Solar Stove: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಎಲ್ಪಿಜಿ ದರಗಳು ಕೂಡ ಸಾವಿರ ರೂ.ಗಳ ಗಡಿ ದಾಟಿದ್ದು ಜನರು ಕಂಗಾಲಾಗಿದ್ದಾರೆ. ಗ್ಯಾಸ್ ಸಿಲಿಂಡರ್ಗಳನ್ನು ಮಿತವಾಗಿ ಬಳಸುವ ಸಲುವಾಗಿ ಕೆಲವರು ಇಂಡಕ್ಷನ್ ಸ್ಟವ್ ಬಳಸುತ್ತಾರೆ. ಆದರೆ, ಇದರಿಂದ ವಿದ್ಯುತ್ ಬಿಲ್ ದರ ಹೆಚ್ಚಾಗುತ್ತದೆ. ಆದರೆ, ಈ ದುಬಾರಿ ದುನಿಯಾದಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡುವ ಮೂಲಕ ಜೀವನಪರ್ಯಂತ ಉಚಿತವಾಗಿ ಅಡುಗೆ ತಯಾರಿಸಬಹುದು. ಇದಕ್ಕಾಗಿ, ನಿಮಗೆ ಗ್ಯಾಸ್ ಸಿಲಿಂಡರ್ ಆಗಲಿ ಅಥವಾ ವಿದ್ಯುತ್ ಒಲೆಯಾಗಲಿ ಅಗತ್ಯವಿರುವುದಿಲ್ಲ.
ಹೌದು, ಇದಕ್ಕಾಗಿ ಸರ್ಕಾರವು ವಿಶೇಷ ತಂತ್ರಜ್ಞಾನವನ್ನು ಪರಿಚಯಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಸೂರ್ಯ ನೂತನ್ ಹೆಸರಿನ ಸೋಲಾರ್ ಸ್ಟವ್ ಅನ್ನು ಪರಿಚಯಿಸಿದೆ. ಹಳೆಯ ಸೋಲಾರ್ ಸ್ಟವ್ಗಿಂತ ಸಂಪೂರ್ಣವಾಗಿ ಭಿನ್ನವಾಗಿರುವ ಈ ಸೋಲಾರ್ ಸ್ಟವ್ ಅನ್ನು ಛಾವಣಿಯ ಮೇಲೆ ಅಥವಾ ಬಿಸಿಲಿನಲ್ಲಿ ಇಡಬೇಕಾದ ಅಗತ್ಯವಿಲ್ಲ. ಇದನ್ನು ಅಡುಗೆ ಮನೆಯಲ್ಲಿಯೇ ಸುಲಭವಾಗಿ ಅಳವಡಿಸಬಹುದು. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಇದು ಸಾಮಾನ್ಯ ಸ್ಟವ್ ನಂತೆಯೇ ಕಾಣುತ್ತದೆ. ನೀವು ಕೇವಲ 12 ಸಾವಿರ ರೂಪಾಯಿಗಳನ್ನು ಒಮ್ಮೆ ಖರ್ಚು ಮಾಡಿ ಸೌರ ಒಲೆಯನ್ನು ಖರೀದಿಸಿದರೆ ಸಾಕು ಜೀವನದುದ್ದಕ್ಕೂ ಉಚಿತವಾಗಿ ಆಹಾರ ತಯಾರಿಸಬಹುದು.
ಇದನ್ನೂ ಓದಿ- WhatsApp New Scam: ವಾಟ್ಸಾಪ್ ಗ್ರಾಹಕರೇ ಗಮನಿಸಿ, ಹ್ಯಾಕರ್ಗಳ ಇಂತಹ ವಂಚನೆ ಬಗ್ಗೆ ಇರಲಿ ಎಚ್ಚರ!
ಸೂರ್ಯ ನೂತನ್ ಸೋಲಾರ್ ಸ್ಟವ್ ವಿಶೇಷತೆಗಳು:
>> ಸೂರ್ಯ ನೂತನ್ ಸೋಲಾರ್ ಸ್ಟೌವ್ ಇತರ ಸೌರ ಒಲೆಗಳಿಗಿಂತ ಭಿನ್ನವಾಗಿದೆ.
>> ಈ ಒಲೆಯಲ್ಲಿ ಎರಡು ಘಟಕಗಳು ಲಭ್ಯವಿರುತ್ತದೆ.
>> ಇದರ ಒಂದು ಘಟಕವನ್ನು ಅಡುಗೆ ಮನೆಯಲ್ಲಿ ಅಳವಡಿಸಲಾಗುವುದು.
>> ಇದರ ಇನ್ನೊಂದು ಘಟಕವನ್ನು ಬಿಸಿಲಿನಲ್ಲಿ ಇಡಲಾಗುವುದು.
>> ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದನ್ನು ನೀವು ರಾತ್ರಿ ವೇಳೆಯೂ ಬಳಸಬಹುದು.
ಇದನ್ನೂ ಓದಿ- ಜನವರಿ 1 ರಿಂದ ಬಂದ್ ಆಗಲಿವೆ ಎಲೆಕ್ಟ್ರಿಕ್ ವಾಟರ್ ಹೀಟರ್ಗಳು: ಯಾಕ್ ಗೊತ್ತಾ?
ಸೂರ್ಯ ನೂತನ್ ಸ್ಟವ್ ಬೆಲೆ:
ಸೂರ್ಯ ನೂತನ್ ಸೋಲಾರ್ ಸ್ಟವ್ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು ಇದರ ಒಂದರ ಬೆಲೆ 12 ಸಾವಿರ ರೂಪಾಯಿಗಳು. ಇದರ ಟಾಪ್ ವೆರಿಯಂಟ್ ಬೆಲೆ 23 ಸಾವಿರ ರೂಪಾಯಿ. ಆದಾಗ್ಯೂ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಇದನ್ನು ಇನ್ನೂ ಮಾರುಕಟ್ಟೆಗೆ ಪರಿಚಯಿಸಿಲ್ಲ. ಶೀಘ್ರದಲ್ಲೇ ಇಂಡಿಯನ್ ಆಯಿಲ್ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಪಂಪ್ನಿಂದ ಇದನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.