Smart Toilet: ಈ ಟಾಯ್ಲೆಟ್ ನಲ್ಲಿ ಯೂರಿನ್ ಟೆಸ್ಟ್ ಆಗುವುದಲ್ಲದೆ, ರೋಗಗಳ ಪತ್ತೆಯೂ ಸಾಧ್ಯವಾಗುತ್ತದೆಯಂತೆ

Smart Toilet: ತಮ್ಮ ಸ್ಮಾರ್ಟ್ ಟಾಯ್ಲೆಟ್‌ಗಳು ಹೃದ್ರೋಗವನ್ನು ಮೇಲ್ವಿಚಾರಣೆ ಮಾಡುವುದಲ್ಲದೆ, ಮೂತ್ರದ ಮಾದರಿಗಳಿಂದ ಕ್ಯಾನ್ಸರ್ ಮತ್ತು ಮಧುಮೇಹದ ಲಕ್ಷಣಗಳನ್ನು ಪತ್ತೆ ಮಾಡುತ್ತದೆ ಎಂದು ಕೆಲವು ಕಂಪನಿಗಳು ಹೇಳಿವೆ. 

Written by - Ranjitha R K | Last Updated : Jul 13, 2023, 02:23 PM IST
  • ಸ್ಮಾರ್ಟ್ ಟಾಯ್ಲೆಟ್ ತಯಾರಿಸಿರುವುದಾಗಿ ಚೀನಾದ ಕಂಪನಿಗಳು ಹೇಳಿಕೊಂಡಿವೆ.
  • ಪಾಥ್‌ಲ್ಯಾಬ್‌ನಂತಹ ಮೂತ್ರದ ಮಾದರಿಗಳನ್ನು ನಿಖರವಾಗಿ ಪರೀಕ್ಷಿಸಬಹುದು
  • ಈ ರೋಗಗಳನ್ನು ಪತ್ತೆ ಹಚ್ಚುತ್ತದೆಯಂತೆ
Smart Toilet: ಈ ಟಾಯ್ಲೆಟ್ ನಲ್ಲಿ ಯೂರಿನ್ ಟೆಸ್ಟ್ ಆಗುವುದಲ್ಲದೆ, ರೋಗಗಳ ಪತ್ತೆಯೂ ಸಾಧ್ಯವಾಗುತ್ತದೆಯಂತೆ  title=

Smart Toilet : ತಂತ್ರಜ್ಞಾನದ ವಿಷಯದಲ್ಲಿ ಚೀನಾ ಅಮೆರಿಕ ಮತ್ತು ಯುರೋಪ್ ಅನ್ನು ಹಿಂದೆ ಸರಿಸುತ್ತಿದೆ. ಮಾನವ ತ್ಯಾಜ್ಯವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಮರ್ಥ್ಯವಿರುವ ಸ್ಮಾರ್ಟ್ ಟಾಯ್ಲೆಟ್ ತಯಾರಿಸಿರುವುದಾಗಿ ಚೀನಾದ ಕಂಪನಿಗಳು ಹೇಳಿಕೊಂಡಿವೆ. ಇಂತಹ ಶೌಚಾಲಯಗಳನ್ನು ತಯಾರಿಸುವ ತಂಡದ ಪ್ರಕಾರ, ಸ್ಮಾರ್ಟ್ ಟಾಯ್ಲೆಟ್‌ಗಳು ಹೈಟೆಕ್ ಸೆನ್ಸರ್‌ಗಳನ್ನು ಹೊಂದಿದ್ದು, ಪಾಥ್‌ಲ್ಯಾಬ್‌ನಂತಹ ಮೂತ್ರದ ಮಾದರಿಗಳನ್ನು ನಿಖರವಾಗಿ ಪರೀಕ್ಷಿಸಬಹುದು. ಬಳಕೆದಾರರು ತಮ್ಮ ಮೊಬೈಲ್ ಫೋನ್‌ಗಳಲ್ಲಿನ ಅಪ್ಲಿಕೇಶನ್‌ನಲ್ಲಿ ಅದರ ವರದಿಯನ್ನು ನೋಡಬಹುದು. ಈ ವರದಿಯ ಆಧಾರದ ಮೇಲೆ ಅವರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಲಹೆಗಳನ್ನು ಪಡೆದುಕೊಳ್ಳಬಹುದು. 

