Side Effects of Mobiles: ಮಲಗುವಾಗ ಫೋನ್‌ ಬಳಸ್ತೀರಾ? ಇದರಿಂದಾಗುವ ಸಮಸ್ಯೆಗಳೇನು ಗೊತ್ತಾ?

Side Effects of Mobiles: ಮೊಬೈಲ್ ಬಳಕೆದಾರರಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಹೆಚ್ಚು ಕಡಿಮೆ ದಿನವಿಡೀ ಮೊಬೈಲ್ ಬಳಸುವವರ ಕಣ್ಣುಗಳು ಮಾತ್ರವಲ್ಲ ತ್ವಚೆಗೂ ಗಂಭೀರ ಹಾನಿಯಾಗುತ್ತದೆ.  

Written by - Bhavishya Shetty | Last Updated : Aug 19, 2024, 08:08 PM IST
    • ಮೊಬೈಲ್ ಬಳಕೆದಾರರಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.
    • ವಿಟಮಿನ್ ಇ ಹೊಂದಿರುವ ಲೋಷನ್ ಅಥವಾ ಸೀರಮ್ ಅನ್ನು ಬಳಸಬಹುದು
    • ತಜ್ಞರು ಬಿಸಿಲಿನಲ್ಲಿ ಹೋಗುವ ಮೊದಲು ಸನ್‌ಸ್ಕ್ರೀನ್ ಅನ್ನು ಹಚ್ಚಬೇಕೆಂದು ಸೂಚಿಸುತ್ತಾರೆ.
Side Effects of Mobiles: ಮಲಗುವಾಗ ಫೋನ್‌ ಬಳಸ್ತೀರಾ? ಇದರಿಂದಾಗುವ ಸಮಸ್ಯೆಗಳೇನು ಗೊತ್ತಾ?  title=
File Photo

Side Effects of Mobiles: ಇಂದಿನ ಕಾಲದಲ್ಲಿ ಚರ್ಮಕ್ಕೆ ಹೆಚ್ಚಿನ ಕಾಳಜಿ ಅಗತ್ಯ. ಒಂದೆಡೆ ಮಾಲಿನ್ಯ.. ಇನ್ನೊಂದೆಡೆ ಎಲೆಕ್ಟ್ರಿಕ್ ಗ್ಯಾಜೆಟ್ʼಗಳಿಂದ ಬರುವ ಹಾನಿಕಾರಕ ಕಿರಣಗಳು ತ್ವಚೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ತಜ್ಞರು ಬಿಸಿಲಿನಲ್ಲಿ ಹೋಗುವ ಮೊದಲು ಸನ್‌ಸ್ಕ್ರೀನ್ ಅನ್ನು ಹಚ್ಚಬೇಕೆಂದು ಸೂಚಿಸುತ್ತಾರೆ.

ಇದನ್ನೂ ಓದಿ: ಬೇರೊಬ್ಬಳ ಜೊತೆ ಹಾರ್ದಿಕ್‌ ಪಾಂಡ್ಯ ಡೇಟಿಂಗ್... ಸೀಕ್ರೆಟ್‌ ಬಿಚ್ಚಿಟ್ಟ ʼಟ್ಯಾಟೂʼ

ಆದರೆ ಮೊಬೈಲ್ ಬಳಕೆದಾರರಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಹೆಚ್ಚು ಕಡಿಮೆ ದಿನವಿಡೀ ಮೊಬೈಲ್ ಬಳಸುವವರ ಕಣ್ಣುಗಳು ಮಾತ್ರವಲ್ಲ ತ್ವಚೆಗೂ ಗಂಭೀರ ಹಾನಿಯಾಗುತ್ತದೆ. ತಜ್ಞರ ಪ್ರಕಾರ, ಮೊಬೈಲ್ ಮಾತ್ರವಲ್ಲ, ಕಂಪ್ಯೂಟರ್, ಲ್ಯಾಪ್‌ಟಾಪ್‌'ನಂತಹ ಡಿಜಿಟಲ್ ಸಾಧನಗಳಿಂದ ಹೊರಸೂಸುವ ಕಿರಣಗಳು ಚರ್ಮವನ್ನು ಹಾನಿಗೊಳಿಸುತ್ತವೆ.

ಈ ಬೆಳಕು ಚರ್ಮದಲ್ಲಿರುವ ಪ್ರೋಟೀನ್, ಕಾಲಜನ್ ಮತ್ತು ಫೈಬರ್ ಗಳನ್ನು ನಾಶಪಡಿಸುತ್ತದೆ. ಚರ್ಮದಲ್ಲಿ 'ಮೆಲನಿನ್' ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ವಿವಿಧ ಚರ್ಮದ ಸಮಸ್ಯೆಗಳು ಉದ್ಭವಿಸುತ್ತವೆ. ನಾಲ್ಕು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಪರದೆಯ ನಿರಂತರ ಬಳಕೆಯು 'ಮೆಲನಿನ್' ಸ್ರವಿಸುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಸೊಳ್ಳೆ ಕಾಟದಿಂದ ನಿದ್ದೆನೇ ಬರ್ತಿಲ್ವಾ? ಚಿಂತೆ ಬೇಡ... ಈ ಎಲೆಯನ್ನು ಮಲಗುವಾಗ ದಿಂಬಿನಡಿ ಇಡಿ: ಒಂದೇ ಒಂದು ಸೊಳ್ಳೆ ಕೂಡ ನಿಮ್ಮ ಹತ್ತಿರ ಸುಳಿಯಲ್ಲ

ಈ ಸಮಸ್ಯೆಯನ್ನು ಹೋಗಲಾಡಿಸಲು ವಿಟಮಿನ್ ಸಿ, ವಿಟಮಿನ್ ಇ ಹೊಂದಿರುವ ಲೋಷನ್ ಅಥವಾ ಸೀರಮ್ ಅನ್ನು ಬಳಸಬಹುದು. ಇದು ಒಳಗಿನಿಂದ ಚರ್ಮವನ್ನು ಪೋಷಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News