು ಡೌನ್ಲೋಡ್ ಮಾಡಬೇಡಿ.
-ಸಂದೇಶದಲ್ಲಿ ಬ್ಯಾಂಕ್ ವಿವರಗಳು, OTP ಅಥವಾ ಖಾತೆ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ನೀಡಬೇಡಿ.
- ಸಂದೇಹವಿದ್ದಲ್ಲಿ, ನಿಮ್ಮ ವಿದ್ಯುತ್ ಇಲಾಖೆಯನ್ನು ಅದರ ವೆಬ್ಸೈಟ್ ಅಥವಾ ಫೋನ್ ಸಂಖ್ಯೆಗೆ ನೇರವಾಗಿ ಸಂಪರ್ಕಿಸಿ.
- KYC ನವೀಕರಣಗಳ ಕುರಿತು ಮಾಹಿತಿಯನ್ನು ಪಡೆಯಲು, ನಿಮ್ಮ ವಿದ್ಯುತ್ ಇಲಾಖೆಯ ವೆಬ್ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಪುಟಗಳಿಗೆ ಭೇಟಿ ನೀಡಿ.
- ನಿಮ್ಮ ಆನ್ಲೈನ್ ವಿದ್ಯುತ್ ಬಿಲ್ ಖಾತೆಗೆ ಬಲವಾದ ಪಾಸ್ವರ್ಡ್ ಬಳಸಿ ಟೂ ಫ್ಯಾಕ್ಟರ್ ಅತಂಟಿಫಿಕೆಶನ್ ಆನ್ ಮಾಡಿ.
ಇದನ್ನೂ ಓದಿ : ನಿಮ್ಮ ಸ್ಮಾರ್ಟ್ಫೋನ್ನ ಬ್ಯಾಟರಿ ಊದಿಕೊಂಡಿದೆಯೇ? ಎಚ್ಚರ! ಎಚ್ಚರ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.