ಈ ರೋಗಗಳನ್ನು ಪತ್ತೆ ಹಚ್ಚುತ್ತದೆಯಂತೆ :  
ತಮ್ಮ ಸ್ಮಾರ್ಟ್ ಟಾಯ್ಲೆಟ್‌ಗಳು ಹೃದ್ರೋಗವನ್ನು ಮೇಲ್ವಿಚಾರಣೆ ಮಾಡುವುದಲ್ಲದೆ, ಮೂತ್ರದ ಮಾದರಿಗಳಿಂದ ಕ್ಯಾನ್ಸರ್ ಮತ್ತು ಮಧುಮೇಹದ ಲಕ್ಷಣಗಳನ್ನು ಪತ್ತೆ ಮಾಡುತ್ತದೆ ಎಂದು ಕೆಲವು ಕಂಪನಿಗಳು ಹೇಳಿವೆ. ಕಂಪನಿಯ ಪ್ರಕಾರ, 'ಸ್ಮಾರ್ಟ್ ಟಾಯ್ಲೆಟ್ ಅನ್ನು ಮನೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಎಲ್ಲಿ ಬೇಕಾದರೂ ಬಳಸಬಹುದು. ಇದು ಬಳಸಲು ಸುಲಭ ಮತ್ತು ಅದರ ವರದಿ ಕೂಡಾ ಕಡಿಮೆ ಸಮಯದಲ್ಲಿ ಬರುತ್ತದೆ.

ಇದನ್ನೂ ಓದಿ : BSNL ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್ !

ಈ ಸ್ಮಾರ್ಟ್ ಶೌಚಾಲಯಗಳು ಆರೋಗ್ಯ ಸಂಬಂಧಿತ ಮಾಹಿತಿಯನ್ನು ಒದಗಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಸ್ಮಾರ್ಟ್ ಟಾಯ್ಲೆಟ್‌ಗಳು ಬಳಕೆದಾರರ  ಅಭ್ಯಾಸಗಳನ್ನು ಬದಲಾಯಿಸದೆ ಡೇಟಾವನ್ನು ಸಂಗ್ರಹಿಸಬಹುದು. ಮಾನವ ಚರ್ಮದ ಸಂಪರ್ಕಕ್ಕೆ ಬಂದ ತಕ್ಷಣ ಇದು  ಡೇಟಾ ರೀಡ್ ಮಾಡಲು ಆರಂಭಿಸುತ್ತದೆ. 

ಇಂತಹ ಶೌಚಾಲಯಗಳು ಈಗಾಗಲೇ ಚೀನಾದಲ್ಲಿ  ಬಳಕೆಯಲ್ಲಿವೆ. ಮತ್ತೊಂದೆಡೆ, ಆಡಿಟಿ ಸೆಂಟ್ರಲ್ ನ್ಯೂಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಚೀನಾದ ರಾಜಧಾನಿ ಬೀಜಿಂಗ್ ಸೇರಿದಂತೆ ಅನೇಕ ನಗರಗಳಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಮಾರ್ಟ್ ಮೂತ್ರಾಲಯಗಳನ್ನು ಸ್ಥಾಪಿಸಲಾಗಿದೆ.  ಇಲ್ಲಿ  ಮೂತ್ರ ವಿಸರ್ಜನೆ ಮಾಡುವಾಗ ಯಾರಾದರೂ ಬೇಕಾದರೂ ಮೂತ್ರವನ್ನು ಪರೀಕ್ಷಿಸಿಕೊಳ್ಳಬಹುದು. ಹೈಟೆಕ್ ಮೂತ್ರಾಲಯವು ಡಿಜಿಟಲ್ ಡಿಸ್ಪ್ಲೇ ಮತ್ತು ಬಿಲ್ಟ್-ಇನ್ ಪಾವತಿ ವಿಧಾನವನ್ನು ಹೊಂದಿದೆ.

ಇದನ್ನೂ ಓದಿ : ಕೇವಲ 10 ಸಾವಿರ ರೂಪಾಯಿಗೆ Smart TV!ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ 4K Google ಟಿವಿ

ಈ ವರ್ಷ, USAನ ವೇಗಾಸ್‌ನಲ್ಲಿ ನಡೆದ CES ಟೆಕ್ ಶೋನಲ್ಲಿ ಅನೇಕ ಆರೋಗ್ಯ ಗ್ಯಾಜೆಟ್‌ಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲಿ ಫ್ರೆಂಚ್ ಸಂಸ್ಥೆ 'ವಿಥಿಂಗ್ಸ್'  ಇಂಥಹ  ಸ್ಮಾರ್ಟ್ ಶೌಚಾಲಯವನ್ನು ಪ್ರಾರಂಭಿಸಿದೆ. ಇದು ಮಹಿಳೆಯರ ಮೂತ್ರದ ಮಾದರಿಗಳಿಂದ ಗರ್ಭಾವಸ್ಥೆಯನ್ನು ಪತ್ತೆಹಚ್ಚುವಲ್ಲಿ ಪರಿಣಾಮಕಾರಿಯಾಗುವುದರ ಜೊತೆಗೆ ಪಿರಿಯಡ್ಸ್ ಸಮಯದಲ್ಲಿ ಆರೋಗ್ಯ ಸಲಹೆಯನ್ನು ನೀಡುವಲ್ಲಿ ಪರಿಣಾಮಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News